Narendra Modi Birthday: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ, ಗೃಹ ಸಚಿವ ಸೇರಿ ಗಣ್ಯರ ಶುಭಾಶಯ, ದಿಟ್ಟ ನಾಯಕನೆಂದು ಬಣ್ಣನೆ

PM Modi Birthday: ಗೃಹ ಸಚಿವರ ಅಮಿತ್​ ಶಾ ಅವರು ಮೂರು ಟ್ವೀಟ್ ಮಾಡಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ. ‘ನಮ್ಮ ದೇಶವು ಪ್ರಧಾನಿ ಮೋದಿಯವರ ರೂಪದಲ್ಲಿಅತ್ಯಂತ ಶಕ್ತಿಯುತ ಮತ್ತು ನಿರ್ಣಾಯಕ ನಾಯಕತ್ವವನ್ನು ಪಡೆದಿದೆ ಎಂದಿದ್ದಾರೆ.

Narendra Modi Birthday: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ, ಗೃಹ ಸಚಿವ ಸೇರಿ ಗಣ್ಯರ ಶುಭಾಶಯ, ದಿಟ್ಟ ನಾಯಕನೆಂದು ಬಣ್ಣನೆ
ಪ್ರಧಾನಿ ನರೇಂದ್ರ ಮೋದಿ
Follow us
| Updated By: Lakshmi Hegde

Updated on:Sep 17, 2021 | 8:48 AM

ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 71ನೇ ಹುಟ್ಟುಹಬ್ಬದ ಸಂಭ್ರಮ (Prime Minister Narendra Modi Birthday). ಇಡೀ ದೇಶಾದ್ಯಂತ ಬಿಜೆಪಿ ಮಾತ್ರವಲ್ಲದೆ, ಜನಸಾಮಾನ್ಯರೂ ಕೂಡ ಆಚರಣೆ ಮಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿಯಂತೂ ನೂರೆಂಟು ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಜಾರಿಗೊಳಿಸಿದ ಯೋಜನೆಗಳನ್ನು ದೊಡ್ಡ ಪರದೆಗಳ ಮೇಲೆ ತೋರಿಸುವುದು,  ಮೋದಿಯವರ ಜೀವನವನ್ನು ಸಾರುವ ವಸ್ತುಪ್ರದರ್ಶನ, ರಕ್ತದಾನ ಶಿಬಿರಗಳು, ಕೊವಿಡ್​ 19 ಲಸಿಕಾ ಸೇವಾ ಅಭಿಯಾನ, ಸ್ವಚ್ಛತಾ ಅಭಿಯಾನಗಳನ್ನು ಬಿಜೆಪಿ ಆಯೋಜಿಸಿದ್ದು, ಇಡೀ ದಿನ ದೇಶಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ. 

ಅಂದಹಾಗೆ ಈ ಕಾರ್ಯಕ್ರಮಗಳನ್ನು ಇಂದಿನಿಂದ ಅಕ್ಟೋಬರ್​ 7ರವರೆಗೆ ನಡೆಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಸೆಪ್ಟೆಂಬರ್​ 25ರಂದು ಪಂಡಿತ್​ ದೀನ್​ ದಯಾಳ್​ ಜನ್ಮದಿನ, ಅಕ್ಟೋಬರ್​ 2ರಂದು ಗಾಂಧೀ ಜಯಂತಿ ಹಾಗೂ ಅಕ್ಟೋಬರ್​ 7ಕ್ಕೆ ಸರಿಯಾಗಿ ನರೇಂದ್ರ ಮೋದಿಯವರು ಸರ್ಕಾರಗಳ ಮುಖ್ಯಸ್ಥರಾಗಿ 20ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಮೂರು ವಾರಗಳ ಕಾಲ ಸೇವಾ ಅಭಿಯಾನ ನಡೆಯಲಿದೆ.

ಇಂದು 71ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್​, ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿ ಹಲವು ಗಣ್ಯರು ಶುಭಕೋರಿದಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್​ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ‘ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೆ ದೇವರು ಆಯುರಾರೋಗ್ಯ ನೀಡಲಿ. ಹಾಗೇ, ನಿಮ್ಮ ಅಹರ್ನಿಶಂ​ ಸೇವಾಮಹೆ (ಸ್ವಂತಕ್ಕಿಂತ ಸೇವೆ ಮೊದಲು) ಎಂಬ ಜಟಿಲ ಮಂತ್ರದೊಂದಿಗೆ ದೇಶಸೇವೆಯನ್ನು ಮುಂದುವರಿಸಿ ಎಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.

ಗೃಹ ಸಚಿವರ ಅಮಿತ್​ ಶಾ ಅವರು ಮೂರು ಟ್ವೀಟ್ ಮಾಡಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ. ‘ನಮ್ಮ ದೇಶವು ಪ್ರಧಾನಿ ಮೋದಿಯವರ ರೂಪದಲ್ಲಿಅತ್ಯಂತ ಶಕ್ತಿಯುತ ಮತ್ತು ನಿರ್ಣಾಯಕ ನಾಯಕತ್ವವನ್ನು ಪಡೆದಿದೆ. ದಶಕಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದ ಬಡ ಜನರಿಗೆ ಅದನ್ನು ಒದಗಿಸಿಕೊಡುವ ಮೂಲಕ ಒಂದು ಘನತೆಯುಕ್ತ ಜೀವನ ಒದಗಿಸಿಕೊಟ್ಟಿದ್ದಾರೆ. ಹಾಗೇ, ತಮ್ಮ ದಣಿವರಿಯದ ಕೆಲಸ ಮೂಲಕವೇ ಪ್ರಸಿದ್ಧರಾಗಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರವೆಂದರೆ ಏನೆಂದು ಇಡೀ ಜಗತ್ತಿಗೆ ತೋರಿಸಿದ್ದಾರೆ’ ಎಂದು ಒಂದು ಟ್ವೀಟ್​​ನಲ್ಲಿ ಅಮಿತ್​ ಶಾ ಹೇಳಿದ್ದಾರೆ.  ಹಾಗೇ, ಭದ್ರತೆ, ಬಡವರ ಕಲ್ಯಾಣ, ಅಭಿವೃದ್ಧಿ ಮತ್ತು ಐತಿಹಾಸಿಕ ಸುಧಾರಣೆಗಳನ್ನು ಸಮನ್ವಯತೆಯಿಂದ ಹೇಗೆ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಮೋದಿಯವರ ದೃಢ ನಿಶ್ಚಯಗಳು ದೇಶವಾಸಿಗಳಲ್ಲಿ ಕೂಡ ಹೊಸ ಶಕ್ತಿ ಸೃಷ್ಟಿಸಿವೆ. ಹೀಗಾಗಿ ದೇಶವು ಹೊಸ ದಾಖಲೆಗಳನ್ನು ನಿರ್ಮಿಸುವಲ್ಲಿ, ಸ್ವಾವಲಂಬಿಯಾಗುವತ್ತ ಮುನ್ನಡೆದಿದೆ ಎಂದೂ ಅಮಿತ್​ ಶಾ ಹೇಳಿದರು.

ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಟ್ವೀಟ್ ಹೀಗಿದೆ: ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಪ್ರಧಾನಿ ಮೋದಿಯವರು ದೃಢ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಕಲ್ಪನಾ ಶೀಲತೆ ಮತ್ತು ದೂರದೃಷ್ಟಿಗೆ ಹೆಸರಾದವರು. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಹೊರಟಿರುವ ಅವರ ಸಂಕಲ್ಪ, ಮೋದಿಯವರ ದೂರದೃಷ್ಟಿ, ಇಚ್ಛಾಶಕ್ತಿಯ ಸಂಕೇತವಾಗಿದೆ’ .

ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್​ ಟ್ವೀಟ್ ಮಾಡಿ, ಕಷ್ಟದ ಸಮಯದಲ್ಲಿ ಸಿಕ್ಕ ಸೂಕ್ತ ನಾಯಕ ನರೇಂದ್ರ ಮೋದಿ. ಭಾರತ ಮಾತೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ..ಹಾಗೇ, ಭಾರತ ಮಾತೆಯ ಮಾರ್ಗದರ್ಶನ ಅವರಿಗೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಡಿ ಕೆಲಸ ಮಾಡಲು ನಮಗೆ ಹೆಮ್ಮೆಯಾಗುತ್ತದೆ. ಅವರಿಗೆ ದೀರ್ಘ ಆಯುಷ್ಯ, ಆರೋಗ್ಯವನ್ನು ದೇವರು ಪ್ರಾರ್ಥಿಸಲಿ ಎಂದು ಹೇಳಿದ್ದಾರೆ. ಹಾಗೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಟ್ವೀಟ್​ ಮಾಡಿ, ಸ್ವಾವಲಂಬಿ ಭಾರತದ ಮಹಾನ್​ ಸಂಕಲ್ಪ ಹೊತ್ತ ಮೋದಿಯವರು ಅತ್ಯಂತ ಯಶಸ್ವಿ ಪ್ರಧಾನಿ. ಅವರಿಗೆ ನನ್ನ ಹೃದಯಾಂತರಾಳದ ಶುಭಾಶಯಗಳು ಎಂದು ಹೇಳಿದ್ದಾರೆ.

ಹಾಗೇ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ಸ್ವಾತಂತ್ರ್ಯದ ನಂತರ ಭಾರತಕ್ಕೆ ದೊರೆತ ಒಬ್ಬ ದಿಟ್ಟ ಸ್ಪಷ್ಟ, ಸಮರ್ಥ ನಾಯಕ. ಜನರಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸಿ ಹೊಸ ಭಾರತ ಕಟ್ಟಲು ಅಣಿಯಾಗಿರುವಂತಹ ನೆಚ್ಚಿನ ಪ್ರಧಾನಿ ಮೋದಿಜೀ ಅವರಿಗೆ ಶುಭಾಶಯಗಳು ಎಂದು ಹೇಳಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್​, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಗಳು, ಅವರ ಜೀವನದ ಹಾದಿ ತೋರಿಸುವ ಸಣ್ಣ ವಿಡಿಯೋ ಕೂಡ ಶೇರ್​ ಮಾಡಿದ್ದಾರೆ. ಇನ್ನುಳಿದಂತೆ ಎಲ್ಲ ಕೇಂದ್ರ ಸಚಿವರೂ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ ಮಾಡಿದ್ದಾರೆ.

ಇದನ್ನೂ ಓದಿ: PM Modi Birthday, Karnataka LIVE News: 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ

Published On - 8:36 am, Fri, 17 September 21

ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು