ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ

|

Updated on: May 21, 2021 | 9:42 AM

ತಂದೆ ತಾಯಿ ಕಳೆದುಕೊಂಡ‌ ಮಕ್ಕಳ‌ ಕುರಿತು‌ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಭವಿಷ್ಯ ರೂಪಿಸುವ ಹಿನ್ನೆಲೆಯಲ್ಲಿ ಮಕ್ಕಳಿಗೆ ನವೋದಯ ಶಾಲೆಗಳಲ್ಲಿ ಸೀಟು ನೀಡಿ, ಉಚಿತ ವಿದ್ಯಾಭ್ಯಾಸ ಒದಗಿಸಲು‌ ಅಗ್ರಹಿಸಿದ್ದಾರೆ.

ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ
ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ
Follow us on

ದೆಹಲಿ: ಕೊರೊನಾ ಮಾರಿ ಬಂದಿದ್ದೇ ದೇಶವೇನು, ಇಡೀ ಜಗತ್ತಿನಲ್ಲಿ ಮಕ್ಕಳ ವಿದ್ಯಾಭ್ಯಾಸ ನಾಶವಾಗಿದೆ. ಎಂದಿನಂತೆ ಶೈಕ್ಷಣಿಕ ಚಟುವಟಿಕೆಗಳು ನಡೆದು ಅದಾಗಲೇ ಒಂದೂವರೆ ವರ್ಷವಾಗುತ್ತಾ ಬಂದಿದೆ. ಮುಂದೆ… ಭವಿಷ್ಯವೂ ಸ್ಪಷ್ಟವಾಗಿಲ್ಲ. ಕೊರೊನಾ ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಇದೇ ವೇಳೆ ಮಹಾದುರಂತಗಳ ಸರಮಾಲೆಯಲ್ಲಿ ಸಾವುನೋವುಗಳು ಅಪಾರ ಸಂಖ್ಯೆಯಲ್ಲಿ ಕಡುಬರುತ್ತಿದೆ. ಅದರಲ್ಲೂ ಅಪ್ಪ-ಅಮ್ಮನನ್ನು ಕಳೆದುಕೊಂಡು ಮಕ್ಕಳು ಅನಾಥರಾಗುವುದು ನಿಜಕ್ಕೂ ಸಹಿಸಲಸಾಧ್ಯ. ಇನ್ನು ಅಂತಹ ಮಕ್ಕಳ ಶಿಕ್ಷಣ… ಏನೋ ಎಂತೋ ಎಂಬಂತಾಗಿದೆ. ಇದನ್ನು ಅರಿತ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದಾರೆ.

ಅನಾಥ ಮಕ್ಕಳಿಗೆ ‘ಉಚಿತ’ ಶಿಕ್ಷಣ ನೀಡಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ತಂದೆ, ತಾಯಿ ಇಲ್ಲದ ಮಕ್ಕಳಿಗೆ ಶಾಲೆಗಳಲ್ಲಿ ಉಚಿತವಾಗಿ ಸೀಟ್ ನೀಡಲು ಮನವಿ ಮಾಡಿದ್ದಾರೆ. ಅದರಲ್ಲೂ ನವೋದಯ ಶಾಲೆಗಳಲ್ಲಿ ಇಂತಹಸೌಲಭ್ಯ ಕಲ್ಪಿಸುವಂತೆ ಅವರು ಮನವಿ ಮಾಡಿದ್ದಾರೆ. ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವುದಕ್ಕೆ ಸಹಕರಿಸಿ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.

ತಂದೆ ತಾಯಿ ಕಳೆದುಕೊಂಡ‌ ಮಕ್ಕಳ‌ ಕುರಿತು‌ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಭವಿಷ್ಯ ರೂಪಿಸುವ ಹಿನ್ನೆಲೆಯಲ್ಲಿ ಮಕ್ಕಳಿಗೆ ನವೋದಯ ಶಾಲೆಗಳಲ್ಲಿ ಸೀಟು ನೀಡಿ, ಉಚಿತ ವಿದ್ಯಾಭ್ಯಾಸ ಒದಗಿಸಲು‌ ಅಗ್ರಹಿಸಿದ್ದಾರೆ.

(Provide free education to the children orphaned due to coronavirus pleads aicc president sonia gandhi)

ಕೊರೊನಾದಿಂದ ಅನಾಥರಾದ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ನಮ್ಮದು: ಆದಿಚುಂಚನಗಿರಿ ಮಠ ಘೋಷಣೆ

Published On - 5:31 pm, Thu, 20 May 21