AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆ ಪೋಷೆ ಕಾರು ಅಪಘಾತ: ಬಾಲಾಪರಾಧಿ ಕಾಯ್ದೆಯಡಿ ಆರೋಪಿಯ ಅಪ್ಪನಿಗೆ ಜಾಮೀನು

17 ವರ್ಷದ  ಬಾಲಕ ಕುಡಿದ ಅಮಲಿನಲ್ಲಿ ಪೋಷೆ ಚಲಾಯಿಸಿ ಬೈಕಿಗೆ ಡಿಕ್ಕಿ ಹೊಡೆದಿದ್ದನು. ಈ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಎಂಬ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವಿಗೀಡಾಗಿದ್ದರು. ಜೂನ್ 14 ರಂದು ಪುಣೆ ನ್ಯಾಯಾಲಯವು ಬಾಲಕನ ಪೋಷಕರು ಮತ್ತು ಇನ್ನೊಬ್ಬ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು.

ಪುಣೆ ಪೋಷೆ ಕಾರು ಅಪಘಾತ: ಬಾಲಾಪರಾಧಿ ಕಾಯ್ದೆಯಡಿ ಆರೋಪಿಯ ಅಪ್ಪನಿಗೆ ಜಾಮೀನು
ಪುಣೆ ಪೋಷೆ ಕಾರು ಅಪಘಾತ
ರಶ್ಮಿ ಕಲ್ಲಕಟ್ಟ
|

Updated on: Jun 21, 2024 | 8:42 PM

Share

ಪುಣೆ ಜೂನ್ 21: ಮೇ 19 ರಂದು ಪುಣೆಯ (Pune) ಕಲ್ಯಾಣಿ ನಗರದಲ್ಲಿ ಹದಿಹರೆಯದ ಬಾಲಕ ಪೋಷೆ ಕಾರು ( Porsche crash) ಚಲಾಯಿಸಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಎಂಜಿನಿಯರ್‌ಗಳು ಸಾವಿಗೀಡಾಗಿದ್ದರು. ಆ ಪ್ರಕರಣದಲ್ಲಿ ಆರೋಪಿ ಬಾಲಕನ ತಂದೆ ವಿಶಾಲ್ ಅಗರ್ವಾಲ್‌ಗೆ ಪುಣೆ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ. ಮೇ 21 ರಂದು ಬಂಧಿತರಾಗಿದ್ದ ಅಗರ್ವಾಲ್, ಬಾಲಾಪರಾಧಿ ಕಾಯ್ದೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ರಿಯಾಲಿಟಿ ಸಂಸ್ಥೆಯ ಬ್ರಹ್ಮಾ ಗ್ರೂಪ್‌ನ ಮಾಲೀಕರನ್ನು ಮೋಟಾರು ವಾಹನ ಕಾಯ್ದೆ (ಎಂವಿಎ) ಮತ್ತು ಜುವೆನೈಲ್ ಜಸ್ಟೀಸ್ ಆಕ್ಟ್ (ಜೆಜೆಎ) ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ‘ಪೋಷಕನಾಗಿ ತನ್ನ ಕರ್ತವ್ಯವನ್ನು ಮಾಡಲು ವಿಫಲವಾಗಿದ್ದಾರೆ’ ಎಂದು ದಾಖಲಿಸಲಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಮಗನಿಗಾಗಿ ಖರೀದಿಸಿದ್ದ ಪೋಷೆ ಕಾರಿಗೆ ₹44 ಲಕ್ಷ ರಸ್ತೆ ತೆರಿಗೆ ಪಾವತಿಸದ ಕಾರಣ ನೋಂದಣಿಯಾಗಿಲ್ಲ ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತ ಮಗನಿಗೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ.

17 ವರ್ಷದ  ಬಾಲಕ ಕುಡಿದ ಅಮಲಿನಲ್ಲಿ ಪೋಷೆ ಚಲಾಯಿಸಿ ಬೈಕಿಗೆ ಡಿಕ್ಕಿ ಹೊಡೆದಿದ್ದನು. ಈ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಎಂಬ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವಿಗೀಡಾಗಿದ್ದರು. ಜೂನ್ 14 ರಂದು ಪುಣೆ ನ್ಯಾಯಾಲಯವು ಬಾಲಕನ ಪೋಷಕರು ಮತ್ತು ಇನ್ನೊಬ್ಬ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ವಿಶಾಲ್ ಅಗರ್ವಾಲ್ ಮತ್ತು ಶಿವಾನಿ ಅಗರ್ವಾಲ್ ಮತ್ತು ಆಪಾದಿತ ಮಧ್ಯವರ್ತಿ ಅಶ್ಪಕ್ ಮಕಾಂದರ್ ಅವರು ಅಪಘಾತದ ಸಮಯದಲ್ಲಿ ಆರೋಪಿ ಬಾಲಕನ ರಕ್ತದ ಮಾದರಿಗಳನ್ನು ಬದಲಾಯಿಸಿದ ಆರೋಪದ ಮೇಲೆ ತನಿಖೆಯನ್ನು ಎದುರಿಸುತ್ತಿದ್ದಾರೆ.

ಅಂತಹ ಸಂದರ್ಭಗಳಲ್ಲಿ ರಕ್ತದ ಮಾದರಿಗಳನ್ನು ಸಂಗ್ರಹಿಸುವ ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ ಅಗರ್‌ವಾಲ್‌ಗಳು ಮತ್ತು ವೈದ್ಯರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಕಾಂದರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಅಸ್ಸಾಂ ಪ್ರವಾಹ; ಡಬಲ್ ಇಂಜಿನ್ ಸರ್ಕಾರ ಜನರಿಗೆ ದ್ರೋಹ ಮಾಡಿದೆ: ಮಲ್ಲಿಕಾರ್ಜುನ ಖರ್ಗೆ

ಬಾಲಕನ ತಾಯಿ ಶಿವಾನಿ ಅಗರ್ವಾಲ್ ಅವರ ರಕ್ತದ ಮಾದರಿಗಳನ್ನು ಬದಲಿಯಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಬಾಲಕನಿಗೆ ಅದೇ ದಿನ JJB ಜಾಮೀನು ನೀಡಿದ್ದು, ಹೆತ್ತವರು ಮತ್ತು ಅಜ್ಜನ ಆರೈಕೆ ಮತ್ತು ಮೇಲ್ವಿಚಾರಣೆಯಲ್ಲಿ ಇರಿಸಿಕೊಳ್ಳಲು ಆದೇಶಿಸಿತು. ರಸ್ತೆ ಸುರಕ್ಷತೆಯ ಬಗ್ಗೆ 300 ಪದಗಳ ಪ್ರಬಂಧವನ್ನು ಬರೆಯಲು ಆತನಿಗೆ ಹೇಳಲಾಯಿತು. ರಾಷ್ಟ್ರವ್ಯಾಪಿ ಕೋಲಾಹಲದ ನಡುವೆ, ಜಾಮೀನು ಆದೇಶವನ್ನು ತಿದ್ದುಪಡಿ ಮಾಡುವಂತೆ ಪೊಲೀಸರು ಜೆಜೆಬಿಗೆ ಮನವಿ ಮಾಡಿದರು. ಮೇ 22 ರಂದು, ಮಂಡಳಿಯು ಬಾಲಕನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಆದೇಶಿಸಿದ್ದು ಅವನನ್ನು ಅಬ್ಸರ್ವೇಷನ್ ಹೋಮ್​​​ನಲ್ಲಿರಿಸುವಂತೆ ಹೇಳಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ