Chandigarh mayoral polls: ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮೇಯರ್ ಎಂದು ಘೋಷಿಸಿದ ಸುಪ್ರೀಂಕೋರ್ಟ್
Kuldeep Kumar: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮತಪತ್ರ ತಿರುಚಿದ ಆರೋಪದ ಕುರಿತು ಇಂದು(ಮಂಗಳವಾರ) ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚುನಾವಣಾ ಅಧಿಕಾರಿ ಅಸಿಂಧು ಎಂದು ಘೋಷಿಸಿದ ಮತಗಳನ್ನು ಮಾನ್ಯವೆಂದು ಪರಿಗಣಿಸಬೇಕು ಮತ್ತು ಮರುಎಣಿಕೆ ನಡೆಸಬೇಕು ಎಂದು ಹೇಳಿದ್ದು ಎಎಪಿಯ ಕುಲದೀಪ್ ಕುಮಾರ್ ಮೇಯರ್ ಎಂದು ಘೋಷಿಸಿದೆ.
ದೆಹಲಿ ಫೆಬ್ರುವರಿ 20: ಚಂಡೀಗಢ ಮೇಯರ್ ಚುನಾವಣೆಯಲ್ಲಿ (Chandigarh mayoral election) ಎಎಪಿಯ ಕುಲದೀಪ್ ಕುಮಾರ್ (Kuldeep Kumar) ವಿಜೇತ ಎಂದು ಸುಪ್ರೀಂಕೋರ್ಟ್ (Supreme Court) ಘೋಷಿಸಿದೆ. ಮತಪತ್ರ ತಿರುಚಿದ ಆರೋಪದ ಕುರಿತು ಇಂದು(ಮಂಗಳವಾರ) ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚುನಾವಣಾ ಅಧಿಕಾರಿ ಅಸಿಂಧು ಎಂದು ಘೋಷಿಸಿದ ಮತಗಳನ್ನು ಮಾನ್ಯವೆಂದು ಪರಿಗಣಿಸಬೇಕು ಮತ್ತು ಮರುಎಣಿಕೆ ನಡೆಸಬೇಕು ಎಂದು ಹೇಳಿದೆ.ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಕುಲದೀಪ್ ಕುಮಾರ್ ವಿರುದ್ಧ ಬಿಜೆಪಿ ಗೆಲುವು ಸಾಧಿಸಿತ್ತು. ಚುನಾವಣಾಧಿಕಾರಿಯು ಸಮ್ಮಿಶ್ರ ಪಾಲುದಾರರ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿದ್ದರಿಂದ ಕುಲದೀಪ್ ಸೋತಿದ್ದರು. ಇದೀಗ ಚುನಾವಣಾ ಅಧಿಕಾರಿ ಅಸಿಂಧು ಎಂದು ಘೋಷಿಸಿದ ಮತ ಅಸಿಂಧು ಅಲ್ಲ ಎಂದು ಹೇಳಿದ ನ್ಯಾಯಾಲಯ, ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಘೋಷಿಸಿದೆ.
ಸುಪ್ರೀಂ ತೀರ್ಪು ನಂತರ ಸುದ್ದಿಸಂಸ್ಥೆ ಪಿಟಿಐ ಜತೆ ಮಾತನಾಡಿದ ಕುಲದೀಪ್ ಕುಮಾರ್, ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಚಂಡೀಗಢದ ಜನತೆ ಮತ್ತು ಇಂಡಿಯಾ ಮೈತ್ರಿಕೂಟದ ಗೆಲುವಾಗಿದೆ. ಬಿಜೆಪಿಯನ್ನು ಅಜೇಯ ಅಲ್ಲ ಎಂಬುದನ್ನು ಇದು ತೋರಿಸುತ್ತದೆ. ನಾವು ಒಗ್ಗಟ್ಟಾಗಿ ಇದ್ದರೆ ಅವರನ್ನು ಸೋಲಿಸಬಹುದು ಎಂದು ಹೇಳಿದ್ದಾರೆ.
ಮೇಯರ್ ಕುಲದೀಪ್ ಕುಮಾರ್ ಮಾತು
VIDEO | “I would like to thank the Supreme Court. This is a win for the people of Chandigarh and the INDIA alliance. This shows that the BJP is not unbeatable and we can defeat them if we stay united,” says Kuldeep Kumar who has been declared the winner of Chandigarh Mayoral… pic.twitter.com/YPYXQLUX1r
— Press Trust of India (@PTI_News) February 20, 2024
ಚಂಡೀಗಢದ ಮೇಯರ್ ಆಗಿ ಆಪ್ ಕುಲದೀಪ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್ ಘೋಷಿಸಿದ್ದು ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆ ಆಗಿದೆ
ಅಮಾನ್ಯಗೊಂಡ ಎಲ್ಲಾ ಎಂಟು ಮತಪತ್ರಗಳು ಆಪ್ ಮೇಯರ್ ಅಭ್ಯರ್ಥಿ ಕುಲದೀಪ್ ಕುಮಾರ್ ಪರವಾಗಿ ಚಲಾವಣೆಯಾದ ಮತಗಳು. ಅವು ಅಸಿಂಧುವಲ್ಲ. ಈ ಎಂಟು ಮತಗಳನ್ನು ಮಾನ್ಯವೆಂದು ಪರಿಗಣಿಸಬೇಕು ಎಂದು ಅದು ನಿರ್ದೇಶಿಸಿದ ಸುಪ್ರೀಂಕೋರ್ಟ್, ಅದರ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿತ್ತು.
“ನಾವು ಮೇಯರ್ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸುವಂತೆ ನಿರ್ದೇಶಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ “ಚಂಡೀಗಢ ಮೇಯರ್ ಚುನಾವಣೆಯ ಚುನಾವಣಾಧಿಕಾರಿ ಅನಿಲ್ ಮಸಿಹ್ ವಿರುದ್ಧ ಸೆಕ್ಷನ್ 340 CrPC ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ಆದೇಶಿಸಿದೆ. ಅದೇ ವೇಳೆ ಅವರ ವಿರುದ್ಧ ಏಕೆ ಕ್ರಮಕೈಗೊಳ್ಳಬಾರದು ಎಂಬುದಕ್ಕೆ ಕಾರಣ ತೋರಿಸಲು ನೋಟಿಸ್ ನೀಡುವಂತೆ ರಿಜಿಸ್ಟ್ರಾರ್ ಜುಡಿಷಿಯಲ್ ಅವರಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ: 8 ಮತಗಳು ಅಸಿಂಧು ಅಲ್ಲ, ಮರುಎಣಿಕೆಗೆ ಸುಪ್ರೀಂಕೋರ್ಟ್ ಆದೇಶ
ಚುನಾವಣೆಯಲ್ಲಿ ಬಿಜೆಪಿ ಮನೋಜ್ ಸೋಂಕರ್ 16 ಮತಗಳಿಸಿದರೆ, ಕುಲದೀಪ್ ಕುಮಾರ್ 12 ಮತಗಳಿಸಿದ್ದರು. ಮೇಯರ್ ಚುನಾವಣೆಯಲ್ಲಿ ಗೆದ್ದ ಮನೋಜ್ ಆಮೇಲೆ ರಾಜೀನಾಮೆ ನೀಡಿದ್ದರು.
ಇತ್ತ ಚುನಾವಣಾ ಅಧಿಕಾರಿ ಬ್ಯಾಲೆಟ್ ಪೇಪರ್ ತಿರುಚಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿತ್ತು. ಚುನಾವಣಾ ಅಧಿಕಾರಿ ಬ್ಯಾಲೆಟ್ ಪೇಪರ್ ಮೇಲೆ ಗೆರೆ ಎಳೆಯುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಚುನಾವಣಾ ಅಧಿಕಾರಿ ಅನಿಲ್ ಮಸಿಹ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಎಂಟು ಮತ ಪತ್ರಗಳನ್ನು ತಿರುಚಿದ್ದರಿಂದಲೇ ಕುಲದೀಪ್ ಅವರು ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಬ್ಯಾಲೆಟ್ ಪೇಪರ್ ತಿರುಚಿದ್ದರ ಬಗ್ಗೆ ಕೋರ್ಟ್ ಪ್ರಶ್ನಿಸಿದಾಗ ಬ್ಯಾಲೆಟ್ ಪೇಪರ್‌ಗಳು ಮಿಶ್ರವಾಗದಂತೆ ನೋಡಿಕೊಳ್ಳಲು ‘X’ ಗುರುತು ಹಾಕಿದ್ದಾಗಿ ಚುನಾವಣಾಧಿಕಾರಿ ಒಪ್ಪಿಕೊಂಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Tue, 20 February 24