ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ಉತ್ತರ ಪ್ರದೇಶದಾದ್ಯಂತ ಜೂನ್ 10ರಂದು ನಡೆದ ಗಲಭೆಯಲ್ಲಿ 337 ಮಂದಿಯನ್ನು ಬಂಧಿಸಲಾಗಿದ್ದು, 13 ಎಫ್ಐಆರ್ ದಾಖಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿನಡೆದ ಗಲಭೆಯಲ್ಲಿ ಕಲ್ಲು ತೂರಾಟವು ಕೂಡ ನಡೆದಿತ್ತು, ಸಹರಾನ್ಪುರ, ಪ್ರಯಾಗ್ರಾಜ್ದಲ್ಲಿ ಹೆಚ್ಚಿನ ಗಲಭೆ ಸಂಭವಿಸಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 337 ಮಂದಿಯನ್ನು ಬಂಧಿಸಲಾಗಿದೆ, ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 92 ಮಂದಿ, ಸಹರಾನ್ಪುರದಲ್ಲಿ 83, ಹತ್ರಾಸ್ನಲ್ಲಿ 52, ಮೊರಾದಾಬಾದ್ನಲ್ಲಿ 40, ಮೊರಾದಾಬಾದ್ನಲ್ಲಿ 18 ಮಂದಿ, ಅಂಬೇಡ್ಕರ್ನಗರದಲ್ಲಿ 41 ಮಂದಿ, ಅಲಿಗಢದಲ್ಲಿ ಆರು ಮಂದಿ, ಜಲೌನ್ನಲ್ಲಿ ಐವರನ್ನು ಬಂಧಿಸಲಾಗಿದೆ.
ಪ್ರಯಾಗ್ರಾಜ್ನಲ್ಲಿ ಕಲ್ಲುತೂರಾಟ ಹೆಚ್ಚಾಗಿ ನಡೆದಿತ್ತು, ಹಾಗೆಯೇ ಈ ಗಲಭೆ, ಹಿಂಸಾಚಾರದ ಹಿಂದಿದ್ದ ಮಾಸ್ಟರ್ಮೈಂಡ್ಗೆ ಸಂಬಂಧಿಸಿದ ಅನಧಿಕೃತ ಆಸ್ತಿಯನ್ನು ನೆಲಸಮ ಮಾಡಲಾಯಿತು.
ಘಟನೆ ಹಿನ್ನೆಲೆ ಏನು?
ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಕೆಲ ದಿನಗಳ ಹಿಂದೆ ಟಿವಿ ವಾಹಿನಿಯೊಂದರ ಚರ್ಚೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಇದಾದ ಬಳಿಕ ಹಲವು ಮುಸ್ಲಿಂ ಸಂಘಟನೆಗಳು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲಗಭೆಯನ್ನು ಸೃಷ್ಟಿಸುತ್ತಿವೆ. ನೂಪುರ್ ಶರ್ಮಾ ಹೇಳಿಕೆಯ ಬಳಿಕ ಕಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಬಿಜೆಪಿಯು ನೂಪುರ್ ಶರ್ಮಾರನ್ನು ಪಕ್ಷದಿಂದ ವಜಾಗೊಳಿಸಿತ್ತು.
ಆಕ್ಷೇಪಾರ್ಹ ಹೇಳಿಕೆ ಹಿಂಪಡೆದ ನೂಪುರ್ ಶರ್ಮಾ
ಬಿಜೆಪಿ ರಾಷ್ಟ್ರೀಯ ವಕ್ತಾರೆ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡ ಬಳಿಕ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ