ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಟ್ವಿಟರ್ನಲ್ಲಿ ತಮ್ಮ ಲೋಕಸಭೆ ಕ್ಷೇತ್ರವಾದ ವಾರಣಾಸಿ ಬಗ್ಗೆ ಹಾಡಿಹೊಗಲಿದ್ದಾರೆ. ಇದರ ಜತೆಗೆ ಮೋದಿ ಅವರು ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ನಗರಕ್ಕೆ ಭೇಟಿ ನೀಡಲು 10 ಕಾರಣಗಳ ಇದೆ ಎಂದು ಹೇಳಿದ್ದಾರೆ. ಇಲ್ಲಿನ ಅದ್ಭುತ ಧಾರ್ಮಿಕ ಆಚರಣೆ ಮತ್ತು ಸುಂದರ ನಗರಗಳು, ಆಚರಣೆ ಬಗ್ಗೆ ಮಾತನಾಡಿದ್ದಾರೆ. ಈ ನಗರಗಳು ನಮ್ಮನ್ನು ಖಂಡಿತ ಮೋಡಿ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಕಾಶಿಯು ಎಲ್ಲರ ಆಗಮನಕ್ಕೆ ಕಾಯುತ್ತಿದೆ. ಅನೇಕ ಜನರು ಇಲ್ಲಿಗೆ ಭೇಟಿ ನೀಡಲು ಕಾಯುತ್ತಿದ್ದಾರೆ. ಒಮದು ಬಾರಿ ಭೇಟಿ ನೀಡಿದರೆ, ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಎಂದು ಮೋದಿ ಅವರು ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ನಿಮ್ಮ ಜೀವನದಲ್ಲಿ ಒಮ್ಮೆಯಾದರು, ನೀವು ಕಾಶಿಗೆ ಈ 10 ಕಾರಣಕ್ಕಾಗಿ ಭೇಟಿ ಮಾಡಬೇಕು. ಈ ಬಗ್ಗೆ ವರ್ಟಿಗೋ ವಾರಿಯರ್ ಟ್ವಿಟರ್ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಮೋದಿ ರೀ ಟ್ವೀಟ್ ಮಾಡಿದ್ದಾರೆ.
1. ಶ್ರೀ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ
2. ಗಂಗಾ ಆರತಿ
3. ಗಂಗಾ ಘಟ್ಟಗಳು
4. ಗಂಗಾ ಸ್ನಾನ
5. ಸಂಕಷ್ಟ ಮೋಚನ್ ಹನುಮಾನ್ ಮಂದಿರ
6. ಗಂಗಾ ನದಿಯಲ್ಲಿ ದೋಣಿ ವಿಹಾರ
7. ಕಾಶಿ ಕಾ ಚಾತ್
8. ಗೋಡೋಲಿಯಾ ಕಾ ಮೀತಾ ಪಾನ್
9. ಮಲೈಯೋ
10. ಕುಲ್ಲಾಡ್ ಚಾಯ್
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಈ ಬಗ್ಗೆ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ಕುರಿತು ಬಳಕೆದಾರರು ಈ ಪ್ರದೇಶಗಳಿಗೆ ಭೇಟಿ ನೀಡಿದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ ಇತಿಹಾಸಕ್ಕಿಂತ ಹಳೆಯದು, ಸಂಪ್ರದಾಯಕ್ಕಿಂತ ಹಳೆಯದು, ದಂತಕಥೆಗಿಂತಲೂ ಹಳೆಯದು. ಉಳಿದಿರುವ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಮಹಾದೇವ್ ಕಿ ನಾಗರಿ, ನಮ್ಮ ಕಾಶಿ, ಎಂದು ಕಮೆಂಟ್ ಮಾಡಿದ್ದಾರೆ.
I agree ? but I’ll also add that the number of reasons go well beyond 10.
Kashi awaits everyone and it will mesmerise all those who visit. https://t.co/7h7tF0Szx3
— Narendra Modi (@narendramodi) April 15, 2023
ಇದನ್ನೂ ಓದಿ: Narendra Modi in Karnataka: ಕರ್ನಾಟಕದಲ್ಲಿ ಮೋದಿ ಮೋಡಿ; ಚಿತ್ರಗಳಲ್ಲಿ ನೋಡಿ
ಕಾಶಿಯು ಭೇಟಿ ನೀಡುವ ಪ್ರತಿಯೊಬ್ಬರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದು ಬಹಳ ಪ್ರಭಾವ ಹೊಂದಿರುವ ನಗರ. ಅದುವೇ ದೇವರ ವಿಶ್ವನಾಥನ ಶಕ್ತಿಯಾಗಿರಲಿ, ದೇವಿ ಅನ್ನಪೂರ್ಣೆಯ ಕರುಣೆಯಾಗಿರಲಿ, ಶಕ್ತಿಶಾಲಿ ಗಂಗೆಯಾಗಿರಲಿ. ಇದು ಈ ನಗರದ ಕಂಪನಗಳು. ಕಾಶಿಗೆ ಹೋಗಲು ಯಾವಾಗಲೂ ಸಂತೋಷವಾಗುತ್ತದೆ ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಮಾರ್ಚ್ 24ರಂದು ವಾರಣಾಸಿಗೆ ಭೇಟಿ ನೀಡಿದರು, ಅಲ್ಲಿ ಅವರು ಭಾರತದ ಮೊದಲ ನಗರದ ರೋಪ್‌ವೇ ಸೇರಿದಂತೆ ಶಂಕುಸ್ಥಾಪನೆ ಮಾಡಿದರು ಮತ್ತು 1,780 ಕೋಟಿ ರೂ.ಗೂ ಹೆಚ್ಚು ಮೌಲ್ಯದ 28 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.