ದೆಹಲಿ: ಅಮೆರಿಕದಿಂದ ಹಿಂದಿರುಗಿ 24 ಗಂಟೆಗಳಿಗಿಂತಲೂ ಮುಂಚೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ರಾತ್ರಿ 8: 45 ರ ಸುಮಾರಿಗೆ ಹೊಸ ಸಂಸತ್ ಕಟ್ಟಡದ ನಿರ್ಮಾಣ ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಮೋದಿ ಪ್ರಸ್ತಾವಿತ ಸೆಂಟ್ರಲ್ ವಿಸ್ಟಾ ಯೋಜನೆಯ (Central Vista project) ಸ್ಥಳದಲ್ಲಿ ಸುಮಾರು ಒಂದು ಗಂಟೆ ಕಳೆದರು ಮತ್ತು ಹೊಸ ಪಾರ್ಲಿಮೆಂಟ್ ಕಟ್ಟಡದ ನಿರ್ಮಾಣ ಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದರು. ಅವರ ಭೇಟಿಯ ಬಗ್ಗೆ ಯಾವುದೇ ಪೂರ್ವ ಸೂಚನೆ ಅಥವಾ ಭದ್ರತಾ ವಿವರ ಇರಲಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಡಿಸೆಂಬರ್ 10, 2020 ರಂದು ದೆಹಲಿಯ ಹೊಸ ಸಂಸತ್ ಭವನಕ್ಕೆ ಮೋದಿ ಶಂಕುಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕ್ಯಾಬಿನೆಟ್ ಮಂತ್ರಿಗಳು ಮತ್ತು ವಿವಿಧ ದೇಶಗಳ ರಾಯಭಾರಿಗಳು ಭಾಗವಹಿಸಿದ್ದರು.
64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಹೊಸ ಕಟ್ಟಡವು 2022ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಯೋಜನೆಯ ಪ್ರಕಾರ ಡಿಸೆಂಬರ್ 2022ರ ಅಧಿವೇಶನವು ಹೊಸ ಸಂಸತ್ನಲ್ಲಿ ಅಡಿಯಲ್ಲಿ ನಡೆಯಲಿದೆ. ಸಂಸತ್ ಭವನ ನಿರ್ಮಾಣದ ಅಂದಾಜು ವೆಚ್ಚ 971 ಕೋಟಿ ರೂ. ಇದು ನಿರ್ಮಾಣದಿಂದ ಹಿಡಿದು ಸುರಕ್ಷತಾ ಉಪಕರಣಗಳು ಮತ್ತು ಇತರ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
PM Narendra Modi went to the construction site of the new parliament building in New Delhi at around 8.45 pm today. He spent almost an hour at the site & did a first-hand inspection of the construction status of the new parliament building. pic.twitter.com/kYIwbgXwxq
— ANI (@ANI) September 26, 2021
ಹೊಸ ಲೋಕಸಭೆಯು 888 ಸಂಸದರಿಗೆ ಮತ್ತು ರಾಜ್ಯಸಭೆಯಲ್ಲಿ 384 ಸಂಸದರಿಗೆ ಆಸನ ಸ್ಥಳವನ್ನು ಹೊಂದಿರುತ್ತದೆ. ಹೆಚ್ಚುವರಿ ಆಸನಗಳಿಗೆ ಸ್ಥಳಾವಕಾಶವಿರುತ್ತದೆ -ಹೊಸ ಸಂಸತ್ ಕಟ್ಟಡವು ಲೋಕಸಭೆಯಲ್ಲಿ 1,382 ಜನರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಈಗಿರುವ ಸಂಸತ್ತಿನ ಕಟ್ಟಡದ ಅಡಿಪಾಯವನ್ನು 1921 ರಲ್ಲಿ ಹಾಕಲಾಯಿತು, ಮತ್ತು ಇದನ್ನು 1927 ರಲ್ಲಿ ನಿರ್ಮಿಸಲಾಯಿತು – ಕಟ್ಟಡವು ಸುಮಾರು 100 ವರ್ಷಗಳಷ್ಟು ಹಳೆಯದು. ಈಗಿರುವ ಕಟ್ಟಡದ ಒಳಭಾಗವು ಬಹಳಷ್ಟು ಬದಲಾಗಿದೆ, ಮತ್ತು ಹೊಸ ಸಂಸತ್ ಭವನದ ಬೇಡಿಕೆ ಸಾಕಷ್ಟು ಹಳೆಯದು. ಕಳೆದ ದಶಕಗಳಲ್ಲಿ ಹಲವಾರು ರಾಜ್ಯಗಳು ಹೊಸ ಅಸೆಂಬ್ಲಿ ಹೌಸ್ ನಿರ್ಮಿಸಿವೆ, ಆದರೆ ಸಂಸತ್ತು ಇನ್ನೂ ಬ್ರಿಟಿಷರ ಕಾಲದ ಕಟ್ಟಡದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಜೆಟ್ಲಾಗ್ ಹಿಡಿತದಿಂದ ಪ್ರಧಾನಿ ನರೇಂದ್ರ ಮೋದಿ ತಪ್ಪಿಸಿಕೊಂಡಿದ್ದು ಹೇಗೆ? ಚುರುಕಿನ ಕೆಲಸವೇ ಪ್ರಯಾಣದ ಆಯಾಸಕ್ಕೂ ಮದ್ದು
ಇದನ್ನೂ ಓದಿ: ’ಪ್ರಧಾನಿ ಮೋದಿಗೆ ನನ್ನ ಮೇಲೆ ಅಸೂಯೆ, ಹಾಗಾಗಿಯೇ ಇಟಲಿಗೆ ಹೋಗಲು ಅನುಮತಿ ಸಿಗಲಿಲ್ಲ’-ಮಮತಾ ಬ್ಯಾನರ್ಜಿ
(Prime Minister Narendra Modi made an unannounced visit to the construction site of new Parliament building )