‘ಗೇಮ್ ಚೇಂಜರ್’ ಚಿತ್ರದ ಕಲಾವಿದರ ಸಂಭಾವನೆ ನೋಡಿ; ನಿರ್ದೇಶಕರಿಗೆ ಇಷ್ಟೊಂದು ಹಣವಾ?
ರಾಮ್ ಚರಣ್ ಅವರು ‘ಆರ್ಆರ್ಆರ್’ ಸಿನಿಮಾ ಬಳಿಕ ‘ಗೇಮ್ ಚೇಂಜರ್’ ಚಿತ್ರದಲ್ಲಿ ತೊಡಗಿಕೊಂಡರು. ಹಲವು ಹಂತಗಳಲ್ಲಿ ಸಿನಿಮಾದ ಶೂಟ್ ನಡೆಯಿತು. ಕರ್ನಾಟಕದ ಮೈಸೂರಿನಲ್ಲಿಯೂ ಚಿತ್ರಕ್ಕೆ ಶೂಟಿಂಗ್ ಮಾಡಲಾಗಿದೆ ಅನ್ನೋದು ವಿಶೇಷ. ಈ ಚಿತ್ರಕ್ಕಾಗಿ ತಂಡದವರು ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.
‘ಗೇಮ್ ಚೇಂಜರ್’ ಚಿತ್ರ ರಿಲೀಸ್ಗೆ ರೆಡಿ ಇದೆ. ಈ ಚಿತ್ರ ಸಂಕ್ರಾಂತಿ ಹಿನ್ನೆಲೆಯಲ್ಲಿ ಜನವರಿ 10ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ರಾಮ್ ಚರಣ್ ಚಿತ್ರ ಎಂಬ ಕಾರಣದಿಂದಲೂ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಕೆಲವರಿಗೆ ಯಾವುದೇ ನಿರೀಕ್ಷೆ ಇಲ್ಲ. ಈ ಚಿತ್ರದ ಕಲಾವಿದರು ಸಿನಿಮಾಗಾಗಿ ದೊಡ್ಡ ಸಂಭಾವನೆ ಪಡೆದಿದ್ದಾರೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ಮಾಹಿತಿ.
‘ಗೇಮ್ ಚೇಂಜರ್’ ಸಿನಿಮಾದಲ್ಲಿ ದೊಡ್ಡ ತಾರಾ ಬಳಗ ಇದೆ. ರಾಮ್ ಚರಣ್, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಶೂಟ್ ಆರಂಭ ಆಗಿ ಕೆಲವು ವರ್ಷಗಳೇ ಕಳೆದಿವೆ. ನಿಧಾನವಾಗಿ ಶೂಟಿಂಗ್ ಮಾಡಿದ್ದರಿಂದ ಚಿತ್ರದ ಬಜೆಟ್ ಹೆಚ್ಚಿದೆ. ಈ ಚಿತ್ರಕ್ಕಾಗಿ ಕಲಾವಿದರು ದೊಡ್ಡ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ.
ಭಾರತೀಯ ಸಿನಿಮಾಗಳಲ್ಲಿ ಹೀರೋಗಳಿಗೆ ಸಂಭಾವನೆಯಲ್ಲಿ ಸಿಂಹ ಪಾಲು ಇರುತ್ತದೆ. ಈಗ ಬಂದಿರೋ ವರದಿ ಪ್ರಕಾರ ರಾಮ್ ಚರಣ್ ಅವರಿಗೆ 65 ಕೋಟಿ ರೂಪಾಯಿ ಸಿಕ್ಕಿದೆ. ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಸಿಕ್ಕಿದ್ದು ಇವರಿಗೆ. ಈ ಮೊದಲು ರಾಮ್ ಚರಣ್ ಅವರು 100 ಕೋಟಿ ರೂಪಾಯಿ ಪಡೆಯುತ್ತಿದ್ದರು. ಆದರೆ, ಈಗ ಏನನ್ನಿಸಿತೋ ಏನೋ ಅವರು ಕೇವಲ 65 ಕೋಟಿ ರೂಪಾಯಿ ಪಡೆದುಕೊಂಡಿದ್ದಾರಂತೆ. ಈ ಮೂಲಕ ಸಂಭಾವನೆ ಕಡಿತಗೊಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ಗೆ ಗೆಲ್ಲೋಕೆ ಉಳಿದಿರೋದು ಒಂದೇ ಮಾರ್ಗ
ಕಿಯಾರಾ ಅಡ್ವಾಣಿ
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ದಕ್ಷಿಣಕ್ಕೆ ಬಂದಿದ್ದಾರೆ. ‘ಗೇಮ್ ಚೇಂಜರ್’ ಚಿತ್ರಕ್ಕೆ ಅವರೇ ನಾಯಕಿ. ಅವರು ಈ ಚಿತ್ರಕ್ಕೆ 5-7 ಕೋಟಿ ರೂಪಾಯಿ ಪಡೆದಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇದೆ ಎಂದು ಹೇಳಲಾಗುತ್ತಿದೆ.
ಶಂಕರ್
ನಿರ್ದೇಶಕ ಶಂಕರ್ ಅವರು ‘ಇಂಡಿಯನ್ 2’ ಮೂಲಕ ಸೋತಿದ್ದಾರೆ. ಅವರಿಗೆ ಈಗ ದೊಡ್ಡ ಗೆಲುವು ಬೇಕಿದೆ. ಅವರು ‘ಗೇಮ್ ಚೇಂಜರ್’ ಚಿತ್ರದ ನಿರ್ದೇಶನಕ್ಕೆ 35 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಒಂದೊಮ್ಮೆ ಈ ಚಿತ್ರವೂ ಸೋತರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟ ಆಗಲಿದೆ.
ಸಿನಿಮಾ ಬಜೆಟ್
‘ಗೇಮ್ ಚೇಂಜರ್’ ಚಿತ್ರದ ಬಜೆಟ್ ಬರೋಬ್ಬರಿ 450 ಕೋಟಿ ರೂಪಾಯಿ ಇದೆ. ಈ ಸಿನಿಮಾದಲ್ಲಿ ಎಸ್ಜೆ ಸೂರ್ಯ, ನಾಸರ್, ವೆನೆಲಾ ಕಿಶೋರ್, ಮುರುಳಿ ಶರ್ಮಾ, ಜಯರಾಮ್, ಅಂಜಲಿ, ಪ್ರಕಾಶ್ ರಾಜ್ ಮೊದಲಾದವರನ್ನು ಒಳಗೊಂಡಿದೆ. ಈ ಚಿತ್ರವನ್ನು ದಿಲ್ ರಾಜು, ಆದಿತ್ಯರಾಮ್. ಸಿರೀಶ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಇತ್ತೀಚೆಗೆ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Thu, 9 January 25