Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ನದಿಗೆಸೆದ ಪ್ರಿಯಕರ

ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ನದಿಗೆ ಎಸೆದಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಪ್ರೇಯಸಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ನದಿಗೆಸೆದ ಪ್ರಿಯಕರ
ನದಿ-ಸಾಂದರ್ಭಿಕ ಚಿತ್ರImage Credit source: NDTV
Follow us
ನಯನಾ ರಾಜೀವ್
|

Updated on: Jul 23, 2024 | 8:27 AM

ಪುಣೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಪ್ರೇಯಸಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ನದಿಗೆ ಎಸೆದು ಅಮಾನವೀಯವಾಗಿ ವರ್ತಿಸಿದ್ದಾನೆ.

ಮಹಿಳೆ ಗಂಡನನ್ನು ತೊರೆದು ಮಕ್ಕಳೊಂದಿಗೆ ಪ್ರಿಯಕರನ ಜತೆ ಲಿವ್ ಇನ್​ ರಿಲೇಷನ್​ಶಿಪ್​ನಲ್ಲಿದ್ದರು. ಆಕೆ ತನ್ನ ಜೀವನಕ್ಕೆ ಆಸರೆಯಾಗುತ್ತಾನೆಂದು ಭಾವಿಸಿ ಎಲ್ಲವನ್ನೂ ಅರ್ಪಿಸಿದ್ದಳು.

ಪತಿಯನ್ನು ತೊರೆದು 25 ವರ್ಷದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಜೀವನ ನಡೆಸುತ್ತಿದ್ದಳು, ಈಗ ಆಕೆ ಗರ್ಭಿಣಿಯಾಗದ್ದಳು, ವ್ಯಕ್ತಿಗೆ ಮಗು ಇಷ್ಟವಿರಲಿಲ್ಲ ಹೀಗಾಗಿ ಆಕೆಗೆ ಗರ್ಭಪಾತ ಮಾಡಿಸುವ ದೃಷ್ಟಿಯಿಂದ ಆಸ್ಪತ್ರೆಗೆ ಕರೆದೊಯ್ದಿದ್ದ. ಆಗ ಆಕೆ ಸಾವನ್ನಪ್ಪಿದ್ದಾಳೆ.

ಬಳಿಕ ಸ್ನೇಹಿತನ ಜತೆ ಸೇರಿ ಆಕೆಯನ್ನು ನದಿಗೆ ಎಸೆದಿದ್ದಾನೆ, ಅದನ್ನು ನೋಡಿದ ಮಕ್ಕಳು ಅಳಲು ಶುರು ಮಾಡಿದ್ದರು, ಕೋಪಗೊಂಡ ವ್ಯಕ್ತಿ ಇಬ್ಬರು ಮಕ್ಕಳನ್ನೂ ಕೂಡ ನದಿಗೆ ಎಸೆದಿದ್ದಾನೆ.

ಮೃತ ಮಹಿಳೆ ತಾಯಿ ತನ್ನ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ: ಕನಕಪುರದಲ್ಲಿ ರಕ್ತದೋಕುಳಿ: ಮಹಿಳೆಯರು ಸೇರಿದಂತೆ‌ 7 ಜನರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ

ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಕ್ಕಳನ್ನೂ ಕೊಂದಿರುವ ವಿಚಾರ ಬಾಯ್ಬಿಟ್ಟಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದ ಪರಿಶೀಲನೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ