ಅಬ್ಬಾ! 10 ಕೆ.ಜಿ.ಗಿಂತ ಹೆಚ್ಚು ತೂಕ ಇಳಿಸಿದ ಬೆಂಗಳೂರಿನ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ, ಚಿತ್ರಗಳಿವೆ

KSRP ಎಡಿಜಿಪಿ ಅಲೋಕ್ ಕುಮಾರ್, ಪೊಲೀಸರ ಹೆಲ್ತ್ ಮಾನಿಟರಿಂಗ್ಗೆ ಕವಾಯತು ನಡೆಸಿದ್ದೇವೆ. ಆರೋಗ್ಯ ಸಮಸ್ಯೆಯಿಂದ ಸಾಕಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ. 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ತೂಕ ಇಳಿಸಿದ್ದಾರೆ. -ಅಲೋಕ್ ಕುಮಾರ್

ಅಬ್ಬಾ! 10 ಕೆ.ಜಿ.ಗಿಂತ ಹೆಚ್ಚು ತೂಕ ಇಳಿಸಿದ ಬೆಂಗಳೂರಿನ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ, ಚಿತ್ರಗಳಿವೆ
10 ಕೆಜಿಗಿಂತ ಹೆಚ್ಚು ತೂಕ ಇಳಿಸಿದ ಬೆಂಗಳೂರಿನ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ

ಬೆಂಗಳೂರು: ಕೊರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ಇಂದು ಪೊಲೀಸ್ ಸೇವಾ ಕವಾಯತು ಯಶಸ್ವಿಯಾಗಿ ನೆರವೇರಿದೆ. ಈ ವೇಳೆ ಎಡಿಜಿಪಿ ಅಲೋಕ್ ಕುಮಾರ್, ಕೆಎಸ್ಆರ್ಪಿ ಸಿಬ್ಬಂದಿಯ ಕುಂದುಕೊರತೆಗಳ ಪರಿಶೀಲನೆ ನಡೆಸಿದರು. ಹೆಲ್ತ್ ಮಾನಿಟರಿಂಗ್ ಸಿಸ್ಟಂ ಮತ್ತು ವೇಯ್ಟ್ ಮಾನಿಟರಿಂಗ್ ಸಿಸ್ಟಂ ಅನುಷ್ಠಾನದ ಕುರಿತು ಪರಿವೀಕ್ಷಣೆ ಮಾಡಿದ್ರು.

ಈ ಹಿಂದೆ ಅಲೋಕ್ ಕುಮಾರ್ ಪೊಲೀಸ್ ಸಿಬ್ಬಂದಿಯನ್ನು ನೋಡಿ ಅವರಿಗೆ ಫಿಡ್ನೆಸ್ ಮಂತ್ರ ಹೇಳಿಕೊಟ್ಟಿದ್ದರು. ಅದಿನಿಂದ ಫಿಟ್ನೆಸ್ ಇಲ್ಲದ ಸಿಬ್ಬಂದಿಯನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಅವರಿಗೆ ಪುಡ್ ಚಾರ್ಟ್ ನೀಡಿ ಫಿಟ್ ಮಾಡಲಾಗುತ್ತೆ. ಎ ಗುಂಪಿನಲ್ಲಿ ಆರೋಗ್ಯ ಸಮಸ್ಯೆ ಇಲ್ಲದೆ ಇರುವವರು. ಬಿ ಗುಂಪಿನಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆ ಇರುವವರು ಹಾಗೂ ಸಿ ಎಂದರೆ ಡಿ ಅಡಿಕ್ಷನ್ ಇರುವವರು. ಈ ರೀತಿ ಮೂರು ಗುಂಪು ವಿಂಗಡಿಸಿ ಅವರಿಗೆ ಫಿಟ್ ಆಗಲು ಸಹಾಯ ಮಾಡಲಾಗುತ್ತೆ. ಸಿಬ್ಬಂದಿಯ ಹೈಟ್ ನಂತೆ ವೈಟ್ ಕಾಪಾಡಿಕೊಳ್ಳಲು ಸಹಾಯ ಮಾಡಲಾಗುತ್ತೆ. ಬಳಿಕ ಸೇವಾ ಕವಾಯತು ನಡೆಸಿ ತೂಕ ಇಳಿಸಿದ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಗುತ್ತೆ. ಅದರಂತೆ ಇಂದು 4 ಕೆಎಸ್ಆರ್ಪಿ ಪಡೆಗಳ ಸೇವಾ ಕವಾಯತು ನಡೆಯಿತು. ಹಾಗೂ 10 ಕೆಜಿಗಿಂತ ಹೆಚ್ಚು ತೂಕ ಇಳಿಸಿದ ಸುಮಾರು 400 ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.

ಇನ್ನು ಈ ಬಗ್ಗೆ ಮಾತನಾಡಿದ KSRP ಎಡಿಜಿಪಿ ಅಲೋಕ್ ಕುಮಾರ್, ಪೊಲೀಸರ ಹೆಲ್ತ್ ಮಾನಿಟರಿಂಗ್ಗೆ ಕವಾಯತು ನಡೆಸಿದ್ದೇವೆ. ಆರೋಗ್ಯ ಸಮಸ್ಯೆಯಿಂದ ಸಾಕಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ. 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ತೂಕ ಇಳಿಸಿದ್ದಾರೆ. 100 ಸಿಬ್ಬಂದಿ ಡಿ ಅಡಿಕ್ಷನ್ ಸೆಂಟರ್ನಲ್ಲಿ ಸಂಪೂರ್ಣವಾಗಿ ಮದ್ಯವ್ಯಸನ ಬಿಟ್ಟಿದ್ದಾರೆ. ಸಿಬ್ಬಂದಿ ಆರೋಗ್ಯದ ಸಲುವಾಗಿ ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದರು.

Police seva kavayat

ಪೊಲೀಸ್ ಸೇವಾ ಕವಾಯತು

Police seva kavayat

ಎಡಿಜಿಪಿ ಅಲೋಕ್ ಕುಮಾರ್

Police seva kavayat

ಪೊಲೀಸ್ ಸೇವಾ ಕವಾಯತು

ಇದನ್ನೂ ಓದಿ: ಕ್ರಿಮಿನಲ್​ಗೆ ಕೇಕ್ ತಿನ್ನಿಸಿದ ಮುಂಬೈ ಪೊಲೀಸ್ ಇನ್ಸ್​ಪೆಕ್ಟರ್​​; ವಿಡಿಯೋದಲ್ಲಿ ದೃಶ್ಯ ಸೆರೆ, ತನಿಖೆಗೆ ಆದೇಶ