ವಯನಾಡು ಭೂಕುಸಿತ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಮೋದಿ

|

Updated on: Aug 10, 2024 | 4:27 PM

ವಿಪತ್ತು ಪೀಡಿತ ಪ್ರದೇಶಗಳಾದ ವಯನಾಡಿನ ಮುಂಡಕೈ-ಚೂರಲ್​​ಮಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಅವರ ಜತೆಗಿದ್ದ ಅಧಿಕಾರಿಗಳು ದುರಂತದ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ವಿವರಿಸಿದರು. ನಂತರ ಪ್ರಧಾನಿಯವರು ಪರಿಹಾರ ಶಿಬಿರವನ್ನು ತಲುಪಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಪ್ರಧಾನಿ ಭೇಟಿ ಮಾಡಿದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಪ್ರಧಾನಿ ಜೊತೆಗಿದ್ದರು.

ವಯನಾಡು ಭೂಕುಸಿತ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಮೋದಿ
ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮೋದಿ
Follow us on

ಮೇಪ್ಪಾಡಿ: ಭೂಕುಸಿತದಿಂದ ಧ್ವಂಸಗೊಂಡ ವಯನಾಡು (Wayanad) ಚೂರಲ್​​ಮಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi)ಇಂದು (ಶನಿವಾರ) ಭೇಟಿ ನೀಡಿದ್ದಾರೆ. ಕಲ್ಪಟ್ಟಾದಿಂದ ರಸ್ತೆ ಮಾರ್ಗವಾಗಿ ಚೂರಲ್​​ಮಲ ತಲುಪಿದ ಮೋದಿ, ವೆಳ್ಳಾರ್​​​ಮಲ ಶಾಲೆಯ ಹಿಂದಿನ ಹದಗೆಟ್ಟ ರಸ್ತೆಯಲ್ಲಿ ನಡೆದು ಅಲ್ಲಿನ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯದರ್ಶಿ ವಿ.ವೇಣು, ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಮತ್ತು ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಅವರು ಪ್ರಧಾನಿಗೆ ಮಾಹಿತಿ ನೀಡಿದರು.

ಪ್ರಧಾನಿ ನಡೆದಾಡುವ ಈ ರಸ್ತೆಯ ಬಳಿ ಹಲವು ಮನೆಗಳಿದ್ದವು. ಈಗ ಈ ಭಾಗ ಕಲ್ಲುಗಳಿಂದ ತುಂಬಿದೆ. ಬಳಿಕ ಅದೇ ಮಾರ್ಗವಾಗಿ ಹಿಂತಿರುಗಿ ಸೇನೆ ನಿರ್ಮಿಸಿರುವ ಬೈಲಿ ಸೇತುವೆ ಮೂಲಕ ನಡೆದುಕೊಂಡು ಬಂದಿದ್ದಾರೆ ಮೋದಿ. ಮಿಷನ್ ತಂಡವು ದುರಂತದ ಪ್ರಮಾಣವನ್ನು ಮೋದಿಯವರಿಗೆ ವಿವರಿಸಿದೆ. ಕಣ್ಣೂರಿಗೆ ಬಂದಿಳಿದ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ವಯನಾಡ್ ತಲುಪಿದರು.

ದುರಂತ ಸ್ಥಳಕ್ಕೆ ಭೇಟಿ ನೀಡಿದ ನಂತರ ವಯನಾಡ್ ಕಲೆಕ್ಟರೇಟ್ ತಲುಪಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಕಣ್ಣೂರಿಗೆ ಹಿಂತಿರುಗಿ ಸಂಜೆ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಮರಳಲಿದ್ದಾರೆ.

ವಯನಾಡ್ ಭೂಕುಸಿತದ ಸಂತ್ರಸ್ತರೊಂದಿಗೆ ಪ್ರಧಾನಿ ಮೋದಿ ಸಂವಾದ


ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರು ಮತ್ತು ಬದುಕುಳಿದವರನ್ನು ಭೇಟಿ ಮಾಡಲು ಮತ್ತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.


ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರು ಮತ್ತು ಬದುಕುಳಿದವರನ್ನು ಭೇಟಿ ಮಾಡಲು ಮತ್ತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ: ವಯನಾಡ್​​ನಲ್ಲಿ ವೈಮಾನಿಕ ಸಮೀಕ್ಷೆ; ಕಲ್ಪಟ್ಟಾದಿಂದ ಚೂರಲ್​​​ಮಲಗೆ ಪ್ರಯಾಣಿಸಿದ ಮೋದಿ

ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ತೆರವು ಕಾರ್ಯಗಳ ಕುರಿತು ಅವರಿಗೆ ಮಾಹಿತಿ ನೀಡಲಾಗುತ್ತಿದೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಿಎಂ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಜೊತೆಗಿದ್ದರು.


ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಯನಾಡಿನ ವಿಪತ್ತು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಅಧಿಕಾರಿಗಳಿಂದ ತೆರವು ಕಾರ್ಯಗಳ ಕುರಿತು ಮಾಹಿತಿ ಪಡೆದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Sat, 10 August 24