Syed Ali Shah Geelani ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ; ಕಾಶ್ಮೀರದಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ಹೇರಿಕೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 02, 2021 | 11:02 AM

ಗಿಲಾನಿ ಸಾವಿನ ನಂತರ ಬುಧವಾರ ತಡರಾತ್ರಿ ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.

Syed Ali Shah Geelani ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ; ಕಾಶ್ಮೀರದಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ಹೇರಿಕೆ
ಸೈಯದ್ ಅಲಿ ಶಾ ಗಿಲಾನಿ
Follow us on

ಶ್ರೀನಗರ: ಪಾಕಿಸ್ತಾನ ಪರ ಕಾಶ್ಮೀರಿ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ (Syed Ali Shah Geelani) ಅವರು ಬುಧವಾರ ಸಂಜೆ ಶ್ರೀನಗರದ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ರಾಜಕಾರಣದ ಮುಖವಾಗಿದ್ದ ಇಸ್ಲಾಮಿಸ್ಟ್ ನಾಯಕ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವರ್ಷ ರಾಜಕೀಯ ಮತ್ತು ಹುರಿಯತ್‌ಗೆ ರಾಜೀನಾಮೆ ನೀಡಿದ್ದರು. ಇಂದು ಬೆಳಿಗ್ಗೆ ಅಂತ್ಯಕ್ರಿಯೆ ನಡೆದಿದೆ.

ಗಿಲಾನಿ ಸಾಹಬ್ ಅವರ ನಿಧನದ ಸುದ್ದಿಯಿಂದ ದುಃಖಿತರಾಗಿದ್ದೇವೆ. ನಾವು ಹೆಚ್ಚಿನ ವಿಷಯಗಳಲ್ಲಿ ಒಪ್ಪಿಕೊಂಡಿಲ್ಲದಿರಬಹುದು ಆದರೆ ಅವರ ದೃಢತೆ ಮತ್ತು ಅವರ ನಂಬಿಕೆಗಳ ನಿಲುವಿಗೆ ನಾನು ಅವರನ್ನು ಗೌರವಿಸುತ್ತೇನೆ. ಅಲ್ಲಾ ತಾಲಾ ಅವರಿಗೆ ಜನ್ನತ್ ನೀಡಲಿ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಸಂತಾಪ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.


ಗಿಲಾನಿ ಸಾವಿನ ನಂತರ ಬುಧವಾರ ತಡರಾತ್ರಿ ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ
ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಹೈದರ್‌ಪೋರಾದಲ್ಲಿ ಗಿಲಾನಿಯವರ ಮನೆಯ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ. ಬಿಎಸ್‌ಎನ್‌ಎಲ್ ಹೊರತುಪಡಿಸಿ ಮೊಬೈಲ್ ಫೋನ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಹುರಿಯತ್‌ನ ಕೆಲವು ಹಿರಿಯ ಸದಸ್ಯರನ್ನು ಬಂಧಿಸಲಾಗಿದೆ. ಹಿರಿಯ ಹುರಿಯತ್ ನಾಯಕ ಮುಕ್ತಾರ್ ಅಹ್ಮದ್ ವಾಜಾ ಅವರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಪಟ್ಟಣದಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ.

ಪಾಕಿಸ್ತಾನ ಮತ್ತು ಅದರ ಸೇನಾ ಗುಪ್ತಚರ ಸಂಸ್ಥೆ ಐಎಸ್ಐ ದೂರವಿಟ್ಟ ನಂತರ 27 ವರ್ಷಗಳ ಒಡನಾಟದಿಂದ ಗಿಲಾನಿ ಪ್ರತ್ಯೇಕತಾವಾದಿ ಸಂಘಟನೆಯನ್ನು ತೊರೆದರು ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿರುವುದಾಗಿ ಎನ್​​ ಡಿಟಿವಿ ವರದಿಮಾಡಿದೆ.

ಕಾಶ್ಮೀರ ಕಣಿವೆಯ ಅತಿದೊಡ್ಡ ಪ್ರತ್ಯೇಕತಾವಾದಿ ಒಕ್ಕೂಟದಿಂದ ಕೆಳಗಿಳಿಯುವಾಗ ಅದು ತನ್ನ ವಿರುದ್ಧ ಪಿತೂರಿ ನಡೆಸಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರವು ರದ್ದುಗೊಳಿಸಿದ ನಂತರ ಪ್ರತ್ಯೇಕತಾವಾದಿ ಚಳುವಳಿಯನ್ನು ಮುನ್ನಡೆಸಲು ವಿಫಲವಾಗಿದೆ ಎಂದು ಗಿಲಾನಿ ಆರೋಪಿಸಿದರು.

ಗಿಲಾನಿಯ ಪತ್ರವು ಕಣ್ಣು ತೆರೆಸುವಂತಿತ್ತು. ಕಾಶ್ಮೀರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಎನ್ ಡಿಟಿವಿಗೆ ಹೇಳಿದ್ದಾರೆ .

ಸೈಯದ್ ಅಲಿ ಶಾ ಗಿಲಾನಿ 1972, 1977 ಮತ್ತು 1987 ರಲ್ಲಿ ಸೋಪೋರ್ ಕ್ಷೇತ್ರದಿಂದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗಿದ್ದರು.


ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟ್ವಿಟರ್‌ನಲ್ಲಿ ಗಿಲಾನಿಯವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ರಾಷ್ಟ್ರವು ಶೋಕಾಚರಣೆಯ ದಿನವನ್ನು ಆಚರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Coronavirus cases in India: ದೇಶದಲ್ಲಿ 47,092 ಹೊಸ ಕೊವಿಡ್ ಪ್ರಕರಣ ಪತ್ತೆ, 509 ಮಂದಿ ಸಾವು

(Pro-Pakistan Kashmiri separatist Syed Ali Shah Geelani Dies Curfew like restrictions imposed in Kashmir)

 

Published On - 10:46 am, Thu, 2 September 21