ದೆಹಲಿಗೆ ತೆರಳುವ ಮಾರ್ಗಗಳನ್ನೇ ಬಂದ್ ಮಾಡುತ್ತೇವೆ: ಎಚ್ಚರಿಕೆ ನೀಡಿದ ಪಂಜಾಬ್ ರೈತರು
ಸತತ ಐದನೇ ದಿನಕ್ಕೆ ದೆಹಲಿ ಚಲೋ ಕಾಲಿಟ್ಟಿದೆ. ಯಾವುದೇ ಪೂರ್ವಭಾವಿ ಷರತ್ತು ವಿಧಿಸದೇ ಮಾತುಕತೆಗೆ ಒಪ್ಪಿದರೆ ಮಾತ್ರ, ಕೇಂದ್ರ ಸರ್ಕಾರದ ಜೊತೆ ಸಭೆ ನಡೆಸಲು ಸಿದ್ಧರಿದ್ದೇವೆ ಎಂದು ರೈತರು ತಿಳಿಸಿದ್ದಾರೆ.
ದೆಹಲಿ: ಪಂಜಾಬ್ ರೈತರ ದೆಹಲಿ ಚಲೋ ಚಳವಳಿ ಐದನೇ ದಿನಕ್ಕೆ ಕಾಲಿಟ್ಟಿದೆ. ಸಿಂಘು-ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರು ದೆಹಲಿಯ ಬುರಾರಿಯಲ್ಲಿರುವ ನಿರಂಕಾರಿ ಮೈದಾನಕ್ಕೆ ತೆರಳಲು ನಿರಾಕರಿಸಿದ್ದಾರೆ. ದೆಹಲಿ ಪ್ರವೇಶಿಸುವ ಎಲ್ಲ ಐದು ಮಾರ್ಗಗಳನ್ನು ಮುಚ್ಚುವ ಆಯ್ಕೆಯೂ ತಮ್ಮ ಬಳಿಯಿದೆಯೆಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಷರತ್ತಿಗೆ ಮಣಿಯಲ್ಲ ಗೃಹ ಸಚಿವ ಅಮಿತ್ ಶಾ ನಿರಂಕಾರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಒದಗಿಸುವ ಭರವಸೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ಹರ್ಮೀತ್ ಸಿಂಗ್, ‘ಯಾವುದೇ ಪೂರ್ವಭಾವಿ ಷರತ್ತು ವಿಧಿಸದೇ ಮಾತುಕತೆಗೆ ಒಪ್ಪಿದರೆ ಮಾತ್ರ, ಕೇಂದ್ರ ಸರ್ಕಾರದ ಜೊತೆ ಸಭೆ ನಡೆಸಲು ಸಿದ್ಧರಿದ್ದೇವೆ’ ಎಂದು ತಿಳಿಸಿದರು. ಇನ್ನೂ ಸಾವಿರಾರು ರೈತರು ಈ ಪ್ರತಿಭಟನೆಯನ್ನು ಸೇರಿಕೊಳ್ಳಲಿದ್ದಾರೆ. ನಿರಂಕಾರಿ ಮೈದಾನವನ್ನು ಕೆಲವು ರೈತರು ತಲುಪಿದರೂ ಅದು ತೆರೆದ ಜೈಲಿಗೆ ಸಮ’ ಎಂದು ಸಹ ಅವರು ಹೇಳಿದ್ದಾರೆ.
ಸರ್ಕಾರ ರೈತರನ್ನು ಭಯೋತ್ಪಾಕರಂತೆ ನಡೆಸಿಕೊಳ್ಳುತ್ತಿದೆ ದೆಹಲಿ ಚಲೋ ವಿಷಯದಲ್ಲಿ ಬಿಜೆಪಿ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಶಿವಸೇನೆ ಟೀಕಿಸಿದೆ. ಶಿವಸೇನಾ ಸಂಸದ ಸಂಜಯ್ ರಾವುತ್, ಕೇಂದ್ರವು ರೈತರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುತ್ತಿದೆ. ರೈತರ ಬೇಡಿಕೆಗಳನ್ನು ಆಲಿಸಬೇಕಿತ್ತು. ಬದಲಿಗೆ, ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಹರಿಹಾಯ್ದಿದ್ದಾರೆ.
ಇನ್ನಷ್ಟು.. ಪಂಜಾಬ್ ರೈತರಿಂದ ದೆಹಲಿ ಚಲೊ: ಇಲ್ಲಿವೆ ಕುಗ್ಗದ-ಜಗ್ಗದ ರೈತನ ದಾರುಣ ಚಿತ್ರಣಗಳು ಪ್ರತಿಭಟನೆ ಸ್ಥಳ ಬದಲಿಸಿದರೆ ಮಾತುಕತೆ ಎಂಬ ಅಮಿತ್ ಶಾ ಷರತ್ತಿಗೆ ರೈತರ ತಿರಸ್ಕಾರ ‘ದೆಹಲಿ ಚಲೋ; ಪ್ರತಿಭಟನಾಕಾರರ ರೌದ್ರಾವತಾರ; ಪೊಲೀಸರತ್ತ ಇಟ್ಟಿಗೆ ಎಸೆದ ರೈತರು ಏನೇ ಆಗ್ಲಿ, ದೆಹಲಿ ತಲುಪೇ ತಲುಪುತ್ತೇವೆ -6 ತಿಂಗಳ ದಿನಸಿ ಹೊತ್ತು ದೆಹಲಿಯತ್ತ ಸಾಗಿದ ರೈತನ ಆಕ್ರೋಶ
Published On - 11:28 am, Mon, 30 November 20