ಮಹಿಳೆಯೊಬ್ಬರು ತನ್ನ ಪತಿಗೆ (Husband) ವಿಚ್ಛೇದನ ನೀಡಿ (Divorce), ತಾನು ಪ್ರೇಮಿಸಿದ ಸ್ನೇಹಿತೆಯನ್ನೇ ವರಿಸಿದ್ದಾಳೆ. ಇಬ್ಬರು ಮಹಿಳೆಯರೂ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುವ ಮೂಲಕ ಸತಿ ದಂಪತಿಗಳಾಗಿದ್ದಾರೆ. ಇದರೊಂದಿಗೆ ಸಲಿಂಗ ವಿವಾಹವನ್ನು (Lesbian Marriage) ಕಾನೂನುಬದ್ಧಗೊಳಿಸುವ ಕುರಿತು ಸುಪ್ರೀಂ ಕೋರ್ಟ್ (Supreme Court) ತೀರ್ಪು ಬರುವ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮಹಿಳೆಯರ ವಿವಾಹವು ಬಿಸಿ ಚರ್ಚೆಗೆ ಆಸ್ಪದವಾಗಿದೆ.