ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?

ತಿರುವನಂತಪುರಂ: ಕಳೆದ ಕೆಲವು ತಿಂಗಳ ಹಿಂದೆ ಪಟಾಕಿ ತುಂಬಿದ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ್ದ ಮನಕಲುಕುವ ಘಟನೆ ಕೇರಳದಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್​ 10 ರಂದು ಕಾಡುಪ್ರಾಣಿಯ ಮಾಂಸವನ್ನು ಕೆಲವರು ಸೇವಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರು ಬೇಟೆಗಾರರನ್ನು ಬಂಧಿಸಿದ್ದರು. ಬಂಧಿತ ಬೇಟೆಗಾರರನ್ನು ಅಬು, ಮುಹಮ್ಮದ್​ ಅನ್ಸಿಫ್​, ಮುಹಮ್ಮದ್​ ಬುಸ್ಥಾನ್​, ಸುಹೇಲ್​ ಮತ್ತು ಆಶಿಖ್ […]

ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 20, 2020 | 11:51 AM

ತಿರುವನಂತಪುರಂ: ಕಳೆದ ಕೆಲವು ತಿಂಗಳ ಹಿಂದೆ ಪಟಾಕಿ ತುಂಬಿದ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ್ದ ಮನಕಲುಕುವ ಘಟನೆ ಕೇರಳದಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಆಗಸ್ಟ್​ 10 ರಂದು ಕಾಡುಪ್ರಾಣಿಯ ಮಾಂಸವನ್ನು ಕೆಲವರು ಸೇವಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರು ಬೇಟೆಗಾರರನ್ನು ಬಂಧಿಸಿದ್ದರು. ಬಂಧಿತ ಬೇಟೆಗಾರರನ್ನು ಅಬು, ಮುಹಮ್ಮದ್​ ಅನ್ಸಿಫ್​, ಮುಹಮ್ಮದ್​ ಬುಸ್ಥಾನ್​, ಸುಹೇಲ್​ ಮತ್ತು ಆಶಿಖ್ ಎಂದು ಗುರುತಿಸಲಾಗಿದೆ.

ಬಂಧಿತರ ವಿಚಾರಣೆ ವೇಳೆ ಆರೋಪಿಗಳು ಕಾಡೆಮ್ಮೆಯೊಂದನ್ನು ಪಂಚಾ ಅರಣ್ಯದಲ್ಲಿ ಬೇಟೆಯಾಡಿದ್ದು ಅದರ ಮಾಂಸವನ್ನು ತೆಗೆದುಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ. ಇನ್ನು ಬೇಟೆಯಾಡಿದ್ದ ಜಾಗಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಬೇಟೆಯಾದ ಕಾಡೆಮ್ಮೆ ಗರ್ಭಿಣಿಯಾಗಿತ್ತು ಎಂದು ಅದರ ಕಳೆಬರದ ಪರಿಶೀಲನೆ ವೇಳೆ ಗೊತ್ತಾಗಿದೆ. ಈ ಮಾಹಿತಿಯನ್ನು ಬಂಧಿತರು ವಿಚಾರಣೆ ವೇಳೆ ಸಹ ಒಪ್ಪಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕೇಸ್​ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಬಂಧಿತರ ಮನೆಯಿಂದ ಕಾಡೆಮ್ಮೆಯ ಮಾಂಸ ಹಾಗೂ ಒಂದು ದೇಸಿ ಕೋವಿ ಹಾಗೂ ಇತರೆ ಮಾರಕಾಸ್ತ್ರಗಳನ್ನ ಸಹ ವಶಪಡಿಸಿಕೊಂಡಿದ್ದಾರೆ. ಒಟ್ನಲ್ಲಿ, ಮಾಂಸದ ಆಸೆಗೆ ಬಿದ್ದು ಬಸುರಿ ಎಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು ವಿಚಾರಣೆ ವೇಳೆ ನಾವು ದೇಹ ಬಗಿಯುವಾಗ ಒಳಗೆ ಕರುವಿನ ಕಳೆಬರ ನೋಡಿ ಅದನ್ನು ಮುಟ್ಟಲಿಲ್ಲ ಎಂದರಂತೆ. ಆದರೆ, ಏನು ಪ್ರಯೋಜನ ಕಾಡೆಮ್ಮೆಯ ಕೊರಳು ಹಿಸುಕಿ ಕೊಂದರೆ ಅದರ ಕರುಳಬಳ್ಳಿ ಬದುಕುವುದೇ?

ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ರೋಚಕ 

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ