ವಿಶ್ವ ತೆಂಗು ದಿನ; ತೆಂಗಿನ ಕುರಿತಾಗಿ ತಿಳಿಯಲೇಬೇಕಾದ ಕೆಲವೊಂದಿಷ್ಟು ಕುತೂಹಲಕರ ಸಂಗತಿಗಳು ಇಲ್ಲಿವೆ
ವಿಶ್ವ ತೆಂಗು ದಿನ 2021: ಪ್ರತಿನಿತ್ಯದ ಅಡುಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ತೆಂಗಿನ ಕುರಿತಾದ ಕೆಲವೊಂದಿಷ್ಟು ಕುತೂಹಲಕರ ಸಂಗತಿಗಳು ಇಲ್ಲಿವೆ.
ಕಲ್ಪ ವೃಕ್ಷವೆಂದು ಪೂಜೆ ಮಾಡುವ ತೆಂಗಿನ ಮರದ ದಿನವಿದು. ಇಂದು ವಿಶ್ವದಾದ್ಯಂತ ತೆಂಗು ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ಮನೆಗಳಲ್ಲಿ ದೇವರೆಂದು ಪೂಜಿಸುವ ಕಲ್ಪವೃಕ್ಷ ಜತೆಗೆ ಹಲವಾರು ಖಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಿರುವ ತೆಂಗಿನ ಕಾಯಿ ಹಾಗೂ ವಿವಿಧ ಖಾದ್ಯಗಳನ್ನು ಮಾಡಿ ರುಚಿ ಸವಿಯುತ್ತಿರುವ ತೆಂಗಿನ ಬಗೆಗಿನ ಕೆಲವೊಂದಿಷ್ಟು ಮಾಹಿತಿಗಳನ್ನು ಇಂದು ತಿಳಿಯಲೇ ಬೇಕು. ಪ್ರತಿನಿತ್ಯದ ಅಡುಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ತೆಂಗಿನ ಕುರಿತಾದ ಕೆಲವೊಂದಿಷ್ಟು ಕುತೂಹಲಕರ ಸಂಗತಿಗಳು ಇಲ್ಲಿವೆ.
ಭಾರತದಲ್ಲಿ ಅಡಿಕೆ, ಬಾಳೆ, ಏಲಕ್ಕಿ, ಕಾಳು ಮೆಣಸು ಜತೆಗೆ ತೆಂಗು ಕೂಡಾ ಕೃಷಿಯ ಭಾಗದಲ್ಲಿ ಒಂದು. ಕೆಲವೆಡೆ ತೆಂಗು ಜನರ ಜೀವನಾಧಾರವಾಗಿದೆ. ಅದೆಷ್ಟೋ ರೈತರ ಜೀವನದ ಪ್ರಮುಖ ಬೆಳೆಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ತೆಂಗು ಕೃಷಿಗೊಂದೇ ಅಲ್ಲ ದೇವರೆಂದೂ ಪೂಜಿಸಲಾಗುತ್ತದೆ. ಪ್ರತಿನಿತ್ಯ ಬಳಸುವ ತೆಂಗಿನ ಕುರಿತಾಗಿ ತಿಳಿಯಬೇಕಾದದ್ದು ಅನೇಕ ಸಂಗತಿಗಳಿವೆ. ಅವುಗಳಲ್ಲಿ ಕೆಲವೊಂದಿಷ್ಟು ಕುತೂಹಲ ಕೆರಳಿಸುವ ಸಂಗತಿಗಳು ಈ ಕೆಳಗಿನಂತಿವೆ.
ಇತಿಹಾಸ 2009ರಲ್ಲಿ ಮೊದಲಿಗೆ ಏಷ್ಯಾ ಫೆಸಿಫಿಕ್ ತೆಂಗಿನ ಸಮುದಾಯ ಈ ದಿನವನ್ನು ಆಚರಿಸಿತು. ಏಷ್ಯಾ ಪೆಸಿಫಿಕ್ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಸಹಯೋಗದೊಂದಿಗೆ ಈ ದಿನವನ್ನು ಸಪ್ಟೆಂಬರ್ 2ರಂದು ಆಚರಿಸಲಾಯಿತು. ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ನಂತರ ಭಾರತದಲ್ಲಿಯೇ ಅತಿ ಹೆಚ್ಚು ತೆಂಗಿನಕಾಯಿ ಬೆಳೆಯಲಾಗುತ್ತದೆ. ಹಾಗಾಗಿ ಭಾರತ ಅತ್ಯಂತ ಸಂಭ್ರಮದಿಂದ ಈ ದಿನವನ್ನು ಆಚರಿಸುತ್ತದೆ. ತೆಂಗು ಅಭಿವೃದ್ಧಿ ಮಂಡಳಿಯು ಇದನ್ನು ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಒಡಿಶಾ ಮೊದಲಾದ ವಿವಿಧ ರಾಜ್ಯಗಳಲ್ಲಿ ಪ್ರಚಾರ ಮಾಡುತ್ತದೆ.
ಈ ವರ್ಷದ ಥೀಮ್ ‘ಕೊವಿಡ್ 19 ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ವಿಶ್ವ ತೆಂಗಿನ ದಿನಾಚರಣೆಯ ದಿನದಂದು ಕೊವಿಡ್ 19 ಸಾಂಕ್ರಾಮಿಕ ಮತ್ತು ಸುರಕ್ಷಿತ ಮತ್ತು ಸುಸ್ಥಿರ ತೆಂಗಿನ ಸಮುದಾಯವನ್ನು ನಿರ್ಮಿಸುವುದು’
ಕುತೂಹಲಕರ ಸಂಗತಿಗಳು ಒಂದು ತೆಂಗಿನ ಮರವು ಪ್ರತೀ ವರ್ಷ ಸುಮಾರು 100 ತೆಂಗಿನ ಕಾಯಿಯನ್ನು ನೀಡುತ್ತದೆ
ತೆಂಗಿನ ಕಾಯಿ ಹಣ್ಣಾಗಳು ಅಥವಾ ಸಂಪೂರ್ಣವಾಗಿ ಬೆಳೆಯಲು ಒಂದು ವರ್ಷ ಸಮಯಬೇಕು
ತೆಂಗಿನಕಾಯಿ ಎಂಬ ಪದವು ಪೊರ್ಚುಗೀಸ್ ಪದವಾದ ಕೊಕೊ ಎಂಬ ಪದದಿಂದ ಹುಟ್ಟಿಕೊಂಡಿದೆ
ಪ್ರಪಂಚದಲ್ಲಿ ಶೇ.90ರಷ್ಟು ತೆಂಗಿನ ಉತ್ಪಾದನೆ ಏಷ್ಯಾದಿಂದ ಬರುತ್ತದೆ
ಇಂಡೋನೇಷ್ಯಾ, ಫಿಲಿಪೈನ್ಸ್, ಬ್ರೆಜಿಲ್ ಮತ್ತು ಶ್ರೀಲಂಕಾದೊಂದಿಗೆ ಭಾರತವು ವಿಶ್ವದ ಅತಿದೊಡ್ಡ ರಫ್ತುದಾರರಲ್ಲಿ ಒಂದಾಗಿದೆ
ಇದನ್ನೂ ಓದಿ:
Ginger Powder: ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ
(world coconut day 2021 know about history important and interesting facts about coconut)
Published On - 9:53 am, Thu, 2 September 21