ನವದೆಹಲಿ: ಗಂಡ-ಹೆಂಡತಿ ಜಗಳ ಬೀದಿಗಿಳಿದು ಜಗಳವಾಡುವುದು ಸಾಮಾನ್ಯ. ಆದರೆ, ಶಾಸಕಿಗೇ ಜನರೆದುರು ಗಂಡ ಕಪಾಲಕ್ಕೆ ಹೊಡೆದಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ಗಂಡ- ಹೆಂಡತಿ ನಡುವೆ ಜಗಳ ಉಂಟಾದ ಪರಿಣಾಮ ಆಮ್ ಆದ್ಮಿ ಪಕ್ಷದ (AAP) ಶಾಸಕಿ ಬಲ್ಜಿಂದರ್ ಕೌರ್ (Baljinder Kaur) ಅವರಿಗೆ ಆಡಳಿತ ಪಕ್ಷದ ನಾಯಕರೂ ಆಗಿರುವ ಅವರ ಪತಿ ಕಪಾಳಮೋಕ್ಷ ಮಾಡಿದ್ದಾರೆ.
ತಲ್ವಾಂಡಿ ಸಾಬೊದಿಂದ 2 ಬಾರಿ ಶಾಸಕಿಯಾಗಿರುವ ಬಲ್ಜಿಂದರ್ ಕೌರ್ ಜೊತೆ ಜಗಳವಾಡಿದ ಆಕೆಯ ಗಂಡ ಜನರೆದುರೇ ಶಾಸಕಿಗೆ ಹೊಡೆದಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಬಲ್ಜಿಂದರ್ ಕೌರ್ ತನ್ನ ಪತಿ ಸುಖರಾಜ್ ಸಿಂಗ್ ಜೊತೆ ಜಗಳವಾಡುತ್ತಿರುವುದನ್ನು ನೋಡಬಹುದು. ಆಗ ಸುಖರಾಜ್ ಸಿಂಗ್ ಎದ್ದು ಕೋಪದಿಂದ ಬಲ್ಜಿಂದರ್ ಕೌರ್ ಕಪಾಲಕ್ಕೆ ಹೊಡೆದಿದ್ದಾರೆ. ಆಗ ದಂಪತಿಗಳ ಬಳಿ ನಿಂತಿದ್ದ ಕೆಲವರು ಮಧ್ಯ ಪ್ರವೇಶಿಸಿ ಸುಖರಾಜ್ ಸಿಂಗ್ರನ್ನು ತಳ್ಳಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ: ಬಂಧನದ ಎಕ್ಸ್ಕ್ಲ್ಯೂಸೀವ್ ವಿಡಿಯೋ ಇಲ್ಲಿದೆ
ಜುಲೈ 10ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕಿ ಬಲ್ಜಿಂದರ್ ಕೌರ್ ತನ್ನ ಪತಿಯ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ಅವರು ಈ ವೀಡಿಯೊವನ್ನು ನೋಡಿದ್ದಾರೆ. ಈ ಘಟನೆಯ ಬಗ್ಗೆ ಸ್ವಯಂಪ್ರೇರಿತವಾಗಿ ನೋಟಿಸ್ ನೀಡುವುದಾಗಿ ಹೇಳಿದ್ದಾರೆ.
The lady being assaulted is AAP MLA Baljinder Kaur and man doing so is her husband…. #Punjab pic.twitter.com/uMLVoeP3UP
— Arshdeep (@arsh_kaur7) September 1, 2022
ಎಎಪಿಯ ಮಜಾ ಪ್ರದೇಶದ ಯುವ ವಿಭಾಗದ ಸಂಚಾಲಕರಾಗಿರುವ ಬಲ್ಜಿಂದರ್ ಕೌರ್ ಮತ್ತು ಸುಖರಾಜ್ ಸಿಂಗ್ ಫೆಬ್ರವರಿ 2019ರಲ್ಲಿ ವಿವಾಹವಾಗಿದ್ದರು. ಬಲ್ಜಿಂದರ್ ಕೌರ್ ಅವರು 2009ರಲ್ಲಿ ಪಟಿಯಾಲದ ಪಂಜಾಬ್ ವಿಶ್ವವಿದ್ಯಾಲಯದಿಂದ M Phil ಪದವಿ ಪಡೆದಿದ್ದಾರೆ. ರಾಜಕೀಯಕ್ಕೆ ಸೇರುವ ಮೊದಲು, ಬಲ್ಜಿಂದರ್ ಕೌರ್ ಫತೇಘರ್ ಸಾಹಿಬ್‌ನಲ್ಲಿರುವ ಮಾತಾ ಗುಜ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು.
Published On - 10:25 am, Fri, 2 September 22