ಒಂದು ಡೋಸ್ ಕೊರೊನಾ ವ್ಯಾಕ್ಸಿನ್‌ಗೆ 250 ರೂ. ದರ ಫಿಕ್ಸ್; ಮಾ.1ರಿಂದ ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯ

|

Updated on: Feb 27, 2021 | 10:36 PM

ಒಂದು ಡೋಸ್ ಕೊರೊನಾ ವ್ಯಾಕ್ಸಿನ್‌ಗೆ 250 ರೂ. ದರ ಫಿಕ್ಸ್ ನಿಗದಿಯಾಗಿದೆ. ವ್ಯಾಕ್ಸಿನ್‌ ದರ 250 ರೂ. ಫಿಕ್ಸ್ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಚಿವಾಲಯದಿಂದ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಮಾರ್ಚ್ 1ರಿಂದಲೇ ಖಾಸಗಿ ಆಸ್ಪತ್ರೆಗಳಲ್ಲೂ ವ್ಯಾಕ್ಸಿನ್ ಲಭ್ಯವಿರಲಿದೆ.

ಒಂದು ಡೋಸ್ ಕೊರೊನಾ ವ್ಯಾಕ್ಸಿನ್‌ಗೆ 250 ರೂ. ದರ ಫಿಕ್ಸ್; ಮಾ.1ರಿಂದ ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಒಂದು ಡೋಸ್ ಕೊರೊನಾ ವ್ಯಾಕ್ಸಿನ್‌ಗೆ 250 ರೂ. ದರ ಫಿಕ್ಸ್ ನಿಗದಿಯಾಗಿದೆ. ವ್ಯಾಕ್ಸಿನ್‌ ದರ 250 ರೂ. ಫಿಕ್ಸ್ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಚಿವಾಲಯದಿಂದ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಮಾರ್ಚ್ 1ರಿಂದಲೇ ಖಾಸಗಿ ಆಸ್ಪತ್ರೆಗಳಲ್ಲೂ ವ್ಯಾಕ್ಸಿನ್ ಲಭ್ಯವಿರಲಿದೆ. ಮಾರ್ಚ್ 1ರಿಂದ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಅಭಿಯಾನ ಆರಂಭವಾಗಲಿದೆ.

ದೇಶದಲ್ಲಿ ಮಾರ್ಚ್ 1ರಿಂದ ಲಸಿಕಾ 2.0 ಅಭಿಯಾನ ಶುರುವಾಗಲಿದ್ದು 25 ಸಾವಿರ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನ ನಡೆಯಲಿದೆ. ಇದರಲ್ಲಿ, ಆಯುಷ್ಮಾನ್‌ ಭಾರತ್ ಯೋಜನೆಯಡಿ 10 ಸಾವಿರ ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿದೆ. ಸಿಜಿಹೆಚ್‌ಎಸ್ ಯೋಜನೆಯಡಿ 600 ಆಸ್ಪತ್ರೆಗಳು ನೋಂದಣಿ ಮಾಡಿವೆ ಮತ್ತು ಉಳಿದ ಆಸ್ಪತ್ರೆಗಳು ಆಯಾಯ ರಾಜ್ಯಸರ್ಕಾರದಡಿ ನೋಂದಣಿ ಮಾಡಿಸಿಕೊಂಡಿದೆ.

60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಜೊತೆಗೆ, ರೋಗದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗುವುದು. ಇದಲ್ಲದೆ,  ಮೊದಲನೇ ಮತ್ತು ಎರಡನೇ ಹಂತದಲ್ಲಿ ಬಿಟ್ಟುಹೋದ ಅಥವಾ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರು ಸಹ ವ್ಯಾಕ್ಸಿನ್​ ಪಡೆಯಬಹುದಾಗಿದೆ.

ಕೊರೊನಾ ಲಸಿಕೆ ಪಡೆಯಲು ಇಚ್ಛಿಸುವವರು ಈ ಕೆಳಕಂಡ ಯಾವುದಾದರು ಒಂದು ಗುರುತಿನ ಚೀಟಿಯನ್ನು ತರಬೇಕು
1. ಆಧಾರ್​ ಕಾರ್ಡ್​
2. ವೋಟರ್​ ಐಡಿ ಕಾರ್ಡ್​
3. ಆನ್​ಲೈನ್​ನಲ್ಲಿ ನೋಂದಾಯಿಸುವಾಗ ಕೇಳವು ಐಡಿ ಕಾರ್ಡ್​
4. 45ರಿಂದ 59 ವರ್ಷ ವಯಸ್ಕರು ವೈದ್ಯರಿಂದ ಪಡೆದ ಸಹ ಅಸ್ವಸ್ತತೆ ಪ್ರಮಾಣ ಪತ್ರ (ಕೋಮೊರ್ಬಿಡಿತಿ ಸರ್ಟಿಫಿಕೇಟ್​)
5. ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ತಮ್ಮ ಅಫೀಷಿಯಲ್ ಐಡಿ ಕಾರ್ಡ್​ ತರಬೇಕು

ಅಂದ ಹಾಗೆ, ಲಸಿಕೆಯನ್ನು ಸರ್ಕಾರಿ ಆಸ್ಪತ್ತೆಗಳಲ್ಲಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿಒಂದು ಡೋಸ್ ಕೊರೊನಾ ವ್ಯಾಕ್ಸಿನ್‌ಗೆ 250 ರೂ. ದರ ಫಿಕ್ಸ್ ನಿಗದಿಯಾಗಿದೆ.

ದೇಶದ 10 ಸಾವಿರ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನ ನಡೆಯಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುತ್ತಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಲಸಿಕೆ ಪಡೆಯಬೇಕು. ಲಸಿಕೆಗಾಗಿ ಕೊವಿನ್ ಌಪ್‌ನಲ್ಲಿ ನೋಂದಣಿ ಮಾಡಿಸಬೇಕು. ಲಸಿಕೆ ಕೇಂದ್ರಕ್ಕೆ ತೆರಳಿ ಸ್ಥಳದಲ್ಲೇ ನೋಂದಣಿ ಮಾಡಿಸಬೇಕು. ಸೇವಾ ಕೇಂದ್ರಗಳಲ್ಲೂ ನೋಂದಣಿ ಮಾಡಿಸಲು ಅವಕಾಶವಿದೆ. ಜೊತೆಗೆ, ತಮಗೆ ಅನುಕೂಲವಾದ ದಿನ, ಸಮಯ ಆಯ್ಕೆಗೆ ಅವಕಾಶವಿದೆ. ಆದ್ರೆ, ಯಾವ ಕಂಪನಿ ಲಸಿಕೆ ಬೇಕೆಂದು ಆಯ್ಕೆಗೆ ಅವಕಾಶವಿಲ್ಲ. ಒಂದೇ ಮೊಬೈಲ್‌ನಿಂದ ನಾಲ್ವರು ನೋಂದಣಿ ಮಾಡಬಹುದು ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಅಂತೂ 4 ದಶಕಗಳ ಕಗ್ಗಂಟು ಬಗೆಹರಿಯಿತು.. ಹೊಸ ಅವತಾರದಲ್ಲಿ ಕಾಣಸಿಗಲಿದೆ ಸುಪ್ರಸಿದ್ಧ ಅಗಸ್ತ್ಯ ತೀರ್ಥ!

Published On - 7:32 pm, Sat, 27 February 21