ದೆಹಲಿ: ಪಂಜಾಬ್ ರೈತರ ಮನವೊಲಿಸಲು ಕೇಂದ್ರ ಸರ್ಕಾರ ನಾನಾ ಬಗೆಯ ಕಸರತ್ತಿನಲ್ಲಿ ತೊಡಗಿರುವುದು ಸ್ಪಷ್ಟವಾಗುತ್ತಿದೆ. ಈಗಾಗಲೇ ಜಾರಿಗೆ ಬಂದಿರುವ ನೂತನ ಕೃಷಿ ಮಸೂದೆಗಳು ರೈತರ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ಬಿಜೆಪಿ ನಾಯಕರು ಪದೇ ಪದೇ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇತ್ತ ಪ್ರಧಾನಿ ನರೇಂದ್ರ ಮೋದಿ, ಭಾಗವಹಿಸುತ್ತಿರುವ ಎಲ್ಲಾ ಕಾರ್ಯಕ್ರಮಗಳಲ್ಲೂ ಕೃಷಿ ಕಾಯ್ದೆಗಳ ಕುರಿತು ಮಾತನಾಡುತ್ತಿದ್ದಾರೆ. ಅಲ್ಲದೇ, ಕೃಷಿ ಕ್ಷೇತ್ರದಲ್ಲಿ ತಂದ ಬದಲಾವಣೆಗಳು ದೇಶದ ರೈತರಿಗೆ ಹೇಗೆ ವರದಾಯಕವಾಗಿದೆ ಎಂದು ವಿವರಿಸಿ ಈ- ಬುಕ್ಲೆಟ್ ಒಂದನ್ನು ಹೊರತಂದಿದ್ದಾರೆ.
ಹಿಂದಿ ಮತ್ತು ಇಂಗ್ಲೀಷ್ನಲ್ಲಿರುವ ಈ-ಬುಕ್ಲೆಟ್ನಲ್ಲಿ ಕೃಷಿ ಸುಧಾರಣೆಗಳು ರೈತರ ಯಶಸ್ಸಿಗೆ ಕಾರಣವಾದ ಬಗೆಯನ್ನು ವಿವರಿಸಲಾಗಿದೆ. ಈ-ಬುಕ್ಲೆಟ್ನ್ನು ದೇಶದ ಜನತೆ ಓದುವಂತೆ ಅವರು ಮನವಿ ಮಾಡಿದ್ದಾರೆ.
There is a lot of content, including graphics and booklets that elaborate on how the recent Agro-reforms help our farmers. It can be found on the NaMo App Volunteer Module’s Your Voice and Downloads sections. Read and share widely. https://t.co/TYuxNNJfIf pic.twitter.com/BHfE4F410k
— Narendra Modi (@narendramodi) December 19, 2020
ಸಿಖ್ ಸಮುದಾಯದ 10 ಗುರುಗಳಲ್ಲಿ ಒಂಭತ್ತನೆಯವರಾದ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನದಂದು ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ. 1975ರಲ್ಲಿ ಮೊಘಲ್ ದೊರೆ ಔರಂಗಜೇಬ್ ಗುರು ತೇಜ್ ಸಿಂಗ್ ಬಹದ್ದೂರ್ರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿದ. ಅಂದಿನಿಂದ ಗುರು ತೇಜ್ ಬಹದ್ದೂರ್ ಹುತಾತ್ಮರಾದ ದಿನವನ್ನು ‘ಶಹೀದ್ ದಿವಸ್’ ಎಂದು ಸಿಖ್ ಸಮುದಾಯ ಆಚರಿಸುತ್ತದೆ. ಗುರು ತೇಜ್ ಬಹದ್ದೂರ್ ಅವರನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಅವರ ತತ್ವಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕಿದೆ’ಎಂದು ಟ್ವೀಟ್ ಮಾಡಿದ್ದಾರೆ.
Sri Guru Tegh Bahadur Ji’s life epitomised courage and compassion.
On his Shaheedi Diwas, I bow to the great Sri Guru Tegh Bahadur Ji and recall his vision for a just and inclusive society.
— Narendra Modi (@narendramodi) December 19, 2020
ವರ್ಷದಲ್ಲೇ ಅತಿ ಹೆಚ್ಚು ಚಳಿ ಕಂಡ ದೆಹಲಿ
ಇಂದು ರಾಷ್ಟ್ರ ರಾಜಧಾನಿ ದೆಹಲಿ ಈ ಚಳಿಗಾಲದ ಅತ್ಯಂತ ತೀವ್ರ ಚಳಿಯಲ್ಲಿ ಗಡಗಡ ನಡುಗಿತು. ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಇಂದು ಅತಿ ಕನಿಷ್ಠ 3.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದೆ. ಆದರೂ, ಪಂಜಾಬ್ ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ.