Mann Ki Baat: 93ನೇ ಮನ್ ಕಿ ಬಾತ್; ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

PM Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ 11 ಗಂಟೆಗೆ ಪ್ರತಿ ತಿಂಗಳ ಜನಪ್ರಿಯ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Mann Ki Baat: 93ನೇ ಮನ್ ಕಿ ಬಾತ್; ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 25, 2022 | 7:37 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಸೆಪ್ಟೆಂಬರ್ 25) ಬೆಳಿಗ್ಗೆ 11 ಗಂಟೆಗೆ ಪ್ರತಿ ತಿಂಗಳ ಜನಪ್ರಿಯ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಮನ್​ ಕಿ ಬಾತ್ ಕಾರ್ಯಕ್ರಮದ 93ನೇ ಆವೃತ್ತಿಯಾಗಿದೆ. ಕಾರ್ಯಕ್ರಮವು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ಕೇಂದ್ರಗಳಿಂದ ಮರು ಪ್ರಸಾರಗೊಳ್ಳಲಿದೆ. ಆಕಾಶವಾಣಿಯ ನ್ಯೂಸ್ ವೆಬ್​ಸೈಟ್​ ಮತ್ತು ನ್ಯೂಸ್​ ಆನ್ ಏರ್ ಮೊಬೈಲ್ ಆ್ಯಪ್​ಗಳಲ್ಲಿಯೂ ಈ ಭಾಷಣವನ್ನು ಲೈವ್ ಆಗಿ ಕೇಳಬಹುದು. ಆಕಾಶವಾಣಿ, ದೂರದರ್ಶನ ಮತ್ತು ಪ್ರಧಾನಿ ಕಚೇರಿಯ ಯುಟ್ಯೂಬ್​ ಚಾನೆಲ್​ಗಳ ಮೂಲಕವೂ ಭಾಷಣವನ್ನು ಆಲಿಸಬಹುದಾಗಿದೆ. ಹಿಂದಿ ಭಾಷಣದ ಲೈವ್ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳಲ್ಲಿಯೂ ಭಾಷಣ ಮರು ಪ್ರಸಾರವಾಗಲಿದೆ.

ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲೆಂದು ದೇಶದ ವಿವಿಧೆಡೆಯಿಂದ ಸಾಕಷ್ಟು ಜನರು ಮಾಹಿತಿ ಕಳಿಸಿಕೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು. ದೊಡ್ಡ ಸಂಖ್ಯೆಯಲ್ಲಿ ಯುವಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಬಗ್ಗೆ ಅವರು ಶ್ಲಾಘಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್ ಕಾರ್ಯಕ್ರಮದ ಮೊದಲ ಭಾಷಣವು ಅಕ್ಟೋಬರ್ 3, 2014ರಲ್ಲಿ ಪ್ರಸಾರವಾಗಿತ್ತು. ಪ್ರತಿ ತಿಂಗಳ ಕೊನೆಯ ಭಾನುವಾರ ಮೋದಿ ರೇಡಿಯೊ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ದೇಶದ ಜನರಿಗೆ ಆಡಳಿತದ ಬಗ್ಗೆ ಮಾಹಿತಿ ಕೊಡುವುದು, ವಿವಿಧ ವಿಷಯಗಳ ಬಗ್ಗೆ ಪ್ರಧಾನಿಯು ತಮ್ಮ ದೃಷ್ಟಿಕೋನ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಕಳೆದ ಬಾರಿಯ ಮನ್​ ಕಿ ಬಾತ್ ಕಾರ್ಯಕ್ರಮವು ಆಗಸ್ಟ್ 28ರಂದು ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಮೋದಿ ಅವರು ದೇಶದ ಜನರೊಂದಿಗೆ ಸರ್ಕಾರ ಮತ್ತು ತಮ್ಮ ಆಶಯಗಳನ್ನು ಹಂಚಿಕೊಂಡಿದ್ದರು. ಹಲವು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿದ್ದ ಅವರು ಸ್ವರಾಜ್ ಧಾರಾವಾಹಿ ವೀಕ್ಷಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.

ಮೋದಿಗೆ ಮನ್​ ಕಿ ಬಾತ್ ವಿಚಾರ ಹೊಳೆದದ್ದು 1998ರಲ್ಲಿ

ಮೋದಿ ಅವರು ಪ್ರಧಾನಿ ಅಲ್ಲ, ಗುಜರಾತಿನ ಮುಖ್ಯಮಂತ್ರಿಗಳಾಗುವ ಮೊದಲೇ ರೇಡಿಯೋ ಮೂಲಕ ದೇಶದ ಎಲ್ಲಾ ಮೂಲೆಗಳ ಜನರನ್ನು ತಲುಪಬಹುದೆಂಬ ಮನವರಿಕೆಯಾಗಿತ್ತು. ಅದು 1998ರ ಸಮಯ ಮತ್ತು ಮೋದಿಯವರು ಬಿಜೆಪಿಯ ಕಾರ್ಯಕರ್ತನಾಗಿ ಹಿಮಾಚಲ ಪ್ರದೇಶದಲ್ಲಿ ಸಂಘಟನಾ ಕೆಲಸಗಳಲ್ಲಿ ತೊಡಗಿದ್ದರು. ಅದೊಂದು ದಿನ ಅವರು ರಾಜ್ಯದ ಕುಗ್ರಾಮದಂಥ ಪ್ರದೇಶದಲ್ಲಿ ಕೆಲಸ ಮಾಡುವಾಗ ಟೀ ಕುಡಿಯಲು ಅವರು ಒಂದು ಚಿಕ್ಕ ಧಾಬಾಗೆ ಹೋಗಿದ್ದರು. ಖುಷಿಯಿಂದ ಬೀಗುತ್ತಿದ್ದ ಧಾಬಾದ ಮಾಲೀಕ ಮೋದಿಯವರ ಮುಂದೆ ಚಹಾದ ಬದಲು ಲಾಡು ತಂದಿಟ್ಟ. ಮೋದಿಯವರು, ‘ಭಯ್ಯಾ, ನಾನು ಕೇಳಿದ್ದು ಚಾಯ್, ಲಡ್ಡು ಅಲ್ಲ,’ ಎಂದರು. ಅದಕ್ಕೆ ಧಾಬಾದವನು, ‘ಭಯ್ಯಾ, ನೀವದನ್ನು ಅದನ್ನು ತಿನ್ನಲೇಬೇಕು, ಇಂದು ಇಡೀ ದೇಶದಲ್ಲಿ ಸಂತೋಷದ ಅಲೆಯಲ್ಲಿ ತೇಲುತ್ತಿದೆ. ಎಲ್ಲರೂ ಕುಣಿದು ಕುಪ್ಪಳಿಸುತ್ತಿದ್ದಾರೆ, ಬಂದ ಗ್ರಾಹಕರಿಗೆಲ್ಲ ನಾನು ಲಡ್ಡು ಹಂಚುತ್ತಿದ್ದೇನೆ,’ ಎಂದು ಹೇಳಿದ.

‘ಅಂಥದ್ದೇನಾಗಿದೆ,’ ಅಂತ ಮೋದಿಯವರು ಕೇಳಿದಾಗ ಅವನು, ‘ನಿಮಗೆ ಗೊತ್ತಿಲ್ವಾ? ಭಾರತ ಇಂದು ಅಣ್ವಸ್ತ್ರ ಪರೀಕ್ಷೆ ನಡೆಸಿದೆ,’ ಎಂದು ಹೇಳಿದ. ಮೋದಿಯವರು, ‘ನಿಮಗೆ ಹೇಗೆ ಗೊತ್ತಾಯಿತು ಭಯ್ಯಾ?’ ಅಂತ ಕೇಳಿದಾಗ, ಅವನು ರೇಡಿಯೋವನ್ನು ಅವರ ಮುಂದೆ ತಂದಿಟ್ಟ. ಆಗಿನ ಪ್ರಧಾನ ಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರು ಪೋಖ್ರಾನ್​ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸುದ್ದಿಯ ಬಾನುಲಿ ಪ್ರಸಾರ ಜಾರಿಯಲ್ಲಿತ್ತು. ಅಂದು ಮೋದಿ ಅವರಿಗೆ ರೇಡಿಯೋದ ಶಕ್ತಿ ಮನವರಿಕೆಯಾಯಿತು. ಮುಂದೆ ಪ್ರಧಾನಿಯಾದ ನಂತರ ಅವರು ಮನ್ ಕಿ ಬಾತ್ ಮೂಲಕ ದೇಶದ ಜನರನ್ನು ತಲುಪುವ ಮಾರ್ಗವನ್ನು ರೂಪಿಸಿದರು.

ಅಂಥ ರಿಮೋಟ್ ಜಾಗದಲ್ಲಿದ್ದ ವ್ಯಕ್ತಿಗೆ ದೇಶದಲ್ಲಿ ಏನು ನಡೆಯುತ್ತಿದೆ ಅನ್ನೋದು ರೇಡಿಯೊ ಮೂಲಕ ಗೊತ್ತಾಗಿದೆ. ರೇಡಿಯೊವನ್ನು ದೇಶದಲ್ಲಿ ಯಾವ ಮೂಲೆಯಲ್ಲೂ ಆಲಿಸಬಹುದು, ಇದಕ್ಕಿಂತ ಪವರ್ ಫುಲ್ ಮಾಧ್ಯಮ ಮತ್ತೊಂದಿಲ್ಲ ಅಂತ ಮೋದಿಯವರಿಗೆ ಅವತ್ತು ಮನದಟ್ಟಾಯಿತು. ಆಗಲೇ ಜನರನ್ನು ತಲುಪಲು ರೇಡಿಯೊವನ್ನು ಬಳಸುವ ನಿರ್ಧಾರ ಅವರಲ್ಲಿ ರೂಪ ತಳೆಯಲಾರಂಭಿಸಿತ್ತು. 2014ರಲ್ಲಿ ಅವರು ಪ್ರಧಾನ ಮಂತ್ರಿಯಾದಾಗ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮ ಅಸ್ತಿತ್ವಕ್ಕೆ ಬಂತು. ಅಗಲೇ ಹೇಳಿದ ಹಾಗೆ ಮೊದಲ ಕಂತು ಅಕ್ಟೋಬರ್ 3, 2014 ವಿಜಯದಶಮಿ ದಿನದಂದು ಪ್ರಸಾರವಾಯಿತು.

ಮನ್​ ಕಿ ಬಾತ್​ಗೆ ನೀವು ಮಾಹಿತಿ ಕಳಿಸಿ

ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ಹಲವು ಬಾರಿ ಕನ್ನಡಿಗರನ್ನೂ ಉಲ್ಲೇಖಿಸಿದ್ದಾರೆ. ಶೌಚಾಲಯಕ್ಕಾಗಿ ಉಪವಾಸ ಧರಣಿ ನಡೆಸಿದ ರಾಯಚೂರು ಜಿಲ್ಲೆ ಗಂಗಾವತಿ ತಾಲ್ಲೂಕಿನ ಮಲ್ಲಮ್ಮ ಹೆಸರಿನ ವಿದ್ಯಾರ್ಥಿನಿ, ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್, ಶ್ರೀರಂಗಪಟ್ಟಣದ ವೀರಭದ್ರ ದೇವಸ್ಥಾನ ಹಾಗೂ ದಂಪತಿಗಳಾದ ಅನುದೀಪ್ ಹಾಗೂ ಮಿನೀಷಾ ನಡೆಸುತ್ತಿರುವ ಕಾರ್ಯವನ್ನು ಪ್ರಧಾನಿಗಳು ಹೊಗಳಿದ್ದಾರೆ.

‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಐಡಿಯಾಗಳನ್ನು ಕಳಿಸುವ ಇಚ್ಛೆ ನಿಮಗಿದ್ದರೆ MyGov, NaMo ಌಪ್ ಬಳಸಬಹುದು ಇಲ್ಲವೇ 1800-11-7800 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಬಹುದು. ಪ್ಯಾಕ್ಸ್ ಕಳುಹಿಸುವ ಹಾಗಿದ್ದರೆ, +91-11-23019545, 23016857 ನಂಬರ್ ಗಳಿಗೆ ಕಳಿಸಬಹುದು. ನಿಮ್ಮ ಪ್ರಶ್ನೆಗೆ ಫ್ಯಾಕ್ಸ್ ಇಲ್ಲವೇ ಯಾವುದಾದರೂ ಮಾಧ್ಯಮದ ಮೂಲಕ ಉತ್ತರ ಸಿಗುತ್ತದೆ.

Published On - 7:36 am, Sun, 25 September 22

ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ