ಪುಣೆ: ಆನ್ಲೈನ್ನಲ್ಲಿ ಆಹಾರವನ್ನು ಆರ್ಡರ್ ಮಾಡಿ ತಿನ್ನುವವರು ತಮ್ಮ ಆಹಾರದ ಗುಣಮಟ್ಟದ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ. ಪುಣೆಯ (Pune) ವ್ಯಕ್ತಿಯೊಬ್ಬರು ಜೊಮ್ಯಾಟೋ (Zomato) ಮೂಲಕ ರೆಸ್ಟೋರೆಂಟ್‌ನಿಂದ ‘ಪನೀರ್ ಬಿರಿಯಾನಿ’ ಆರ್ಡರ್ ಮಾಡಿದ್ದು, ಅದರಲ್ಲಿ ಚಿಕನ್ (Chicken) ತುಂಡು ಸಿಕ್ಕಿದೆ. ಜೊಮ್ಯಾಟೋದವರು ತಮ್ಮ ಹಣವನ್ನು ಮರುಪಾವತಿಸಿದ್ದರೂ, ಈ ಘಟನೆಯು ನನ್ನ ‘ಧಾರ್ಮಿಕ ಭಾವನೆಗಳಿಗೆ’ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಈ ಪೋಸ್ಟ್ ಎಕ್ಸ್‌ನಲ್ಲಿ (ಟ್ವಿಟ್ಟರ್) ವೈರಲ್ ಆಗುತ್ತಿದ್ದಂತೆ, ಜೊಮ್ಯಾಟೋ ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ. ಇದು ನನ್ನ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎನ್ನುತ್ತಾರೆ ಪುಣೆಯ ವ್ಯಕ್ತಿ. ಯಶ್ ಗಾಡೆ ಎಂಬ ವ್ಯಕ್ತಿ ಈ ಘಟನೆಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ”ನಾನು ಮಹಾರಾಷ್ಟ್ರದ ಪುಣೆಯ ಕರವೇ ನಗರದ ಪಿಕೆ ಬಿರಿಯಾನಿ ಹೌಸ್ನಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಅದರಲ್ಲಿ ಚಿಕನ್ ಪೀಸ್ ಸಿಕ್ಕಿತು. ನಾನು ಸಸ್ಯಾಹಾರಿಯಾಗಿದ್ದು, ನಾನು ಈಗಾಗಲೇ ಮರುಪಾವತಿ ಪಡೆದಿದ್ದೇನೆ. ಆದರೆ, ನಾನು ಧಾರ್ಮಿಕ ವ್ಯಕ್ತಿಯಾಗಿರುವುದರಿಂದ ಇದು ನನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ.” ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು 19 ಸಾವಿರ ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಆರ್ಡರ್ ಮಾಡಿದ್ದು ಚಿಕನ್ನಲ್ಲ, ಪನ್ನೀರ್ ಸ್ಯಾಂಡ್‌ವಿಚ್; 50 ಲಕ್ಷ ರೂ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಹಿಳೆ
ಜೊಮ್ಯಾಟೋ ಪ್ರತಿಕ್ರಿಯೆ:
ಈ ಘಟನೆ ನಿಮಗೆ ಎಷ್ಟು ದುಃಖ ತಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ನಿಮ್ಮ ಆಹಾರದ ಆದ್ಯತೆಗಳನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಅದನ್ನು ಎಂದಿಗೂ ಅಗೌರವಿಸುವುದು ನಮ್ಮ ಉದ್ದೇಶವಲ್ಲ. ದಯವಿಟ್ಟು ನಿಮ್ಮ ಆರ್ಡರ್ ಐಡಿಯನ್ನು DM ಮೂಲಕ ಹಂಚಿಕೊಳ್ಳಿ. ಇದರಿಂದ ನಾವು ಇದನ್ನು ರೆಸ್ಟೋರೆಂಟ್ ಪಾರ್ಟನರ್ಗಳೊಂದಿಗೆ ಬೇಗನೆ ಪರಿಹರಿಸಬಹುದು.
I ordered paneer biryani from pk biryani house karve nagar pune maharashtra and I found a chicken piece in it(I am a vegetarian) I already got refund but this os still a sin since I am a religious person and it has hurt my religious sentiments.#pkbiryani #zomato pic.twitter.com/CL0noJfUp0
— YASH GADE (@gadeyash1) May 5, 2024
ಇದಕ್ಕೆ ಕಮೆಂಟ್ ಮಾಡಿರುವ ಒಬ್ಬ ಬಳಕೆದಾರ ನೀವು ಸಸ್ಯಾಹಾರಿಯಾದರೆ ಶುದ್ಧ ವೆಜ್ ಹೋಟೆಲ್ನಿಂದ ಮಾತ್ರ ಆರ್ಡರ್ ಪಡೆಯುವಂತೆ ಸಲಹೆ ನೀಡಿದ್ದಾರೆ. ಸುಮ್ಮನೆ ಮಾಂಸಾಹಾರವನ್ನು ಕೂಡ ಮಾಡುವ ಹೋಟೆಲ್ನಿಂದ ಏಕೆ ಆಹಾರ ತರಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಾಂಸದಷ್ಟೇ ದುಬಾರಿಯಾದ ತರಕಾರಿ: ಬೀನ್ಸ್ 1ಕೆಜಿಗೆ ಬರೋಬ್ಬರಿ 250 ರೂ ಇಲ್ಲಿದೆ ದರ ವಿವರ
ಕೆಲವು ‘X’ ಬಳಕೆದಾರರು ಅವರನ್ನು ಟ್ರೋಲ್ ಮಾಡಿದ್ದಾರೆ. “ನೀವು ಸಸ್ಯಾಹಾರಿಯಾಗಿದ್ದರೆ ಮಾಂಸಾಹಾರಿ ಆಹಾರವನ್ನು ನೀಡುವ ರೆಸ್ಟೋರೆಂಟ್‌ನಿಂದ ಏಕೆ ಆರ್ಡರ್ ಮಾಡುತ್ತೀರಿ, ಯಾವಾಗಲೂ ಒಂದೇ ಅಡುಗೆ ಪಾತ್ರೆಯಲ್ಲಿ ಆಹಾರವನ್ನು ಬೇಯಿಸುವ ಸಾಧ್ಯತೆಗಳಿವೆ” ಎಂದು ಕೇಳಿದರು.
We can understand how distressing it must’ve been for you. We take your dietary preferences very seriously and would never intend to disrespect them. Please share your order ID via DM so we can resolve this at the earliest with the restaurant partners. https://t.co/jcTFuGT2Se
— Zomato Care (@zomatocare) May 5, 2024
Zomato ಅನ್ನು ಟ್ಯಾಗ್ ಮಾಡಿರುವ ಇನ್ನೊಬ್ಬ ಎಕ್ಸ್ ಬಳಕೆದಾರರು, ”ನಿಜವಾಗಿಯೂ ಆಶ್ಚರ್ಯವಾಗಿದೆ! ಪನೀರ್ ಬಿರಿಯಾನಿ ಆರ್ಡರ್ ಮಾಡಿದರೂ ಅದರ ಬದಲಿಗೆ ಚಿಕನ್ ಸಿಕ್ಕಿತು. ಬಹಳ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ