ನವದೆಹಲಿ, ನವೆಂಬರ್ 27: ಇವಿಎಂ ಬದಲು ಬ್ಯಾಲಟ್ ಪೇಪರ್ ಮೂಲಕ ಚುನಾವಣೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಒತ್ತಾಯಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು ನೀಡಿದ್ದಾರೆ. ‘ಕಾಂಗ್ರೆಸ್ ಪಕ್ಷಕ್ಕೆ ಮತಯಂತ್ರ ಬದಲು ಮತಪತ್ರಗಳ ಮೂಲಕ ಚುನಾವಣೆ ಆಗಬೇಕಂತೆ. ಅದರ ಬಾಲಿಶತನ ಮತ್ತು ಚುನಾವಣಾ ಸೋಲುಗಳ ಹತಾಶೆಯನ್ನು ಇದು ತೋರಿಸುತ್ತದೆ. ಸಮಸ್ಯೆ ಇರುವುದು ಇವಿಎಂಗಳಲ್ಲ, ಕಾಂಗ್ರೆಸ್ನ ಭ್ರಷ್ಟ ಮನೋಭಾಗದಲ್ಲಿ ಎಂದು ಧರ್ಮೇಂದ್ರ ಪ್ರಧಾನ್ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ಯಾಲಟ್ ಪೇಪರ್ಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದಾಗ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಆಕ್ಷೇಪಿಸುತ್ತಿದ್ದರು. ಇವತ್ತು ಕಾಂಗ್ರೆಸ್ ಪಕ್ಷ ಸೋಲುತ್ತಿರುವಾಗ ಪಕ್ಷದ ಯುವರಾಜನಿಗೆ ಇವಿಎಂಗಳು ಸಮಸ್ಯೆಯಾಗಿ ಕಾಣುತ್ತಿವೆ ಎಂದು ಬಿಜೆಪಿ ನಾಯಕ ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಸಿಎಂ ರೇಸ್ನಿಂದ ಹಿಂದೆ ಸರಿದ ಏಕನಾಥ್ ಶಿಂಧೆ; ದೇವೇಂದ್ರ ಫಡ್ನವಿಸ್ ಹಾದಿ ಸುಗಮ
‘ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷದ ಕಾರ್ಯತಂತ್ರ ಇರುವ ಬದಲು, ಸೋಲಿನ ಹೊಣೆಯನ್ನು ಇವಿಎಂ ಮೇಲೆ ಹೇಗೆ ಹಾಕುವುದು ಎಂದು ಯೋಜಿಸುತ್ತದೆ. ಈಗ ಇವಿಎಂಗಳನ್ನು ದೂಷಿಸುವ ಹೊಣೆಯನ್ನು ಮಲ್ಲಿಕಾರ್ಜುನ ಖರ್ಗೆಗೆ ವಹಿಸಿಕೊಟ್ಟಿದ್ದಾರೆ…’ ಎಂದಿದ್ದಾರೆ.
कांग्रेस अध्यक्ष @kharge जी का कहना कि “कांग्रेस पार्टी को चुनाव EVM से नहीं बल्कि बैलेट पेपर से चाहिए।” ये अपने आप में हास्यास्पद और चुनावों में बुरी तरह हार की हताश को दिखाता है। असल में समस्या EVM की नहीं है, कांग्रेस की दूषित मानसिकता की है। जब चुनाव बैलेट पेपर से होते तो…
— Dharmendra Pradhan (@dpradhanbjp) November 27, 2024
‘ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಾಗ ಚುನಾವಣಾ ಆಯೋಗ ಮತ್ತು ಇವಿಎಂ ಅನ್ನು ದೂಷಿಸುತ್ತದೆ. ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಕಾಂಗ್ರೆಸ್ ಹಾಗೂ ಅದರ ಬಳಗಕ್ಕೆ ದೇಶದ ಪ್ರಜಾತಂತ್ರದ ಅಸ್ತಿತ್ವವು ಪ್ರಜಾ ಮತದಾನದಿಂದಲ್ಲ, ಬದಲಾಗಿ ಕಾಂಗ್ರೆಸ್ನ ಗೆಲುವು ಅಥವಾ ಸೋಲಿನ ಮೇಲೆ ನಿರ್ಧಾರವಾಗುತ್ತದೆ. ಇದು ಜನಾದೇಶಕ್ಕೆ ತೋರುವ ಅಗೌರವವಾಗಿದೆ. ವಾಸ್ತವದ ಸಂಗತಿ ಎಂದರೆ ಜನರು ಕಾಂಗ್ರೆಸ್ ಹಾಗು ರಾಹುಲ್ ಗಾಂಧಿಯನ್ನು ಬಾರಿ ಬಾರಿ ಸೋಲಿಸುತ್ತಿದ್ದಾರೆ. ಖರ್ಗೆಯವರು ಈ ಸತ್ಯವನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು,’ ಎಂದು ಧರ್ಮೇಂದ್ರ ಪ್ರಧಾನ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ ನೈಸರ್ಗಿಕ ಕೃಷಿಗಾಗಿ 2,481 ಕೋಟಿ ಮೊತ್ತದ ಹೊಸ ಯೋಜನೆ, ಇದನ್ನು ಪಡೆಯುವುದು ಹೇಗೆ?
ಮೊನ್ನೆ ಸುಪ್ರೀಂ ಕೋರ್ಟ್ ಕೂಡ ಕಾಂಗ್ರೆಸ್ ಪಕ್ಷದ ಇವಿಎಂ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ನೀವು ಗೆದ್ದಾಗ ಇವಿಎಂ ಸರಿಯಾಗಿರುತ್ತೆ. ಸೋತಾಗ ಮಾತ್ರ ಕೆಟ್ಟಿರುತ್ತೆ ಎನ್ನುತ್ತೀರಿ. ಇದು ಸರಿಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಕಾಂಗ್ರೆಸ್ ಪಕ್ಷದ ವಾದವನ್ನು ತಿರಸ್ಕರಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ