ಕಾಶ್ಮೀರ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾ ಗೀಲಾನಿ ಇನ್ನಿಲ್ಲ, ಅವರಿಗೆ 92 ವರ್ಷ ವಯಸ್ಸಾಗಿತ್ತು
ಪ್ರತ್ಯೇಕತಾವಾದಿ ಗುಂಪಿನೊಂದಿಗೆ 27 ವರ್ಷಗಳ ಕಾಲ ಗುರುತಿಸಿಕೊಂಡಿದ್ದ ಗೀಲಾನಿ ಪಾಕಿಸ್ತಾನ, ಅದರ ಸೇನೆಯ ಗುಪ್ತಚರ ವಿಭಾಗ ಮತ್ತು ಐಎಸ್ಐ ಅವರನ್ನು ನಿರ್ಲಕ್ಷಿಸಲು ಆರಂಭಿಸಿದ ನಂತರ ಆ ಆಂದೋಲನವನ್ನು ತೊರೆದಿದ್ದರು.
ದಶಕಗಳಿಂದ ಕಾಶ್ಮೀರ ಪ್ರತ್ಯೇಕತಾವಾದಿಯಾಗಿ ಗುರುತಿಸಿಕೊಂಡಿದ್ದ ಸಯ್ಯದ್ ಅಲಿ ಶಾ ಗೀಲಾನಿ ಅವರು ನಿಧನ ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರನಲ್ಲಿ ಪ್ರತ್ಯೇಕತಾವಾದ ಆಂದೋಲನದ ಪ್ರಮುಖ ನಾಯಕ 92 ವರ್ಷ ವಯಸ್ಸಿನ ಗೀಲಾನಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಕಳೆದ ವರ್ಷವೇ ರಾಜಕೀಯ ಮತ್ತು ಹುರಿಯತ್ಗೆ ರಾಜೀನಾಮೆ ಸಲ್ಲಿಸಿದ್ದರು.
‘ಗಿಲಾನಿ ಸಾಹಬ್ ಅವರ ಸಾವಿನ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಬಹಳಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅದರೆ ಅವರ ಬದ್ಧತೆ ಮತ್ತು ತಮ್ಮ ನಿಲುವುಗಳಿಗೆ ಅಚಲರಾಗಿರುತ್ತಿದ್ದ ಕಾರಣಕ್ಕೆ ಅವರನ್ನು ಗೌರವಿಸುತ್ತಿದ್ದೆ. ಅಲ್ಲಾಹ್ ಅವರಿಗೆ ಜನ್ನತ್ ಅನ್ನು ದಯಪಾಲಿಸಲಿ. ಅವರ ಕುಟುಂಬದ ಸದಸ್ಯರು ಮತ್ತು ಹಿತೈಷಿಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ,’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೆ ಮಹಬೂಬಾ ಮುಫ್ತಿ ಅವರು ಟ್ವೀಟ್ ಮಾಡಿದ್ದಾರೆ.
Saddened by the news of Geelani sahab’s passing away. We may not have agreed on most things but I respect him for his steadfastness & standing by his beliefs. May Allah Ta’aala grant him jannat & condolences to his family & well wishers.
— Mehbooba Mufti (@MehboobaMufti) September 1, 2021
ಪ್ರತ್ಯೇಕತಾವಾದಿ ಗುಂಪಿನೊಂದಿಗೆ 27 ವರ್ಷಗಳ ಕಾಲ ಗುರುತಿಸಿಕೊಂಡಿದ್ದ ಗೀಲಾನಿ ಪಾಕಿಸ್ತಾನ, ಅದರ ಸೇನೆಯ ಗುಪ್ತಚರ ವಿಭಾಗ ಮತ್ತು ಐಎಸ್ಐ ಅವರನ್ನು ನಿರ್ಲಕ್ಷಿಸಲು ಆರಂಭಿಸಿದ ನಂತರ ಆ ಆಂದೋಲನವನ್ನು ತೊರೆದಿದ್ದರು.
ಕಾಶ್ಮೀರ ಕಣಿವೆಯ ಅತಿ ದೊಡ್ಡ ಪ್ರತ್ಯೇಕತಾವಾದಿ ಒಕ್ಕೂಟದಿಂದ ದೂರ ಸರಿದ ನಂತರ ಗೀಲಾನಿ ತಮ್ಮ ವಿರುದ್ಧ ಕುತಂತ್ರ ನಡೆಸಲಾಗಿತ್ತು ಅಂತ ದೂರಿದ್ದರಲ್ಲದೆ ಜಮ್ಮು ಮತ್ತು ಕಾಶ್ಮೀರಗೆ ದೊರಕಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರ ಪ್ರತ್ಯೇಕತಾವಾದಿ ಚಳುವಳಿಯನ್ನು ತೀವ್ರಗೊಳಿಸಲು ವಿಫಲಗೊಂಡಿದ್ದಕ್ಕೆ ಅದರ ನಾಯಕರನ್ನು ತೀವ್ರವಾಗಿ ಖಂಡಿಸಿದ್ದರು.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಜನರು ತಾಳ್ಮೆ ಕಳೆದುಕೊಂಡರೆ ನೀವು ಇಲ್ಲದಂತಾಗುತ್ತೀರಿ: ಕೇಂದ್ರಕ್ಕೆ ಮೆಹಬೂಬಾ ಮುಫ್ತಿ ಎಚ್ಚರಿಕೆ