ಹಿರಿಯ ಪತ್ರಕರ್ತ, ಬಿಜೆಪಿ ಮಾಜಿ ರಾಜ್ಯಸಭಾ ಎಂಪಿ ಚಂದನ್​ ಮಿತ್ರಾ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Chandan Mitra: ಚಂದನ್​ಮಿತ್ರಾ ಮೂಲತಃ ಪಶ್ಚಿಮ ಬಂಗಾಳದ ಹೌರಾಹ್​​ನವರು. ದೆಹಲಿಯ ಪತ್ರಿಕೆಯೊಂದರ ಸಂಪಾದಕರಾಗಿದ್ದರು. ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯರಾಗಿ 2010ರಲ್ಲಿ ಮಧ್ಯಪ್ರದೇಶದಿಂದ ಆಯ್ಕೆಯಾಗಿದ್ದರು.

ಹಿರಿಯ ಪತ್ರಕರ್ತ, ಬಿಜೆಪಿ ಮಾಜಿ ರಾಜ್ಯಸಭಾ ಎಂಪಿ ಚಂದನ್​ ಮಿತ್ರಾ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಚಂದನ್ ಮಿತ್ರಾ
Follow us
TV9 Web
| Updated By: Lakshmi Hegde

Updated on:Sep 02, 2021 | 10:02 AM

ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ, ಹಿರಿಯ ಪತ್ರಕರ್ತ ಚಂದನ್​ ಮಿತ್ರಾ (66) ನಿನ್ನೆ ತಡರಾತ್ರಿ ನಿಧನರಾದರು. ತಂದೆಯ ನಿಧನದ ಬಗ್ಗೆ ಅವರ ಪುತ್ರ ಕುಶನ್​ ಮಿತ್ರಾ ಎಎನ್​ಐಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಅವರಿಗೆ ಅಸೌಖ್ಯವಿತ್ತು ಎಂದು ತಿಳಿಸಿದ್ದಾರೆ. ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಚಂದನ್​ ಮಿತ್ರ ನಂತರ ಆ ಹುದ್ದೆಯನ್ನು ತೊರೆದಿದ್ದರು. 2018ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು ಎಂದೂ ಹೇಳಲಾಗಿದೆ. ಹಾಗೇ, ಈ ವರ್ಷ ಜೂನ್​ನಲ್ಲಿ ಪತ್ರಕರ್ತ ಹುದ್ದೆಯನ್ನೂ ಬಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.  

ಚಂದನ್​ಮಿತ್ರಾ ಮೂಲತಃ ಪಶ್ಚಿಮ ಬಂಗಾಳದ ಹೌರಾಹ್​​ನವರು. ದೆಹಲಿಯ ಪತ್ರಿಕೆಯೊಂದರ ಸಂಪಾದಕರಾಗಿದ್ದರು. ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯರಾಗಿ 2010ರಲ್ಲಿ ಮಧ್ಯಪ್ರದೇಶದಿಂದ ಆಯ್ಕೆಯಾಗಿದ್ದರು.  2016ರವರೆಗೆ ರಾಜ್ಯಸಭಾ ಎಂಪಿಯಾಗಿ ಮುಂದುವರಿದು ನಂತರ ಬಿಜೆಪಿಯನ್ನೇ ತೊರೆದಿದ್ದರು. 2018ರಲ್ಲಿ ಟಿಎಂಸಿ ಸೇರ್ಪಡೆಯಾಗಿದ್ದರು.

ಪ್ರಧಾನಿ ಮೋದಿ ಸಂತಾಪ ಚಂದನ್​ ಮಿತ್ರಾ, ಅಪರ ಬುದ್ಧಿ ಶಕ್ತಿ ಮತ್ತು ಒಳನೋಟ ಹೊಂದಿದ್ದವರು. ಮಾಧ್ಯಮ ಮತ್ತು ರಾಜಕೀಯ ಜೀವನದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ತುಂಬ ನೋವಾಗಿದೆ. ಓಂ ಶಾಮತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಜ್ಯಸಭಾ ಸದಸ್ಯ ಸ್ವಪನ್​ ದಾಸ್​ ಗುಪ್ತಾ ಟ್ವೀಟ್​ ಮೂಲಕ ಚಂದನ್​ ಮಿತ್ರಾರಿಗೆ ಸಂತಾಪ ಸೂಚಿಸಿದ್ದಾರೆ. 1972ರಲ್ಲಿ ತಾವಿಬ್ಬರೂ ಒಟ್ಟಿಗೇ ಶಾಲಾ ಪ್ರವಾಸಕ್ಕೆ ಹೋಗಿದ್ದ ಫೋಟೋ ಶೇರ್​ ಮಾಡಿಕೊಂಡಿರುವ ಅವರು, ನಾನು ನನ್ನ ಆಪ್ತಮಿತ್ರನನ್ನು ಕಳೆದುಕೊಂಡಿದ್ದೇನೆ. ನಾವಿಬ್ಬರೂ ಶಾಲಾದಿನಗಳಿಂದಲೂ ಒಟ್ಟಿಗೇ ಇದ್ದವು. ಒಟ್ಟಿಗೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆವು. ಈಗ ಚಂದನ್​ ಇಲ್ಲ..ಅವರು ಎಲ್ಲೇ ಇದ್ದರೂ, ಅಲ್ಲೇ ಖುಷಿಯಾಗಿರಲಿ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ಇದನ್ನೂ ಓದಿ: ವಿಶ್ವ ತೆಂಗು ದಿನ; ತೆಂಗಿನ ಕುರಿತಾಗಿ ತಿಳಿಯಲೇಬೇಕಾದ ಕೆಲವೊಂದಿಷ್ಟು ಕುತೂಹಲಕರ ಸಂಗತಿಗಳು ಇಲ್ಲಿವೆ

Corbevax Covid 19 Vaccine: 5-18ವರ್ಷದವರ ಮೇಲೆ ’ಕಾರ್ಬ್​ವ್ಯಾಕ್ಸ್’ ಲಸಿಕೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ

Published On - 9:53 am, Thu, 2 September 21