Corbevax Covid 19 Vaccine: 5-18ವರ್ಷದವರ ಮೇಲೆ ’ಕಾರ್ಬ್​ವ್ಯಾಕ್ಸ್’ ಲಸಿಕೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ

ಬಯಾಲಜಿಕಲ್​ ಇ  ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕಾರ್ಬ್​ವ್ಯಾಕ್ಸ್​ ಲಸಿಕೆ ಆರ್​ಬಿಡಿ ಪ್ರೋಟಿನ್​ ಸಬ್​ ಯೂನಿಟ್​ ಲಸಿಕೆಯಾಗಿದ್ದು, ಇದು ಮೂರು ಡೋಸ್​ಗಳನ್ನು ಪಡೆಯಬೇಕಾಗುತ್ತದೆ. 

Corbevax Covid 19 Vaccine: 5-18ವರ್ಷದವರ ಮೇಲೆ ’ಕಾರ್ಬ್​ವ್ಯಾಕ್ಸ್’ ಲಸಿಕೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ
ಲಸಿಕೆ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Sep 02, 2021 | 9:39 AM

5-18ವರ್ಷದವರ ಮೇಲೆ ಕೊವಿಡ್​ 19 ಲಸಿಕೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಲು ಹೈದರಾಬಾದ್​ ಮೂಲದ ಔಷಧೀಯ ಕಂಪನಿ ಬಯಾಲಜಿಕಲ್​ ಇ ಲಿಮಿಟೆಡ್​ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI) ಅನುಮತಿ ನೀಡಿದೆ. ಬಯಾಲಜಿಕಲ್​ ಇ ಕಂಪನಿ ಅಭಿವೃದ್ಧಿ ಪಡಿಸಿರುವ ಲಸಿಕೆ ಹೆಸರು ಕಾರ್ಬ್​ವ್ಯಾಕ್ಸ್​(Corbevax) ಎಂದಾಗಿದ್ದು, ಇದು ಮೂರೂ ಹಂತದ ಕ್ಲಿನಿಕಲ್​ ಪ್ರಯೋಗದಲ್ಲಿ ಯಶಸ್ವಿಯಾದರೆ 5ವರ್ಷದ ಮಕ್ಕಳಿಂದ 18 ವರ್ಷದವರೆಗಿನವರಿಗೆ ಈ ಲಸಿಕೆ ನೀಡಬಹುದಾಗಿದೆ. ಅಂದ ಹಾಗೇ, ಈ ಕಾರ್ಬ್​ವ್ಯಾಕ್ಸ್ (Corbevax) ಅಥವಾ ಬಯಾಲಜಿಕಲ್​ ಇ ಲಿಮಿಟೆಡ್ (Biologicals E Limited) ಲಸಿಕೆಯ ಕ್ಲಿನಿಕಲ್​ ಪ್ರಯೋಗ ದೇಶದ 10 ಕಡೆಗಳಲ್ಲಿ ನಡೆಯಲಿದೆ. 

ಬಯಾಲಜಿಕಲ್​ ಇ  ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕಾರ್ಬ್​ವ್ಯಾಕ್ಸ್​ ಲಸಿಕೆ ಆರ್​ಬಿಡಿ ಪ್ರೋಟಿನ್​ ಸಬ್​ ಯೂನಿಟ್​ ಲಸಿಕೆಯಾಗಿದ್ದು, ಇದು ಮೂರು ಡೋಸ್​ಗಳನ್ನು ಪಡೆಯಬೇಕಾಗುತ್ತದೆ.  ಇದನ್ನು ದೇಹದಲ್ಲಿ ಇಂಜೆಕ್ಟ್​ ಮಾಡಿದಾಗ  SARS-CoV-2 ನ ಸ್ಪೈಕ್​ ಪ್ರೋಟೀನ್​ ಉತ್ಪಾದಿಸುತ್ತದೆ. ಹಾಗೇ, ರೋಗಪ್ರತಿರೋಧಕ ಪ್ರತಿಕ್ರಿಯೆಯನ್ನು ಹೊರಸೂಸುತ್ತದೆ. ಸೋಂಕಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೈಡಸ್​ ಕ್ಯಾಡಿಲಾಕ್ಕೆ ಸಿಕ್ಕಿದೆ ಅನುಮೋದನೆ ಸದ್ಯ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನೀಡಲು ಮೂರ್ನಾಲ್ಕು ಲಸಿಕೆಗಳಿದ್ದರೂ, ಮಕ್ಕಳಿಗೆ ನೀಡಲು ಒಂದೂ ಕೊವಿಡ್ 19 ಲಸಿಕೆಯಿಲ್ಲ. ಸದ್ಯ ಜೈಡಸ್​ ಕ್ಯಾಡಿಲಾ ಸಂಸ್ಥೆಯ ZyCoV-D ಕೊವಿಡ್​ 19 ಲಸಿಕೆಯನ್ನು 12-18ವರ್ಷದವರೆಗಿನವರ ಮೇಲೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಈಗಾಗಲೇ ಡಿಸಿಜಿಐ ಅನುಮೋದನೆ ನೀಡಿದೆ. ಸೆಪ್ಟೆಂಬರ್​ನಿಂದ ಬಳಕೆಗೆ ಲಭ್ಯವಿರಲಿದೆ ಎಂದು ಹೇಳಲಾಗಿತ್ತಾದರೂ ಇನ್ನೂ ಆ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.  ಇದರೊಂದಿಗೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆಯನ್ನು 2-18ವರ್ಷದವರ ಮೇಲೆ, 2 ಹಾಗೂ 3ನೇ ಹಂತದ ಕ್ಲಿನಿಕಲ್​ ಪ್ರಯೋಗ ನಡೆಸಲಾಗುತ್ತಿದೆ ಎಂದೂ ಹೇಳಲಾಗಿದೆ. ಹಾಗೇ, ಕೊವ್ಯಾಕ್ಸಿನ್​ ಲಸಿಕೆಯನ್ನು ಅಕ್ಟೋಬರ್​-ನವೆಂಬರ್​​ನಿಂದ ಮಕ್ಕಳಿಗೆ ನೀಡಲು ಶುರು ಮಾಡಲಾಗುತ್ತದೆ ಎಂದು ಈ ಮೊದಲು ತಿಳಿಸಿಲಾಗಿದೆ.

ಇದನ್ನೂ ಓದಿ: ದೇಹಕ್ಕೆ ತಂಪು ನೀಡುವ ಹೆಸರು ಬೇಳೆ ದೋಸೆ ಮಾಡಿ ಸವಿಯಿರಿ; ಮಾಡುವ ವಿಧಾನ ಇಲ್ಲಿದೆ ನೋಡಿ

Chanakya Niti: ಮಾತು, ವರ್ತನೆ, ಸಹವಾಸದ ಬಗ್ಗೆ ಸದಾ ನಿಗಾ ವಹಿಸಿ; ಈ ಸಂಗತಿಯನ್ನು ಮರೆಯಬೇಡಿ

Published On - 9:21 am, Thu, 2 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ