Narendra Modi: ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ಎರ್ಡೋಗನ್, ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

|

Updated on: May 29, 2023 | 11:38 AM

ಟರ್ಕಿ ಚುನಾವಣೆಯಲ್ಲಿ ಮತ್ತೆ ಎರಡನೇ ಬಾರಿ ಅಧ್ಯಕ್ಷರಾಗಿರುವ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

Narendra Modi: ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ಎರ್ಡೋಗನ್, ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ
ರೆಸೆಪ್ ತಯ್ಯಿಪ್ ಎರ್ಡೊಗಾನ್ , ಪ್ರಧಾನಿ ಮೋದಿ
Follow us on

ದೆಹಲಿ: ಟರ್ಕಿ ಚುನಾವಣೆಯಲ್ಲಿ ಮತ್ತೆ ಎರಡನೇ ಬಾರಿ ಅಧ್ಯಕ್ಷರಾಗಿರುವ ರೆಸೆಪ್ ತಯ್ಯಿಪ್ ಎರ್ಡೊಗಾನ್ (Recep Tayyip Erdogan) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಭಿನಂದಿಸಿದ್ದಾರೆ. ಜಾಗತಿಕ ವಿಷಯಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವು ಮುಂದುವರಿಯುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಟರ್ಕಿಯಲ್ಲಿ ಎರ್ಡೊಗನ್ ಅವರು ಭಾನುವಾರ ನಡೆದ ಮರುಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ. ಟರ್ಕಿಯಲ್ಲಿ ಇತ್ತಿಚೇಗೆ ನಡೆದ ಭಾರೀ ಭೂಕಂಪಕ್ಕೆ ನಲುಗಿ ಹೋಗಿತ್ತು. ಇಡೀ ಜಗತ್ತೇ ಒಂದು ಬಾರಿ ಭಯಗೊಂಡಿದ್ದು ನಿಜ, ಟರ್ಕಿ ಸ್ನೇಹಿತನಂತೆ ಎಲ್ಲ ರೀತಿ ಕೆಲಸವನ್ನು ಸಹಕಾರ ನೀಡಿದ್ದು ಭಾರತ. ಟರ್ಕಿಯಲ್ಲಿ ಒಂದು ಬಾರಿ ಹಣದುಬ್ಬರ ಬಂದ ಕಾರಣ ಈಗ ಮತ್ತೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರೆಸೆಪ್ ತಯ್ಯಿಪ್ ಎರ್ಡೊಗಾನ್ ಆಡಳಿತ ಮೂರನೇ ದಶಕದವರೆಗೆ ವಿಸ್ತರಿಸಲಾಗಿತ್ತು.

ಇದನ್ನೂ ಓದಿ:Viral Video: ಟರ್ಕಿ ಶೃಂಗಸಭೆಯಲ್ಲಿ ಉಕ್ರೇನ್ ಸಂಸದರಿಂದ ರಷ್ಯಾ ಪ್ರತಿನಿಧಿಗೆ ಥಳಿತ

ಮೋದಿ ಅವರು ಟ್ವಿಟರ್​​ನಲ್ಲಿ “ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದ @RTErdogan ಅವರಿಗೆ ಅಭಿನಂದನೆಗಳು, ಮುಂಬರುವ ದಿನಗಳಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳು ಮತ್ತು ಜಾಗತಿಕ ವಿಷಯಗಳ ಸಹಕಾರವು ಬೆಳೆಯುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ