Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಂತೆ ಬೆಂಗಳೂರಲ್ಲೂ ವಾಯುಮಾಲಿನ್ಯ! ತಂಪು ವಾತಾವರಣದ ಜತೆ ಧೂಳು ಹೆಚ್ಚಳ

ದೆಹಲಿಯಂತೆ ಬೆಂಗಳೂರಿನಲ್ಲಿ ಕೂಡ ಗಾಳಿಯ ಗುಣಮಟ್ಟ ಕಳಪೆಯಾಗುತ್ತಿದೆ, ಒಂದೆಡೆ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಮತ್ತೊಂದೆಡೆ ಧೂಳು ಗಾಳಿಯೊಟ್ಟಿಗೆ ಸೇರಿಕೊಂಡು ಹಲವು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತಿದೆ. ಹಾಗಾದರೆ ಬೆಂಗಳೂರಿನ ಸುತ್ತಮುತ್ತಲು ಗಾಳಿಯ ಗುಣಮಟ್ಟ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ದೆಹಲಿಯಂತೆ ಬೆಂಗಳೂರಲ್ಲೂ ವಾಯುಮಾಲಿನ್ಯ! ತಂಪು ವಾತಾವರಣದ ಜತೆ ಧೂಳು ಹೆಚ್ಚಳ
ಬೆಂಗಳೂರು
Follow us
Vinayak Hanamant Gurav
| Updated By: ನಯನಾ ರಾಜೀವ್

Updated on: Nov 28, 2024 | 9:05 AM

ಒಂದೆಡೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕರ್ನಾಟಕದ ಹಲವು ಭಾಗಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ವಾಯುಮಾಲಿನ್ಯ ಹೆಚ್ಚಾಗಿದೆ, ತಂಪಾದ ವಾತಾವರಣದ ಧೂಳು ಕೂಡ ಸೇರ್ಪಡೆಗೊಂಡಿದ್ದು, ವಾಯುಮಾಲಿನ್ಯ ಹೆಚ್ಚಾಗಿದೆ.

ನಗರದಲ್ಲಿ ಹಲವು ರಸ್ತೆಗಳು ಹದಗೆಟ್ಟ ಪರಿಣಾಮ ವಾಹನಗಳು ಓಡಾಡುವಾಗ ಧೂಳಿನಿಂದ ಜನರ ಓಡಾಟಕ್ಕೆ ಸಂಕಷ್ಟ ಎದುರಾಗಿದ್ದರೆ, ಅತ್ತ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಗರಿಷ್ಟ ಮಟ್ಟಕ್ಕೆ ತಲುಪಿದ್ದು, ಹೆಲ್ತ್ ಎಮರ್ಜೆನ್ಸಿ ಶುರುವಾದಂತಿದೆ. ಈ ಆತಂಕ ಇದೀಗ ಬೆಂಗಳೂರಿಗೂ ಕಾಡುತ್ತಿದೆ. ನಗರದ ಹಲವೆಡೆ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಬಸವನಗುಡಿಯ ಎನ್ ಆರ್ ಕಾಲೊನಿ ಮುಖ್ಯ ರಸ್ತೆಯಲ್ಲಂತೂ ವಿಪರೀತ ಧೂಳಿಗೆ ವಾಹನ ಸವಾರರು ನಿತ್ಯ ನರಕ ಅನುಭವಿಸ್ತಿದ್ದಾರೆ.

ಪೈಪ್‌ಲೈನ್ ಕಾಮಗಾರಿಯೊಂದಕ್ಕೆ ರಸ್ತೆ ಅಗೆಯಲಾಗಿತ್ತು. ಕೆಲಸ ಮುಗಿದ ಬಳಿಕ ರಸ್ತೆ ಮಾಡದೇ ಹಾಗೆ ಬಿಟ್ಟ ಪರಿಣಾಮ‌ ಧೂಳು ಬರ್ತಿದೆ. ರಸ್ತೆಯ ಅಕ್ಕಪಕ್ಕದ ವ್ಯಾಪಾರಸ್ಥರು ವ್ಯಾಪಾರಸ್ಥರು ವ್ಯಾಪಾರ ಮಾಡದಂತಹ ಪರಸ್ಥಿತಿ ಇದ್ರೆ. ಬೈಕ್ ನಲ್ಲಿ ಹೋಗುವವರು, ಫುಟ್ ಪಾತ್ ಮೇಲೆ ಓಡಾಡೋರು ಕೂಡ ಸಮಸ್ಯೆ ಅನುಭವಿಸಬೇಕಾಗಿದೆ.

ಇನ್ನೂ ಬೆಂಗಳೂರು ನಗರದಲ್ಲಿ ಚಳಿಯ ವಾತಾವರಣ ಜೊತೆಗೆ ವಾಯು ಮಾಲಿನ್ಯ ಹೆಚ್ಚಾಗಿದೆ. ಅಲ್ಲದೇ ಈ ಎನ್ ಆರ್ ಕಾಲೊನಿ ರಸ್ತೆಯಲ್ಲಿ ದಿನವೂ ಓಡಾಡುವವರಿಗೆ ಧೂಳಿನ ಸಮಸ್ಯೆಯಿಂದ ಕೆಲವರಿಗೆ ಕೆಮ್ಮು, ಗಂಟಲು ನೋವು, ಡಸ್ಟ್ ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಂಡಿವೆಯಂತೆ. ಪರಿಣಾಮ‌ ಈ ರಸ್ತೆಯಲ್ಲಿ ಓಡಾಡೊಕು ಹೆದರಿಕೆ ಆಗ್ತಿದೆ. ಹೀಗಾಗಿ ಮಾಸ್ಕ್ ಹಾಕಿಕೊಂಡೆ ಓಡಾಡಬೇಕಾದ ಪರಸ್ಥಿ ಇದೆ ಅಂತಾರೆ ಹಿರಿಯ ನಾಗರಿಕರು.

ಮತ್ತಷ್ಟು ಓದಿ:ಮಾಲಿನ್ಯದಿಂದ ಚರ್ಮ ರೋಗ ಬರದಂತೆ ತಡೆಯಲು ವೈದ್ಯರು ನೀಡಿರುವ ಸಲಹೆ ಪಾಲಿಸಿ

ಬೆಂಗಳೂರಿನ ಹಲವೆಡೆ ಗಾಳಿಯ ಗುಣಮಟ್ಟ ಹೇಗಿದೆ?

ಬೆಂಗಳೂರಿನ ಹಲವೆಡೆ ಮಧ್ಯಮ ವರ್ಗದ ಗಾಳಿಯ ಗುಣಮಟ್ಟ ಹೊಂದಿದೆ ಇನ್ನೂ 100 ಒಳಗೆ ಗಾಳಿಯ ಗುಣಮಟ್ಟ (Air Quality Index) ಇರಬೇಕು. ಆದರೆ ನಗರದ ಹಲವೆಡೆ ಗಾಳಿಯ ಗುಣಮಟ್ಟ 100ಕ್ಕಿಂತ ಹೆಚ್ಚಿಗೆ ಆಗಿದೆ. ಪರಿಣಾಮ ಜನರ ಆರೋಗ್ಯದ ಮೇಲೆ‌ ದುಷ್ಪರಿಣಾಮ ಬೀರುತ್ತದೆ. ಹೆಬ್ಬಾಳ AQI 98 ರಿಂದ 129ಗೆ ತಲುಪಿದೆ ಜೆ.ಪಿ ನಗರ 5ನೇ ಬ್ಲಾಕ್ AQI 90 ರಿಂದ 122ಗೆ ತಲುಪಿದೆ ಮೈಸೂರು ರಸ್ತೆಯ ಕವಿಕಾ AQI 70 ರಿಂದ 114ಗೆ ತಲುಪಿದೆ ಸಿಲ್ಕ್ ಬೋರ್ಡ್ ನಲ್ಲಿ AQI  ರಿಂದ 119ಗೆ ತಲುಪಿದೆ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ AQI 80 ರಿಂದ –  111ಗೆ ತಲುಪಿದೆ ಮೈಲಸಂದ್ರ AQI 78 ರಿಂದ 122 ಗೆ ತಲುಪಿದೆ

ಇನ್ನೂ ಶ್ವಾಸಕೋಶ ಹಾಗೂ ಉಸಿರಾಟ ತೊಂದರೆ, ಹೃದ್ರೋಗಿಗಳು, ಮಕ್ಕಳು ಮತ್ತು ಹಿರಿಯ ವಯಸ್ಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಒಟ್ಟಿನಲ್ಲಿ ತಂಪು ವಾತಾವರಣ ಜೊತೆ ನಗರದಲ್ಲಿ ವಾಹನಗಳ ಹೊಗೆ, ರಸ್ತೆಯಿಂದ ಬರುವ ಧೂಳಿನಿಂದ ವಾಯು ಮಾಲಿನ್ಯ ಹೆಚ್ಚಾಗಿದ್ದು, ಉಸಿರಾಟ ಜೊತೆಗೆ ಧೂಳು ಮನುಷ್ಯನ ರಕ್ತ ನಾಳಗಳಿಗೆ ಸೇರುವ ಮೂಲಕ ಶ್ವಾಸಕೋಶ ಮತ್ತು ಹೃದಯ ಕಾಯಿಲೆಗಳು, ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ನಂತಹ ಖಾಯಿಲೆಗೆ ಕಾರಣವಾಗಲಿದೆ.

ನಗರದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವ್ದೇ ಕ್ರಮಗಳು ಆಗ್ತಿಲ್ಲ. ಹೀಗೆ ಬೆಂಗಳೂರಿನ ಮಾಲಿನ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದ್ರೆ ದೆಹಲಿಯ ಪರಿಸ್ಥಿತಿ ಬೆಂಗಳೂರಿಗೂ ಬರೋಕೆ ಹೆಚ್ಚು ಸಮಯ ಬೇಕಿಲ್ಲ. ಹೀಗಾಗಿ‌ ಸಿಲಿಕಾನ್‌ ಮಂದಿ ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸೂದು ಸೂಕ್ತ.

ಕರ್ನಾಟಕದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ