‘Legion of Merit’ ಅಮೆರಿಕ-ಭಾರತ ಸಂಬಂಧ ಹೆಚ್ಚಿಸಿದ್ದಕ್ಕಾಗಿ ಮೋದಿಗೆ ಗೌರವ..

ಯುಎಸ್-ಇಂಡಿಯಾ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿನ ನಾಯಕತ್ವಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೀಜನ್ ಆಫ್ ಮೆರಿಟ್ ಅನ್ನು ಪ್ರಸ್ತುತಪಡಿಸಿದರು.

Legion of Merit ಅಮೆರಿಕ-ಭಾರತ ಸಂಬಂಧ ಹೆಚ್ಚಿಸಿದ್ದಕ್ಕಾಗಿ ಮೋದಿಗೆ ಗೌರವ..
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ
Edited By:

Updated on: Dec 22, 2020 | 9:45 AM

ದೆಹಲಿ: ಉಭಯ ದೇಶಗಳ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿ ಮತ್ತು ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಮೋದಿ ಅವರ ನಾಯಕತ್ವ ಅಪಾರ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದರು.

ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರು ಪ್ರಧಾನಿ ಮೋದಿ ಪರವಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ ಬ್ರಿಯನ್ ಅವರಿಂದ ಪ್ರಶಸ್ತಿಯನ್ನು ಶ್ವೇತಭವನದಲ್ಲಿ ಸ್ವೀಕರಿಸಿದರು.

ಈ ಬಗ್ಗೆ ರಾಬರ್ಟ್ ಒ ಬ್ರಿಯನ್ ಟ್ವೀಟ್ ಮಾಡಿದ್ದು, ಅಧ್ಯಕ್ಷ ಟ್ರಂಪ್ “ಯುಎಸ್-ಇಂಡಿಯಾ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿನ ನಾಯಕತ್ವಕ್ಕಾಗಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೀಜನ್ ಆಫ್ ಮೆರಿಟ್ ಅನ್ನು ಪ್ರಸ್ತುತಪಡಿಸಿದರು” ಎಂದು ಬರೆದುಕೊಂಡಿದ್ದಾರೆ.

ಪಿಎಂ ಮೋದಿಯವರಿಗೆ ಲೀಜನ್ ಆಫ್ ಮೆರಿಟ್‌ನ ಅತ್ಯುನ್ನತ ಪದವಿ ಮುಖ್ಯ ಕಮಾಂಡರ್ ನೀಡಲಾಗಿದೆ, ಇದನ್ನು ಕೇವಲ ರಾಜ್ಯ ಮುಖ್ಯಸ್ಥರಿಗೆ ಅಥವಾ ಸರ್ಕಾರಕ್ಕೆ ಮಾತ್ರ ನೀಡಲಾಗುತ್ತದೆ.

ಭಾರತ-ವಿಯೆಟ್ನಾಂಗಳ ಸಹಭಾಗಿತ್ವ ಹೊಸ ಭಾಷ್ಯ ಬರೆಯಲಿದೆ: ಪ್ರಧಾನಿ ನರೇಂದ್ರ ಮೋದಿ

Published On - 8:34 am, Tue, 22 December 20