ಜೆಟ್​ಲಾಗ್​​ ಹಿಡಿತದಿಂದ ಪ್ರಧಾನಿ ನರೇಂದ್ರ ಮೋದಿ ತಪ್ಪಿಸಿಕೊಂಡಿದ್ದು ಹೇಗೆ? ಚುರುಕಿನ ಕೆಲಸವೇ ಪ್ರಯಾಣದ ಆಯಾಸಕ್ಕೂ ಮದ್ದು

ಒಂದರ ಹಿಂದೆ ಒಂದರಂತೆ ಕಾರ್ಯಕ್ರಮಗಳು ನಿಗದಿಯಾಗಿದ್ದ ಕಾರಣ ಸುಸ್ತು ಅಥವಾ ಇತರ ದೈಹಿಕ ಶ್ರಮದ ವಿಚಾರದ ಬಗ್ಗೆ ಅವರ ಮನಸ್ಸು ಹೆಚ್ಚು ಗಮನ ಹರಿಸಲಿಲ್ಲ.

ಜೆಟ್​ಲಾಗ್​​ ಹಿಡಿತದಿಂದ ಪ್ರಧಾನಿ ನರೇಂದ್ರ ಮೋದಿ ತಪ್ಪಿಸಿಕೊಂಡಿದ್ದು ಹೇಗೆ? ಚುರುಕಿನ ಕೆಲಸವೇ ಪ್ರಯಾಣದ ಆಯಾಸಕ್ಕೂ ಮದ್ದು
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 26, 2021 | 9:35 PM

ದೆಹಲಿ: ವಿದೇಶ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೆಟ್​ಲಾಗ್ ಬದಿಗೊತ್ತಿ ಚುರುಕಾಗಿ ಸಭೆಗಳನ್ನು ನಡೆಸಿದ್ದು ಮತ್ತು ಹಲವರನ್ನು ಭೇಟಿಯಾಗಿ ರಾಜತಾಂತ್ರಿಕ ಕಾರ್ಯಗಳನ್ನು ನಿರ್ವಹಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಅಮೆರಿಕದಲ್ಲಿ ಮೋದಿ ಅಷ್ಟು ಚಟುವಟಿಕೆಯಿಂದ ಇರಲು ಮುಖ್ಯ ಕಾರಣ ಅವರ ಬಿಡುವಿಲ್ಲದ ಕಾರ್ಯಕ್ರಮಗಳು, ಅಂದರೆ ಬ್ಯುಸಿ ಶೆಡ್ಯೂಲ್. ಅವರ ಅಭಿಮಾನಿಗಳು ಮತ್ತು ಅವರ ಎಲ್ಲ ಚಟುವಟಿಕೆಗಳನ್ನು ಪ್ರಶ್ನಿಸುವ ವರ್ಗದಲ್ಲಿಯೂ ಮೋದಿ ಅವರು ಕಾರ್ಯಚಟುವಟಿಕೆಯು ಹುಬ್ಬೇರುವಂತೆ ಮಾಡಿತ್ತು. ಪ್ರವಾಸದ ವೇಳೆ ಒಂದರ ಬೆನ್ನಿಗೆ ಒಂದರಂತೆ ಸಭೆ-ಕಾರ್ಯಕ್ರಮಗಳನ್ನು ಜೋಡಿಸಿಕೊಂಡಿದ್ದೇ ಮೋದಿ ಅವರ ಚುರುಕಿನ ಕಾರ್ಯಚಟುವಟಿಕೆಗೆ ಕಾರಣ ಎಂದು ಈಗ ಹೇಳಲಾಗುತ್ತಿದೆ. ಹೀಗೆ ಒಂದರ ಹಿಂದೆ ಒಂದರಂತೆ ಕಾರ್ಯಕ್ರಮಗಳು ನಿಗದಿಯಾಗಿದ್ದ ಕಾರಣ ಸುಸ್ತು ಅಥವಾ ಇತರ ದೈಹಿಕ ಶ್ರಮದ ವಿಚಾರದ ಬಗ್ಗೆ ಅವರ ಮನಸ್ಸು ಹೆಚ್ಚು ಗಮನ ಹರಿಸಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸದಿಂದ ಭಾನುವಾರ ಸ್ವದೇಶಕ್ಕೆ ಹಿಂದುರಿಗಿದರು. ಪ್ರವಾಸದ ವೇಳೆ ಆಯಾಸಕ್ಕೆ ಲಕ್ಷ್ಯ ಕೊಡದೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮೋದಿ ಅವರಿಗೆ ಹೊಸದೇನಲ್ಲ. 1990ರ ದಶಕದಲ್ಲಿ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ವಿಮಾನಯಾನ ಸಂಸ್ಥೆಯೊಂದಿಗೆ ರಿಯಾಯ್ತಿ ದರದಲ್ಲಿ ಮಾಸಿಕ ಟ್ರಾವೆಲ್ ಪಾಸ್ ಕೊಡುತ್ತಿತ್ತು. ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮೋದಿ ರಾತ್ರಿಯ ಹೊತ್ತೇ ಪ್ರಯಾಣ ಮಾಡುತ್ತಿದ್ದರು. ಹಗಲು ತಿರುಗಾಡುತ್ತಿದ್ದರು. ಹೊಟೆಲ್​ಗಳಿಗೆ ಹಣ ತೆರದ ರೀತಿಯಲ್ಲಿ ಕಾರ್ಯಕ್ರಮ ಯೋಜನೆ ಮಾಡಿಕೊಂಡು, ರಾತ್ರಿಯ ಹೊತ್ತನ್ನು ವಿಮಾನ ನಿಲ್ದಾಣ ಅಥವಾ ವಿಮಾನದಲ್ಲಿ ಕಳೆಯುತ್ತಿದ್ದರು.

ವಿಮಾನದೊಳಗೆ ಕಾಲಿಟ್ಟ ತಕ್ಷಣವೇ ಮೋದಿ ಅವರು ವಿಶ್ರಾಂತಿಗೆ ಮೊರೆ ಹೋಗುತ್ತಿದ್ದರು. ತಲುಪುವ ಸ್ಥಳದ ಟೈಮ್ ಜೋನ್​ಗೆ ತಕ್ಕಂತೆ ನಿದ್ದೆಯನ್ನು ಹೊಂದಿಸಿಕೊಳ್ಳುತ್ತಿದ್ದರು. ಭಾರತದಿಂದ ಹೊರಡುವಾಗ ರಾತ್ರಿಯಾಗಿದ್ದರೂ, ವಿಮಾನ ತಲುಪುವ ದೇಶದಲ್ಲಿ ಆ ಹೊತ್ತಿಗೆ ಹಗಲಿದ್ದರೆ ಮೋದಿ ಮಲಗುತ್ತಿರಲಿಲ್ಲ. ಭಾರತಕ್ಕೆ ಹಿಂದಿರುಗುವಾಗಲೂ ಇದೇ ಕ್ರಮ ಅನುಸರಿಸುತ್ತಿದ್ದರು. ದೇಹ ಮತ್ತು ನಿದ್ದೆಯ ಆವರ್ತನವನ್ನು ಭಾರತದ ಸಮಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಭಾರತದಲ್ಲಿ ವಿಮಾನವು ಲ್ಯಾಂಡ್ ಆದ ನಂತರ ಅವರು ಎಂದಿನಂತೆ ಚುರುಕಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಯಾಣದ ವೇಳೆ ಹೆಚ್ಚು ನೀರು ಕುಡಿಯುವುದನ್ನೂ ಮೋದಿ ಮರೆಯುವುದಿಲ್ಲ. ವಿಮಾನದಲ್ಲಿರುವ ಗಾಳಿ ದೇಹದ ತೇವಾಂಶವನ್ನು ಹೆಚ್ಚಾಗಿ ಹೀರಿಕೊಳ್ಳುವುದರಿಂದ ಹೆಚ್ಚು ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ಮಾಡುತ್ತಾರೆ. ಅಮೆರಿಕದಲ್ಲಿದ್ದ 65 ಗಂಟೆಗಳ ಅವಧಿಯಲ್ಲಿ ಮೋದಿ 20 ಮೀಟಿಂಗ್​ಗಳಲ್ಲಿ ಪಾಲ್ಗೊಂಡಿದ್ದರು. ಅಮೆರಿಕಕ್ಕೆ ಹೋಗುವಾಗ ಮತ್ತು ಅಲ್ಲಿಂದ ಹಿಂದಿರುಗುವಾಗ ಅಧಿಕಾರಿಗಳೊಂದಿಗೆ ನಾಲ್ಕು ಸುದೀರ್ಘ ಮೀಟಿಂಗ್​ಗಳಲ್ಲಿಯೂ ಮೋದಿ ಪಾಲ್ಗೊಂಡಿದ್ದರು.

ಅಮೆರಿಕದಲ್ಲಿದ್ದ 65 ಗಂಟೆಗಳಲ್ಲಿ 20 ಸಭೆಗಳಲ್ಲಿ ಭಾಗವಹಿಸಿದ್ದ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 20 ಸಭೆಗಳಲ್ಲಿ ಪಾಲ್ಗೊಂಡಿದ್ದರು ಎಂದು ಭಾನುವಾರ ಸರ್ಕಾರದ ಮೂಲಗಳು ತಿಳಿಸಿವೆ. ಇದರ ಹೊರತಾಗಿ ವಿಮಾನದಲ್ಲಿಯೇ ಅಧಿಕಾರಿಗಳೊಂದಿಗೆ ನಾಲ್ಕು ಸುದೀರ್ಘ ಸಭೆಗಳನ್ನು ನಡೆಸಿದ್ದರು. ಸೆ.23ರಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಜಪಾನ್ ಪ್ರಧಾನಿ ಯೊಶಿಹಿದೆ ಸುಗಾ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿಸನ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ ಕುರಿತು ಸಭೆಗಳನ್ನು ನಡೆಸಿದ್ದರು. ಮೂರು ಆಂತರಿಕ ಸಭೆಗಳ ಅಧ್ಯಕ್ಷತೆಯನ್ನೂ ಮೋದಿ ವಹಿಸಿದ್ದರು. ಮಾರನೇ ದಿನ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ, ಕ್ವಾಡ್ ಸಭೆಯಲ್ಲಿಯೂ ಪಾಲ್ಗೊಂಡಿದ್ದರು. ಸೆ.24ರಂದು ನಾಲ್ಕು ಆಂತರಿಕ ಸಭೆಗಳಲ್ಲಿ ಪಾಲ್ಗೊಂಡಿದ್ದರು.

ಸೆ.25ರಂದು ಅಮೆರಿಕದಿಂದ ಹೊರಟ ನರೇಂದ್ರ ಮೋದಿ ವಿಮಾನದಲ್ಲಿ ಎರಡು ಸಭೆಗಳನ್ನು ನಡೆಸಿದ್ದರು. ವಿದೇಶ ಪ್ರವಾಸದ ವೇಳೆ ಸಮಯವನ್ನು ತುಸುವೂ ವ್ಯರ್ಥವಾಗದಂತೆ ಅತಿಮುಖ್ಯ ಸಭೆಗಳನ್ನು ಆಯೋಜಿಸಿಕೊಳ್ಳುವುದು ಮೋದಿ ಕಾರ್ಯವೈಖರಿಯ ಭಾಗವಾಗಿದೆ.

(PM Narendra Modi keep jetlag away during foreign trips jam packed meeting and time scheduling is the key)

ಇದನ್ನೂ ಓದಿ: ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ತಂದ ಪ್ರಧಾನಿ ಮೋದಿ; ಇಲ್ಲಿವೆ ಫೋಟೋಗಳು

ಇದನ್ನೂ ಓದಿ: Mann ki Baat: ವಿಶ್ವ ನದಿಗಳ ದಿನವನ್ನು ನೆನಪಿಸಿದ ಪ್ರಧಾನಿ ಮೋದಿ; ವರ್ಷಕ್ಕೊಮ್ಮೆಯಾದರೂ ನದಿಗಳ ಉತ್ಸವ ನಡೆಸಲು ಮನ್​ ಕೀ ಬಾತ್​​ನಲ್ಲಿ ಕರೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ