ಪಂಜಾಬ್ ಸಿಎಂ ಭಗವಂತ್ ಮಾನ್ ಮನೆ ಮುಂದೆ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ

| Updated By: ರಶ್ಮಿ ಕಲ್ಲಕಟ್ಟ

Updated on: Nov 30, 2022 | 6:12 PM

ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಗ್ರೂರ್‌ನಲ್ಲಿರುವ ಮಾನ್ ನಿವಾಸದ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ಮಜ್ದೂರ್ ಯೂನಿಯನ್ ಸದಸ್ಯರ ಮೇಲೆ ಪಂಜಾಬ್ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಪಂಜಾಬ್ ಸಿಎಂ ಭಗವಂತ್ ಮಾನ್ ಮನೆ ಮುಂದೆ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
ಭಗವಂತ್ ಮಾನ್ ನಿವಾಸದ ಮುಂದೆ ಪ್ರತಿಭಟನೆ
Follow us on

ದೆಹಲಿ: ಸಂಗ್ರೂರ್‌ನಲ್ಲಿರುವ ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರ ಮನೆ ಮುಂದೆ ಕಾರ್ಮಿಕ ಮತ್ತು ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ. ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಗ್ರೂರ್‌ನಲ್ಲಿರುವ ಮಾನ್ ನಿವಾಸದ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ಮಜ್ದೂರ್ ಯೂನಿಯನ್ ಸದಸ್ಯರ ಮೇಲೆ ಪಂಜಾಬ್ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಭಗವಂತ್ ಮಾನ್ ಅವರ ಬಾಡಿಗೆ ನಿವಾಸದ ಹೊರಗೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ 2005 (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ಕನಿಷ್ಠ ದಿನಗೂಲಿಯನ್ನು ₹ 700 ಕ್ಕೆ ಹೆಚ್ಚಿಸಬೇಕು, ದಲಿತರಿಗೆ ಐದು ಮರ್ಲಾ ಪ್ಲಾಟ್‌ಗಳನ್ನು ಜಾರಿಗೊಳಿಸಬೇಕು ಮತ್ತು ಸಮುದಾಯಕ್ಕೆ ಸಾಮಾನ್ಯ ಪಂಚಾಯ್ತಿ ಭೂಮಿಯ ಮೂರನೇ ಭಾಗವನ್ನು ಗುತ್ತಿಗೆಗೆ ಹಂಚಿಕೆ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಎಂಟು ಕಾರ್ಮಿಕ ಸಂಘಟನೆಗಳ ಜಂಟಿ ಸಂಘಟನೆಯಾದ ಸಂಝಾ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಸಂಗ್ರೂರಿನ ಪಟಿಯಾಲ-ಭಟಿಂಡಾ ರಸ್ತೆಯ ಬಳಿ ಬೆಳಗ್ಗೆ ನೂರಾರು ಕೃಷಿ ಕಾರ್ಮಿಕರು ಜಮಾಯಿಸಿ ನಂತರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳ  ನಿವಾಸದ ಕಡೆಗೆ ಮೆರವಣಿಗೆ ನಡೆಸಿದರು.ಪ್ರತಿಭಟನಾಕಾರರು ಮಾನ್ ಅವರ ನಿವಾಸ ಇರುವ ಖಾಸಗಿ ಕಾಲೋನಿಯ ಹೊರಗೆ ತಲುಪಿದಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿದರು.

ಸಂಗ್ರೂರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮನ್‌ಪ್ರೀತ್ ಸಿಂಗ್ ಲಾಠಿ ಚಾರ್ಜ್‌ನ ನೇತೃತ್ವ ವಹಿಸಿದ್ದರು. ಪೊಲೀಸರು ಪ್ರತಿಭಟನಾಕಾರರಿಗೆ ಹೊಡೆಯುವುದು ವಿಡಿಯೊದಲ್ಲಿದೆ.


ಜಮೀನ್ ಪ್ರಾಪ್ತಿ ಸಂಘರ್ಷ ಸಮಿತಿಯ ಅಧ್ಯಕ್ಷ ಮುಖೇಶ್ ಮಾಲಾದ್ ಮಾತನಾಡಿ, ‘ಈ ಹಿಂದೆ ಮುಖ್ಯಮಂತ್ರಿಗಳು ನಮಗೆ ಸಭೆ ನಡೆಸಿದ್ದರು ಆದರೆ ನಂತರ ಅವರು ನಮ್ಮನ್ನು ಭೇಟಿ ಮಾಡಲು ನಿರಾಕರಿಸಿದರು. ಈಗ, ನಮ್ಮ ಬೇಡಿಕೆಗಳನ್ನು ಈಡೇರಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದಿದ್ದಾರೆ.

Published On - 4:54 pm, Wed, 30 November 22