AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್: ಹೈವೇಗಳಲ್ಲಿ ಟ್ರಾಕ್ಟರ್ ಟ್ರಾಲಿಗಳನ್ನು ಬಳಸುವಂತಿಲ್ಲ, ರೈತ ಪ್ರತಿಭಟನಾಕಾರರಿಗೆ ಹೈಕೋರ್ಟ್ ತರಾಟೆ

ನೂರಾರು ರೈತರು ದಿಲ್ಲಿ ಚಲೋ ಕರೆಗೆ ಪ್ರತಿಯಾಗಿ ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ರೈತ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಮೋಟಾರು ವಾಹನ ಕಾಯಿದೆಯ ಪ್ರಕಾರ, ನೀವು ಹೆದ್ದಾರಿಯಲ್ಲಿ ಟ್ರ್ಯಾಕ್ಟರ್-ಟ್ರಾಲಿಗಳನ್ನು ಬಳಸುವಂತಿಲ್ಲ. ನೀವು ಅಮೃತಸರದಿಂದ ದೆಹಲಿಗೆ ಟ್ರಾಲಿಗಳಲ್ಲಿ ಪ್ರಯಾಣಿಸುತ್ತಿದ್ದೀರಿ” ಎಂದು ಟೀಕಿಸಿದೆ.

ಪಂಜಾಬ್: ಹೈವೇಗಳಲ್ಲಿ ಟ್ರಾಕ್ಟರ್ ಟ್ರಾಲಿಗಳನ್ನು ಬಳಸುವಂತಿಲ್ಲ, ರೈತ ಪ್ರತಿಭಟನಾಕಾರರಿಗೆ ಹೈಕೋರ್ಟ್ ತರಾಟೆ
ಟ್ರ್ಯಾಕ್ಟರ್
ರಶ್ಮಿ ಕಲ್ಲಕಟ್ಟ
|

Updated on: Feb 20, 2024 | 6:42 PM

Share

ಅಮೃತಸರ ಫೆಬ್ರುವರಿ 20: ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ (Punjab and Haryana high court) ಮಂಗಳವಾರ ನೂರಾರು ಟ್ರ್ಯಾಕ್ಟರ್‌ಗಳೊಂದಿಗೆ ಶಂಭು ಗಡಿಯಲ್ಲಿ (Shambhu border) ಮೊಕ್ಕಾಂ ಹೂಡಿರುವ ಪ್ರತಿಭಟನಾ ನಿರತ ರೈತರನ್ನು ತರಾಟೆಗೆ ತೆಗೆದುಕೊಂಡಿದ್ದು ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ ಟ್ರಾಲಿಗಳನ್ನು ಬಳಸಲಾಗುವುದಿಲ್ಲ ಎಂದು ಹೇಳಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರ ಪೀಠವು ಪಂಜಾಬ್ ಸರ್ಕಾರವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರ ಸಭೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿದೆ. “ಮೋಟಾರು ವಾಹನ ಕಾಯಿದೆಯ ಪ್ರಕಾರ, ನೀವು ಹೆದ್ದಾರಿಯಲ್ಲಿ ಟ್ರ್ಯಾಕ್ಟರ್-ಟ್ರಾಲಿಗಳನ್ನು ಬಳಸುವಂತಿಲ್ಲ. ನೀವು ಅಮೃತಸರದಿಂದ ದೆಹಲಿಗೆ ಟ್ರಾಲಿಗಳಲ್ಲಿ ಪ್ರಯಾಣಿಸುತ್ತಿದ್ದೀರಿ,” ಎಂದು ಟೀಕಿಸಿದ ಪೀಠ, “ಎಲ್ಲರಿಗೂ ಹಕ್ಕುಗಳ ಬಗ್ಗೆ ತಿಳಿದಿದೆ ಆದರೆ ಸಾಂವಿಧಾನಿಕ ಕರ್ತವ್ಯಗಳಿವೆ” ಎಂದು ಒತ್ತಿಹೇಳಿತು.

ಪಂಚಕುಲದ ಅಮರಾವತಿ ಎನ್‌ಕ್ಲೇವ್‌ನ ನಿವಾಸಿ, ವಕೀಲ ಉದಯ್ ಪ್ರತಾಪ್ ಸಿಂಗ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಆಲಿಸಿದ ನ್ಯಾಯಾಲಯ, ಫೆಬ್ರವರಿ 13 ರಿಂದ ರಸ್ತೆ ತಡೆಯಿಂದ ನಿವಾಸಿಗಳಿಗೆ ಅನಾನುಕೂಲತೆ ಮಾತ್ರವಲ್ಲದೆ ಪಾದಾಚಾರಿಗಳಿಗೆ, ಆಂಬ್ಯುಲೆನ್ಸ್, ಶಾಲಾ ಬಸ್ಸುಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎಂದಿದೆ.

ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 ಮತ್ತು ಹರ್ಯಾಣದ ಹಲವಾರು ಜಿಲ್ಲೆಗಳಾದ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು ಮತ್ತು ಎಸ್ಎಂಎಸ್ ಅನ್ನು ಸ್ಥಗಿತ ಮಾಡುವ ಮೂಲಕ ವಿಧಿಸಲಾದ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ದೇಶನಗಳನ್ನು ಅರ್ಜಿದಾರರು ಕೋರಿದ್ದಾರೆ.

ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಸೂತ್ರ ಜಾರಿ, ರೈತರ ಸಂಪೂರ್ಣ ಸಾಲ ಮನ್ನಾ, ರೈತರು ಮತ್ತು ಕೂಲಿಕಾರರಿಗೆ ಪಿಂಚಣಿ, 2020-21 ರ ಪ್ರತಿಭಟನೆಯಲ್ಲಿ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಿ ನೂರಾರು ರೈತರು ದಿಲ್ಲಿ ಚಲೋ ಕರೆಗೆ ಪ್ರತಿಯಾಗಿ ಪಂಜಾಬ್-ಹರ್ಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ: Chandigarh mayoral polls: ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮೇಯರ್ ಎಂದು ಘೋಷಿಸಿದ ಸುಪ್ರೀಂಕೋರ್ಟ್

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಮ್ಮುಖದಲ್ಲಿ ಕೇಂದ್ರ ಸಚಿವರು ಚಂಡೀಗಢದಲ್ಲಿ ರೈತರನ್ನು ಭೇಟಿ ಮಾಡಿದರೂ ಕೇಂದ್ರದೊಂದಿಗೆ ರೈತ ಮುಖಂಡರ ನಾಲ್ಕು ಸುತ್ತಿನ ಮಾತುಕತೆ ವಿಫಲವಾಗಿದೆ. ವಿಚಾರಣೆಯ ಸಂದರ್ಭದಲ್ಲಿ, ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳು ವಾಸ್ತವ ಪರಿಸ್ಥಿತಿಯ ಸ್ಥಿತಿಗತಿ ವರದಿಗಳನ್ನು ಸಲ್ಲಿಸಿವೆ.ಮುಂದಿನ ವಿಚಾರಣೆಯ ದಿನಾಂಕವನ್ನು ಮುಂದಿನ ವಾರಕ್ಕೆ ನಿಗದಿಪಡಿಸಿದ ನ್ಯಾಯಾಲಯವು ಮುಂದೂಡಿದ ದಿನಾಂಕದೊಳಗೆ ರೈತರೊಂದಿಗೆ ಮಾತುಕತೆಯ ಫಲಿತಾಂಶದ ಬಗ್ಗೆ ವರದಿ ಕೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ