Corona Vaccination: ಕೊರೊನಾ ಲಸಿಕಾ ಕೇಂದ್ರದಲ್ಲಿ ಪ್ರತ್ಯಕ್ಷವಾಯ್ತು ಡೈನೋಸಾರ್!
ಕೊರೊನಾ ವಾರಿಯರ್ಸ್ಗೆ ಜೋಷ್ ಹೆಚ್ಚಿಸುವ ಸಲುವಾಗಿ ವ್ಯಕ್ತಿಯೊಬ್ಬ ಮಾಡಿದ ಐಡಿಯಾ ನೋಡಿ ಕೊರೊನಾ ಫ್ರಂಟ್ ಲೈನ್ ಕಾರ್ಯಕರ್ತರು ಕೂಡಾ ಖುಷಿಯಾಗಿದ್ದಾರೆ.
ಜಗತ್ತಿನೆಲ್ಲೆಡೆ ಕೊರೊನಾ ಲಸಿಕೆ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಿ ನಡೆಸಲಾಗುತ್ತಿದೆ. ಹಲವೆಡೆ ಜನರ ಗಮನ ಸೆಳೆಯಲಿಕ್ಕಾಗಿ ಕೊರೊನಾ ಲಸಿಕಾ ಕೇಂದ್ರಗಳಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಲಾಗಿದೆ. ಇಲ್ಲೊಂದೆಡೆ ಸ್ವತಃ ಡೈನೋಸಾರ್ ಅನ್ನೇ ಕೊರೊನಾ ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿದೆ. ಈ ಸುದ್ದಿ ವಿಚಿತ್ರವೆನಿಸಿದರೂ ನಿಜ ಮಲೇಷ್ಯಾದ ಕೊರೊನಾ ಲಸಿಕೆ ಕೇಂದ್ರವೊಂದರಲ್ಲಿ ಡೈನೋಸಾರ್ ವೇಷಧಾರಿ ಓಡಾಡಿದ್ದು, ಅದೀಗ ಭಾರೀ ಸುದ್ದಿ ಮಾಡುತ್ತಿದೆ.
ವ್ಯಾಕ್ಸಿನೇಷನ್ ಸೆಂಟರ್ನಲ್ಲಿ ಇದ್ದಕ್ಕಿದ್ದ ಹಾಗೆ ಡೈನೋಸಾರ್ ಪ್ರತ್ಯಕ್ಷವಾದ್ರೆ ಏನು ಮಾಡಬೇಕು. ಯಾರು ಏನು ಮಾಡ್ತಾರೋ ಗೊತ್ತಿಲ್ಲ ಆದ್ರೆ ಮಲೇಷ್ಯಾದಲ್ಲಿ ಮಾತ್ರ ಜನ ಖುಷಿಯಿಂದ ಕುಣಿದಾಡಿದ್ದಾರೆ. ಡೈನೋಸಾರ್ ಜತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಕೊರೊನಾ ವಾರಿಯರ್ಸ್ಗೆ ಜೋಷ್ ಹೆಚ್ಚಿಸುವ ಸಲುವಾಗಿ ವ್ಯಕ್ತಿಯೊಬ್ಬ ಮಾಡಿದ ಐಡಿಯಾ ನೋಡಿ ಕೊರೊನಾ ಫ್ರಂಟ್ ಲೈನ್ ಕಾರ್ಯಕರ್ತರು ಕೂಡಾ ಖುಷಿಯಾಗಿದ್ದಾರೆ.
ಇದನ್ನೂ ಓದಿ:
ಕೊರೊನಾ ಲಸಿಕೆ ಪಡೆದು ಕನ್ನಡ ಮಾತ್ರೆ ನುಂಗಿದ್ದೀರಾ? ಆ ಇ ಮಾತ್ರೆಯ ಒಳಗುಟ್ಟು ಇಲ್ಲಿದೆ ನೋಡಿ