ಪಂಜಾಬ್ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಮನೆ ಬಾಗಿಲ ಬಳಿ ಸ್ಫೋಟ

ಪಂಜಾಬ್​ನಲ್ಲಿ ಬಿಜೆಪಿ ನಾಯಕನ ನಿವಾಸದ ಎದುರು ಭಾರಿ ಸ್ಫೋಟ ಸಂಭವಿಸಿದೆ. ಪಂಜಾಬ್​ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಮನೆ ಎದುರು ಸ್ಫೋಟ(Blast) ಸಂಭವಿಸಿದೆ. ಕಾಲಿಯಾ ಸುರಕ್ಷಿತವಾಗಿದ್ದಾರೆ. ಘಟನೆಯ ನಂತರ ಪೊಲೀಸ್ ತಂಡಗಳು ಕಾಲಿಯಾ ಅವರ ನಿವಾಸಕ್ಕೆ ಧಾವಿಸಿವೆ. ಸ್ಫೋಟದ ಸ್ಥಳದಿಂದ ವಿಧಿವಿಜ್ಞಾನ ತಜ್ಞರು ಸಹ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ.

ಪಂಜಾಬ್ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಮನೆ ಬಾಗಿಲ ಬಳಿ ಸ್ಫೋಟ
ಸ್ಫೋಟ

Updated on: Apr 08, 2025 | 8:20 AM

ಜಲಂಧರ್, ಏಪ್ರಿಲ್ 08: ಪಂಜಾಬ್​ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಮನೆ ಎದುರು ಸ್ಫೋಟ(Blast) ಸಂಭವಿಸಿದೆ. ಕಾಲಿಯಾ ಸುರಕ್ಷಿತವಾಗಿದ್ದಾರೆ. ಘಟನೆಯ ನಂತರ ಪೊಲೀಸ್ ತಂಡಗಳು ಕಾಲಿಯಾ ಅವರ ನಿವಾಸಕ್ಕೆ ಧಾವಿಸಿವೆ. ಸ್ಫೋಟದ ಸ್ಥಳದಿಂದ ವಿಧಿವಿಜ್ಞಾನ ತಜ್ಞರು ಸಹ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಅಪರಾಧಿಯನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ.

ಮಧ್ಯರಾತ್ರಿ 1 ಗಮಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಮನೆಯವರೆಲ್ಲರೂ ಮಲಗಿದ್ದರು, ಸ್ಫೋಟ ಸಂಭವಿಸಿದಾಗ ಮೊದಲು ಸಿಡಿಲು ಎಂದುಕೊಂಡೆ ಬಳಿಕ ಸ್ಫೋಟ ಎಂದು ತಿಳಿಯಿತು ಎಂದು ಕಾಲಿಯಾ ಹೇಳಿದ್ದಾರೆ.

ಇದನ್ನೂ ಓದಿ
Video: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಐಇಡಿ ಸ್ಫೋಟ, ಐವರು ಸಾವು
ಜಾರ್ಖಂಡ್​ನಲ್ಲಿ ನಕ್ಸಲರಿಂದ ಐಇಡಿ ಸ್ಫೋಟ, ಮೂವರು ಯೋಧರಿಗೆ ಗಾಯ
ಛತ್ತೀಸ್​ಗಢದಲ್ಲಿ ಸೈನಿಕರ ವಾಹನದ ಮೇಲೆ ನಕ್ಸಲರಿಂದ ಐಇಡಿ ಸ್ಫೋಟ; 9 ಜನ ಸಾವು
ಛತ್ತೀಸ್​ಗಢದಲ್ಲಿ ಐಇಡಿ ಸ್ಫೋಟ: ನಾಲ್ವರಿಗೆ ಗಾಯ

ಪೊಲೀಸ್ ಆಯುಕ್ತೆ ಧನಪ್ರೀತ್ ಕೌರ್ ಅವರು ಸ್ಫೋಟದ ಸ್ಥಳವನ್ನು ಪರಿಶೀಲಿಸಿದರು.ವಿಧಿವಿಜ್ಞಾನ ತಂಡವು ಈ ವಿಷಯವನ್ನು ತನಿಖೆ ಮಾಡುತ್ತಿದೆ… ನಾವು ಸಿಸಿಟಿವಿಯನ್ನು ಸಹ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ವಿಧಿವಿಜ್ಞಾನ ತಂಡವು ಇದು ಗ್ರೆನೇಡ್ ದಾಳಿಯೋ ಅಥವಾ ಇನ್ನೇನಾದರೂ ದಾಳಿಯೋ ಎಂದು ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಕಳೆದ ತಿಂಗಳು, ಜಲಂಧರ್ ಮೂಲದ ಯೂಟ್ಯೂಬರ್ ಒಬ್ಬರ ಮನೆಯ ಮೇಲೆ ಗ್ರೆನೇಡ್ ಎಸೆದ ಆರೋಪದ ಮೇಲೆ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಅಮೃತ್‌ಪ್ರೀತ್ ಸಿಂಗ್ ಎಂದು ಗುರುತಿಸಲ್ಪಟ್ಟಿದ್ದು, ಚುಹರ್ವಾಲಿ ಗ್ರಾಮದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ.

ಮತ್ತಷ್ಟು ಓದಿ: ಐಇಡಿ ಸ್ಫೋಟ, ಯೋಧರನ್ನು ರಕ್ಷಿಸುವ ವೇಳೆ ಸಿಆರ್​ಪಿಎಫ್​ ಶ್ವಾನಕ್ಕೆ ಗಂಭೀರ ಗಾಯ

ಶಂಕಿತನೊಬ್ಬ ಕಾಲಿಯ ಅವರ ಮನೆ ಮೇಲೆ ಗ್ರೆನೇಡ್​ ಎಸೆದಿದ್ದ ಆದರೆ ಅದೃಷ್ಟವಶಾತ್ ಅದು ಮನೆಯ ಬಾಗಿಲ ಬಳಿ ಬಿದ್ದಿತ್ತು. ಈ ಸ್ಫೋಟದಿಂದ ಮನೆಯ ಬಾಗಿಲಿಗೆ ಹಾನಿಯಾಗಿದೆ. ದಾಳಿಕೋರ ಇ-ರಿಕ್ಷಾದಲ್ಲಿ ಬಂದು ಗ್ರೆನೇಡ್​ ಎಸೆದು ಅದೇ ಆಟೋದಲ್ಲಿ ಪರಾರಿಯಾಗಿದ್ದಾನೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಇ-ರಿಕ್ಷಾ ಆರಂಭದಲ್ಲಿ ಶಾಸ್ತ್ರಿ ಮಾರುಕಟ್ಟೆಯ ದಿಕ್ಕಿನಿಂದ ಅವರ ಮನೆಯನ್ನು ದಾಟಿ ನಂತರ ಹಿಂದಕ್ಕೆ ತಿರುಗಿತು ಎಂದು ಕಾಲಿಯಾ ವಿವರಿಸಿದರು. ಒಬ್ಬ ವ್ಯಕ್ತಿ ಹೊರಬಂದು ಸುತ್ತಲೂ ನೋಡಿ ತನ್ನ ಎಡಗೈಯಿಂದ ಗ್ರೆನೇಡ್ ಎಸೆದು ಪರಾರಿಯಾಗಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ