ಕೇರಳದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆರ್ಯಾಡನ್ ಮುಹಮ್ಮದ್ ನಿಧನ
Aryadan Muhammed ಇಂದು ನಿಲಂಬೂರಿನ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಾಳೆ ಬೆಳಗ್ಗೆ 9 ಗಂಟೆಗೆ ನಿಲಂಬೂರು ಮೂಕಟ್ಟ ವಲಿಯ ಜುಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಕೋಯಿಕ್ಕೋಡ್: ಕೇರಳದ (Kerala) ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆರ್ಯಾಡನ್ ಮುಹಮ್ಮದ್ (87) (Aryadan Muhammed) ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ 7.40ಕ್ಕೆ ಕೋಯಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿಆರ್ಯಾಡನ್ ಕೊನೆಯುಸಿರೆಳೆದಿದ್ದಾರೆ. ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು ನಿಲಂಬೂರಿನ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಾಳೆ ಬೆಳಗ್ಗೆ 9 ಗಂಟೆಗೆ ನಿಲಂಬೂರು ಮೂಕಟ್ಟ ವಲಿಯ ಜುಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಉಣ್ಣೀನ್ ಮತ್ತು ಕದಿಯುಮ್ಮ ಅವರ ಒಂಬತ್ತು ಮಕ್ಕಳಲ್ಲಿ ಎರಡನೆಯವರಾದ ಆರ್ಯಾಡನ್ 1935 ಮೇ 15ರಂದು ಜನಿಸಿದ್ದು ನಿಲಂಬೂರು ಸರ್ಕಾರಿ ಮಾನವವೇದನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ಶಾಲಾ ಫುಟ್ಬಾಲ್ ತಂಡದ ನಾಯಕರಾಗಿದ್ದರು.
Former Kerala minister & senior Congress leader Aryadan Muhammed passes away at the age of 87 years.
He was undergoing treatment in a private hospital in Kozhikode & died today morning. He was an 8-time MLA & represented the Nilambur constituency in Malappuram district.
— ANI (@ANI) September 25, 2022
ಆರ್ಯಾಡನ್ ಮುಹಮ್ಮದ್ ಟ್ರೇಡ್ ಯೂನಿಯನ್ ಮೂಲಕ ರಾಜಕೀಯ ಪ್ರವೇಶಿಸಿದ್ದು, 1959 ರಲ್ಲಿ ವಂಡೂರು ಫರ್ಕಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. 1960ರಲ್ಲಿ ಕೋಯಿಕ್ಕೋಡ್ ಡಿಸಿಸಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. 1962ರ ವಂಡೂರಿನಿಂದ ಕೆಪಿಸಿಸಿ ಸದಸ್ಯ. 1969ರಲ್ಲಿ ಮಲಪ್ಪುರಂ ಜಿಲ್ಲೆ ರಚನೆಯಾದಾಗ ಡಿಸಿಸಿ ಅಧ್ಯಕ್ಷರಾದರು. 1978ರಿಂದ ಕೆಪಿಸಿಸಿ ಕಾರ್ಯದರ್ಶಿಯಾದರು. 1965 ಮತ್ತು 1967ರಲ್ಲಿ ಅವರು ನಿಲಂಬೂರಿನಿಂದ ವಿಧಾನಸಭೆಗೆ ಸ್ಪರ್ಧಿಸಿದ್ದು ಕೆ.ಕುಂಞಾಲಿ ವಿರುದ್ಧ ಸೋತರು. 1969ರಲ್ಲಿ ಜುಲೈ 28ರಂದು ಕುಂಞಾಲಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ, ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. 1977ರಲ್ಲಿ ಮತ್ತೆ ನಿಲಂಬೂರಿನಿಂದ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. ಪೊನ್ನಾನಿಯಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು. 1980ರಲ್ಲಿ ಕಾಂಗ್ರೆಸ್ ಎ ಗ್ರೂಪ್ ಎಡರಂಗದ ಜತೆ ಮೈತ್ರಿ ಮಾಡಿಕೊಂಡಿತ್ತು. ಆಗ ಆರ್ಯಾಡನ್ ಎಡರಂಗದ ಸಚಿವ ಸಂಪುಟದಲ್ಲಿ ಅರಣ್ಯ ಮತ್ತು ಕಾರ್ಮಿಕ ಸಚಿವರಾದರು.ಆರ್ಯಾಡನ್ ಆಗ ಶಾಸಕರಾಗಿರಲಿಲ್ಲ. ಹಾಗಾಗಿ ಸಿ.ಹರಿದಾಸ್ ಆರ್ಯಾಡನ್ ಗಾಗಿ ನಿಲಂಬೂರಿನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಉಪಚುನಾವಣೆಯಲ್ಲಿ ಆರ್ಯಾಡನ್, ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರನ್ನು ಸೋಲಿಸಿದರು. 1987 ರಿಂದ 2011 ರವರೆಗಿನ ಪ್ರತಿ ಚುನಾವಣೆಯಲ್ಲಿ ಆರ್ಯಾಡನ್ ಗೆದ್ದಿದ್ದು 1995 ರಲ್ಲಿ, ಅವರು ಎ.ಕೆ. ಆಂಟನಿ ಸಚಿವ ಸಂಪುಟದಲ್ಲಿ ಕಾರ್ಮಿಕ ಮತ್ತು ಪ್ರವಾಸೋದ್ಯಮ ಸಚಿವರಾದರು. 2005 ಮತ್ತು 2001ರಲ್ಲಿ ಉಮ್ಮನ್ ಚಾಂಡಿ ಅವರ ಸಂಪುಟದಲ್ಲಿ ವಿದ್ಯುತ್ ಸಚಿವರಾಗಿದ್ದರು.
1980ರಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ನಿರುದ್ಯೋಗ ವೇತನ ಮತ್ತು ಕೃಷಿ ಕಾರ್ಮಿಕರ ಪಿಂಚಣಿ ಜಾರಿಗೊಳಿಸಲಾಯಿತು. 2005ರಲ್ಲಿ ವಿದ್ಯುತ್ ಸಚಿವರಾಗಿದ್ದಾಗ ಆರ್ ಜಿಜಿವೈ ಯೋಜನೆಯಡಿ ಮಲೆನಾಡಿನಲ್ಲಿ ವಿದ್ಯುತ್ ತಂದರು. 2011 ರಲ್ಲಿ, ಮಲಬಾರ್‌ನಲ್ಲಿ ವಿಶೇಷವಾಗಿ ಮಲಪ್ಪುರಂ ಜಿಲ್ಲೆಯಲ್ಲಿ ವೋಲ್ಟೇಜ್ ಕೊರತೆಯನ್ನು ಪರಿಹರಿಸಲು ಯೋಜನೆಗಳನ್ನು ಜಾರಿಗೆ ತರಲಾಯಿತು. ಒಳ ಅರಣ್ಯದಲ್ಲಿರುವ ಬುಡಕಟ್ಟು ಕಾಲೋನಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಪತ್ನಿ ಪಿ.ವಿ.ಮರಿಯುಮ್ಮ, ಮಕ್ಕಳಾದ ಅನ್ಸಾರ್ ಬೇಗಂ, ಶೌಕತ್, ಕದೀಜ, ಡಾ. ರಿಯಾಜ್ ಅಲಿಯನ್ನು ಆರ್ಯಾಡನ್ ಅಗಲಿದ್ದಾರೆ.
Published On - 8:56 am, Sun, 25 September 22