ಪುಣೆ: ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಪುಣೆಯ ಪೋರ್ಷೆ ಕಾರು ಅಪಘಾತ ಪ್ರಕರಣ (Pune Porsche Accident Case) ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಾರು ಅಪಘಾತದಲ್ಲಿ (Car Accident) ಇಬ್ಬರನ್ನು ಕೊಂದ ಅಪ್ರಾಪ್ತ ಯುವಕನ ತಂದೆ ವಿಶಾಲ್ ಅಗರ್ವಾಲ್ ಅವರನ್ನು ಶುಕ್ರವಾರದವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಪೋರ್ಷೆ ಕಾರು ಅಪಘಾತವು ಪುಣೆಯಲ್ಲಿ ಕೆಲಸ ಮಾಡುತ್ತಿರುವ ಮಧ್ಯಪ್ರದೇಶ ಮೂಲದ 24 ವರ್ಷದ ಐಟಿ ಉದ್ಯೋಗಿಗಳಾದ ಅನಿಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಅವರ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಈ ರಸ್ತೆ ಅಪಘಾತ ಪ್ರಕರಣದಲ್ಲಿ ಪೋರ್ಷೆ ಕಾರು ಅಪಘಾತದಲ್ಲಿ ಇಬ್ಬರನ್ನು ಕೊಂದ ಹದಿಹರೆಯದವರ ತಂದೆ ವಿಶಾಲ್ ಅಗರ್ವಾಲ್ ಅವರನ್ನು ಶುಕ್ರವಾರ (ಮೇ 24) ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಅಗರ್ವಾಲ್ ಅವರನ್ನು ಪೊಲೀಸರು ಇಂದು ಪುಣೆ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
VEDANT AGARWAL
Age: 17 years, 8 months
Location: Pune
Father: Vishal Agarwal, Owner, Bramha Realty
Car: Porsche Taycan
Speed: 150 km/h
Registration: Unregistered
Number: No license plate
Victims: Two 24-yr-old IT engineers from M.P.
Time for grant of bail: 15 hours pic.twitter.com/iGNTuB5XAB— Shiv Aroor (@ShivAroor) May 20, 2024
ಪೊಲೀಸ್ ಕಸ್ಟಡಿ ಕುರಿತು ನ್ಯಾಯಾಲಯದ ಆದೇಶಕ್ಕೂ ಕೆಲವು ಗಂಟೆಗಳ ಮೊದಲು ಕೆಲವು ವ್ಯಕ್ತಿಗಳು ವಿಶಾಲ್ ಅಗರ್ವಾಲ್ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಕರೆತರುತ್ತಿದ್ದ ಪೊಲೀಸ್ ವಾಹನದ ಮೇಲೆ ಮಸಿ ಎರಚಲು ಪ್ರಯತ್ನಿಸಿದರು. ಮಧ್ಯ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಪಟ್ಟಣದಿಂದ ಮಂಗಳವಾರ ಸಂಜೆ ಬಂಧನಕ್ಕೊಳಗಾಗಿದ್ದ ಅಪ್ರಾಪ್ತನ ತಂದೆಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಶಿವಾಜಿನಗರ ಪ್ರದೇಶದ ನ್ಯಾಯಾಲಯ ಸಂಕೀರ್ಣಕ್ಕೆ ಕರೆತರುತ್ತಿದ್ದಾಗ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಗಂಡ ಹೆಂಡತಿ ಜಗಳ 3 ವರ್ಷದ ಮಗುವಿನ ಕೊಲೆಯಲ್ಲಿ ಅಂತ್ಯ
ಏನಿದು ಪ್ರಕರಣ?:
ಭಾನುವಾರ ಮುಂಜಾನೆ ಪುಣೆ ನಗರದ ಕಲ್ಯಾಣಿ ನಗರ ಪ್ರದೇಶದಲ್ಲಿ ಪಾನಮತ್ತನಾಗಿದ್ದ ಅಪ್ರಾಪ್ತ ಯುವಕನೊಬ್ಬ ಇಬ್ಬರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದ. ಆತ ಚಲಾಯಿಸುತ್ತಿದ್ದ ಪೋರ್ಷೆ ಕಾರು ಇಬ್ಬರು ಮೋಟರ್‌ಬೈಕ್‌ನಲ್ಲಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಮಾರಣಾಂತಿಕವಾಗಿ ಡಿಕ್ಕಿ ಹೊಡೆದು ಜೀವವನ್ನೇ ಬಲಿತೆಗೆದುಕೊಂಡಿತ್ತು. ಆರೋಪಿ ಬಾಲಾಪರಾಧಿ ತನ್ನ ಸ್ನೇಹಿತರೊಂದಿಗೆ ರಾತ್ರಿ 9.30ರಿಂದ 1 ಗಂಟೆಯ ನಡುವೆ ಬಾರ್ಗೆ ಹೋಗಿ ಮದ್ಯ ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೃಹ ಖಾತೆಯನ್ನು ಹೊಂದಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಕಾರು ಅಪಘಾತ ಪ್ರಕರಣವನ್ನು ನಿರ್ವಹಿಸುವಾಗ ಯಾವುದೇ ಪೊಲೀಸರ ನಿರ್ಲಕ್ಷ್ಯ ಬೆಳಕಿಗೆ ಬಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ ಮತ್ತು ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Shocking News: 1 ವರ್ಷದಿಂದ ಅತ್ಯಾಚಾರ; ಸ್ವಂತ ಅಣ್ಣಂದಿರಿಂದಲೇ ಗರ್ಭಿಣಿಯಾದ ಬಾಲಕಿ
“ಬಸ್, ಟ್ರಕ್ ಅಥವಾ ಓಲಾ-ಉಬರ್ ಚಾಲಕರು ತಪ್ಪಾಗಿ ಯಾರನ್ನಾದರೂ ರಸ್ತೆ ಅಪಘಾತದಲ್ಲಿ ಕೊಂದರೆ, ಅವರನ್ನು 10 ವರ್ಷಗಳ ಕಾಲ ಜೈಲಿಗೆ ಕಳುಹಿಸಲಾಗುತ್ತದೆ, ವಾಹನದ ಕೀಯನ್ನು ಕಸಿದುಕೊಳ್ಳಲಾಗುತ್ತದೆ. ಆದರೆ, 16 ವರ್ಷ ವಯಸ್ಸಿನವನು ಪೋರ್ಷೆ ಕಾರನ್ನು ಅಮಲೇರಿದ ಸ್ಥಿತಿಯಲ್ಲಿ ಓಡಿಸಿ ಇಬ್ಬರು ವ್ಯಕ್ತಿಗಳನ್ನು ಕೊಂದಿದ್ದಾನೆ. ಆದರೂ ಅವನಿಗೆ ಸೂಕ್ತ ಶಿಕ್ಷೆಯಾಗಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 pm, Wed, 22 May 24