Mann Ki Baat ಹಬ್ಬ ಹರಿದಿನಗಳಲ್ಲಿ ಪ್ಲಾಸ್ಟಿಕ್ ರಹಿತ ಸ್ಥಳೀಯ ಚೀಲಗಳನ್ನು ಬಳಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 25, 2022 | 12:00 PM

PM Modi in Mann Ki Baat ಆಕಾಶವಾಣಿಯ ನ್ಯೂಸ್ ವೆಬ್​ಸೈಟ್​ ಮತ್ತು ನ್ಯೂಸ್​ ಆನ್ ಏರ್ ಮೊಬೈಲ್ ಆ್ಯಪ್​ಗಳಲ್ಲಿಯೂ ಈ ಭಾಷಣವನ್ನು ಲೈವ್ ಆಗಿ ಕೇಳಬಹುದು. ಆಕಾಶವಾಣಿ, ದೂರದರ್ಶನ ಮತ್ತು ಪ್ರಧಾನಿ ಕಚೇರಿಯ ಯುಟ್ಯೂಬ್​ ಚಾನೆಲ್​ಗಳ ಮೂಲಕವೂ ಭಾಷಣವನ್ನು ಆಲಿಸಬಹುದಾಗಿದೆ.

Mann Ki Baat ಹಬ್ಬ ಹರಿದಿನಗಳಲ್ಲಿ ಪ್ಲಾಸ್ಟಿಕ್ ರಹಿತ ಸ್ಥಳೀಯ ಚೀಲಗಳನ್ನು ಬಳಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ‘ಮನ್ ಕಿ ಬಾತ್’ (Mann Ki Baat) ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದು ಮನ್​ ಕಿ ಬಾತ್ ಕಾರ್ಯಕ್ರಮದ 93ನೇ ಆವೃತ್ತಿಯಾಗಿದೆ. ಈ  ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಭಾರತಕ್ಕೆ ಕರೆತಂದಿರುವ ಚೀತಾಗಳ ಬಗ್ಗೆ ಮಾತನಾಡಿದ್ದಾರೆ. ಚೀತಾ ಬಗ್ಗೆ ಮಾತನಾಡಲು ಹಲವರು ಒತ್ತಾಯಿಸಿದ್ದಾರೆ. ದೇಶದ ಮೂಲೆ ಮೂಲೆಗಳ ಜನರು ಚೀತಾಗಳನ್ನು  ಭಾರತಕ್ಕೆ ತಂದಿದ್ದಕೆ ಖುಷಿ ಪಟ್ಟಿದ್ದಾರೆ. ನಮಗೆ ಚೀತಾಗಳನ್ನು ಯಾವಾಗ ನೋಡಲು ಸಿಗುತ್ತದೆ ಎಂದು ಕೇಳಿದ್ದಾರೆ. ಒಂದು ತಿಂಗಳ ನಂತರ ನಿಮಗೆ ಈ ಅವಕಾಶ ಸಿಗುತ್ತದೆ. ಇದಕ್ಕಿಂತ ಮೊದಲು ನಾನು ಈ ಬಗ್ಗೆ  ಸ್ಪರ್ಧೆಯೊಂದರ ಬಗ್ಗೆ  ಹೇಳುತ್ತೇನೆ. ನೀವೂ  ಈ ಸ್ಪರ್ಧೆಯಲ್ಲಿ  ಭಾಗವಹಿಸಿ , ಇದರಲ್ಲಿ  ಗೆಲ್ಲುವ ಮೂಲಕ ನಿಮಗೆ ಚೀತಾಗಳನ್ನು ನೋಡುವ ಅವಕಾಶ ಸಿಗಬಹುದು ಎಂದು ಮೋದಿ ಹೇಳಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮವು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ಕೇಂದ್ರಗಳಿಂದ ಮರು ಪ್ರಸಾರಗೊಳ್ಳಲಿದೆ. ಆಕಾಶವಾಣಿಯ ನ್ಯೂಸ್ ವೆಬ್​ಸೈಟ್​ ಮತ್ತು ನ್ಯೂಸ್​ ಆನ್ ಏರ್ ಮೊಬೈಲ್ ಆ್ಯಪ್​ಗಳಲ್ಲಿಯೂ ಈ ಭಾಷಣವನ್ನು ಲೈವ್ ಆಗಿ ಕೇಳಬಹುದು. ಆಕಾಶವಾಣಿ, ದೂರದರ್ಶನ ಮತ್ತು ಪ್ರಧಾನಿ ಕಚೇರಿಯ ಯುಟ್ಯೂಬ್​ ಚಾನೆಲ್​ಗಳ ಮೂಲಕವೂ ಭಾಷಣವನ್ನು ಆಲಿಸಬಹುದಾಗಿದೆ. ಹಿಂದಿ ಭಾಷಣದ ಲೈವ್ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳಲ್ಲಿಯೂ ಭಾಷಣ ಮರು ಪ್ರಸಾರವಾಗಲಿದೆ.

ಮೋದಿ ಮನದ ಮಾತು: ಮುಖ್ಯಾಂಶಗಳು

  1. ಈ ತಿಂಗಳ ಮನ್ ಕಿ ಬಾತ್ ಗಾಗಿ ಚೀತಾಗಳ ಬಗ್ಗೆ ಬಹಳಷ್ಟು ಸಲಹೆಗಳನ್ನು ಸ್ವೀಕರಿಸಲಾಗಿದೆ ದೇಶಾದ್ಯಂತ ಜನರು ಈ ಬಗ್ಗೆ ನಮಗೆ ಪತ್ರ ಬರೆದಿದ್ದಾರೆ. ಚೀತಾಗಳು ಭಾರತಕ್ಕೆ ಮರಳಿದ ಬಗ್ಗೆ ದೇಶದ ಮೂಲೆ ಮೂಲೆಗಳಿಂದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. 130 ಕೋಟಿ ಭಾರತೀಯರು ಖುಷಿಪಟ್ಟಿದ್ದಾರೆ. ಇದು ಪ್ರಕೃತಿಯ ಮೇಲಿನ ಭಾರತದ ಪ್ರೀತಿಯನ್ನು ತೋರಿಸಿದೆ. ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ನಾವು ಪ್ರಾಣಿಗಳಿಗೆ ಗೌರವಿಸುವುದೂ ಇದೆ. ನಾವೆಲ್ಲರೂ ಇದನ್ನು ಅನುಸರಿಸಬೇಕು. MyGov ನಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನಾನು ಒತ್ತಾಯಿಸುತ್ತೇನೆ, ಅಲ್ಲಿ ಎಲ್ಲಾ ನಾಗರಿಕರು ಇತರ ಚಟುವಟಿಕೆಗಳ ಜೊತೆಗೆ ಚೀತಾಗಳಿಗೆ ಹೆಸರುಗಳನ್ನು ಸೂಚಿಸಬಹುದು.
  2. ಮೂರು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 28 ರಂದು ಅಮೃತ ಮಹೋತ್ಸವದ ವಿಶೇಷ ದಿನ. ಈ ದಿನ ನಾವು ಭಾರತ ಮಾತೆಯ ವೀರ ಪುತ್ರ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸುತ್ತೇವೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ  ಗೌರವವಾಗಿ, ಚಂಡೀಗಢ ವಿಮಾನ ನಿಲ್ದಾಣಕ್ಕೆ ಈಗ ಶಹೀದ್ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ.
  3. ಇಂದು ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನ. ಸಂಘರ್ಷ ಮತ್ತು ಪೂರ್ವಾಗ್ರಹ ಮುಕ್ತ ಭಾರತವನ್ನು ಕೇಂದ್ರೀಕರಿಸುವ ಅವರ ಜೀವನ ಮತ್ತು ಬೋಧನೆಗಳಿಂದ ಯುವಕರು ಸ್ಫೂರ್ತಿ ಪಡೆಯಬೇಕು. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಗೆ ಇಂದು ನಾವು ಗೌರವ ನಮನ ಸಲ್ಲಿಸುತ್ತಿದ್ದೇವೆ. ಅವರು ಚಿಂತಕರಾಗಿದ್ದರು. ದೇಶದ ಶ್ರೇಷ್ಠ ಪುತ್ರರಾಗಿದ್ದರು.
  4. 28ನೇ ಸೆಪ್ಟೆಂಬರ್‌ಗೆ ಮತ್ತೊಂದು ಪ್ರಾಮುಖ್ಯತೆ ಇದೆ, ಅದೇ  ಸರ್ಜಿಕಲ್ ಸ್ಟ್ರೈಕ್.  ಸೆಪ್ಟೆಂಬರ್ 28 ರಂದು ಸರ್ಜಿಕಲ್ ಸ್ಟ್ರೈಕ್‌ಗಳ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ನಾವೆಲ್ಲರೂ ನಮ್ಮ ಸೇನೆಯ ಧೈರ್ಯ ಮತ್ತು ಶೌರ್ಯವನ್ನು ನೆನಪಿಸಿಕೊಳ್ಳಬೇಕು. ಕರ್ತವ್ಯ ಪಥದಲ್ಲಿ ನೇತಾಜಿ ಸುಭಾಷ್ ಬೋಸ್ ಅವರಿಗೆ ನಮ್ಮ ದೇಶ ಗೌರವ ಸಲ್ಲಿಸಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಮೂಲಕ ಸೆಪ್ಟೆಂಬರ್ 28 ಅನ್ನು ಅದೇ ರೀತಿಯಲ್ಲಿ ಆಚರಿಸಲು ನಾನು ದೇಶವಾಸಿಗಳನ್ನು ಕೋರುತ್ತೇನೆ.
  5. ನಾವು ನಮ್ಮ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಸಮರ್ಪಿಸಬೇಕಾಗಿದೆ ಮತ್ತು ನಾವು ಹೊಸ ಭಾರತದ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿರುವಾಗ ಅವರನ್ನು ನೆನಪಿಸಿಕೊಳ್ಳಬೇಕು.
  6. ನನ್ನ ಪ್ರೀತಿಯ ದೇಶವಾಸಿಗಳೇ, ಜೀವನದ ಹೋರಾಟದಲ್ಲಿರುವ ವ್ಯಕ್ತಿಯ ದಾರಿಯಲ್ಲಿ ಯಾವುದೇ ಅಡಚಣೆಗಳಿರುವುದಿಲ್ಲ. ನಮ್ಮ ದೈನಂದಿನ ಜೀವನದಲ್ಲಿ, ಕೆಲವು ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ಕೆಲವು ಸ್ನೇಹಿತರನ್ನು ಸಹ ನಾವು ನೋಡುತ್ತೇವೆ. ನಾವು ವಿಕಲಚೇತನರ ಬಗ್ಗೆ ಜಾಗೃತಿ ಮೂಡಿಸಬೇಕು. ಅವರನ್ನು ನಮ್ಮೊಂದಿಗೆ ಬೆರೆತುಕೊಳ್ಳಲು  ಹೆಚ್ಚಿಸಲು ಸಹಾಯ ಮಾಡಬೇಕಾಗಿದೆ.
  7. ವರ್ಷಗಳವರೆಗೆ ಸಂಜ್ಞೆ ಭಾಷೆಗೆ ಯಾವುದೇ ಸ್ಪಷ್ಟ ಮಾನದಂಡಗಳಿರಲಿಲ್ಲ. ಈ ತೊಂದರೆಗಳನ್ನು ನಿವಾರಿಸಲು, 2015 ರಲ್ಲಿ ಭಾರತೀಯ ಸಂಜ್ಞೆ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಅಂದಿನಿಂದ ಭಾರತೀಯ ಸಂಜ್ಞೆ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ.
  8. ಸೆಪ್ಟೆಂಬರ್ 23 ರಂದು, ವಿವಿಧ ಶಿಕ್ಷಣ ಸಂಸ್ಥೆಗಳು ದೇಶದಾದ್ಯಂತ ಸಂಜ್ಞೆ ಭಾಷಾ ದಿನವನ್ನು ಪ್ರಚಾರ ಮಾಡಿದೆ. ಭಾರತೀಯ ಸಂಜ್ಞೆ ಭಾಷೆ ಸಂಶೋಧನೆ ಮತ್ತು ತರಬೇತಿ ಕೇಂದ್ರವು ದೇಶದಲ್ಲಿ ಒಳಗೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತಿದೆ. ಸಂಸ್ಥೆಯು 10,000 ಪದಗಳ ನಿಘಂಟನ್ನು ಅಭಿವೃದ್ಧಿಪಡಿಸಿದೆ.
  9. ಹರ್ಯಾಣದ ಪೂಜಾ ಜೀ ಅವರು ಭಾರತೀಯ ಸಂಜ್ಞೆ ಭಾಷೆಯಿಂದ ಖುಷಿಯಾಗಿದ್ದಾರೆ. ಈ ಮೊದಲು ಆಕೆಗೆ ತನ್ನ ಮಗನೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ, ಆದರೆ 2018 ರಲ್ಲಿ ಸೈನ್ ಲ್ಯಾಂಗ್ವೇಜ್ ತರಬೇತಿ ಪಡೆದ ನಂತರ, ತಾಯಿ ಮತ್ತು ಮಗನ  ಬದುಕು ಸುಲಭವಾಯಿತು.
  10. ಇಂದು ಭಾರತವು ಪ್ಯಾರಾ-ಸ್ಪೋರ್ಟ್ಸ್‌ನಲ್ಲಿ ಮಹತ್ತರವಾದುದನ್ನು ಸಾಧಿಸಿದೆ. ಇದನ್ನು ನಾವು ಅನೇಕ ಪಂದ್ಯಾವಳಿಗಳಲ್ಲಿ ವೀಕ್ಷಿಸಿದ್ದೇವೆ. ವಿಶೇಷ ಸಾಮರ್ಥ್ಯವುಳ್ಳವರಲ್ಲಿ ಫಿಟ್‌ನೆಸ್ ಸಂಸ್ಕೃತಿಯನ್ನು ಉತ್ತೇಜಿಸಲು, ಅವರ ಆತ್ಮ ವಿಶ್ವಾಸವನ್ನು ಬಲಪಡಿಸಲು ನಾವು ಶ್ರಮಿಸುತ್ತಿದ್ದೇವೆ.
  11. ಹವಾಮಾನ ಬದಲಾವಣೆಯು ಸಮುದ್ರ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಅಪಾಯವಾಗಿದೆ, ನಮ್ಮ ಕಡಲತೀರಗಳಲ್ಲಿ ಕಸದ ಸಮಸ್ಯೆ ಇದೆ. ಈ ಸವಾಲುಗಳನ್ನು ನಿಭಾಯಿಸುವ ಜವಾಬ್ದಾರಿ ನಮ್ಮದು.
  12.  2025 ರ ವೇಳೆಗೆ ಭಾರತದಿಂದ ಟಿಬಿಯನ್ನು ನಿರ್ಮೂಲನೆ ಆಗುತ್ತದೆ.
  13. ಈ ಹಬ್ಬ ಹರಿದಿನಗಳಲ್ಲಿ ಜನರು ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ ರಹಿತ ಚೀಲಗಳನ್ನೇ ಬಳಸಬೇಕು. ಸೆಣಬು, ಹತ್ತಿ, ಬಾಳೆ ನಾರು, ಇಂತಹ ಹಲವು ಸಾಂಪ್ರದಾಯಿಕ ಚೀಲಗಳ ಬಳಕೆ ಮತ್ತೊಮ್ಮೆ ಹೆಚ್ಚುತ್ತಿದೆ.

Published On - 11:02 am, Sun, 25 September 22