AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಆ ಸ್ಥಳದಲ್ಲಿ ಸ್ಫೋಟಕ ಇಡಲು ಪ್ಲಾನ್: ಬಾಯ್ಬಿಟ್ಟ ಅಬ್ದುಲ್ ರೆಹಮಾನ್

ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಸ್ಫೋಟಕಗಳ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಬ್ದುಲ್ ರೆಹಮಾನ್​ ವಿಚಾರಣೆ ವೇಳೆ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾರೆ. ಪ್ಯಾಲೇಸ್ ಗ್ರೌಂಡ್ ಬಳಿ ಅನಾಮಿಕ ವ್ಯಕ್ತಿಯಿಂದ ಸ್ಫೋಟಕಗಳನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರಿನ ಆ ಸ್ಥಳದಲ್ಲಿ ಸ್ಫೋಟಕ ಇಡಲು ಪ್ಲಾನ್: ಬಾಯ್ಬಿಟ್ಟ ಅಬ್ದುಲ್ ರೆಹಮಾನ್
ಪ್ರಾತಿನಿಧಿಕ ಚಿತ್ರ
Shivaprasad B
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 30, 2025 | 10:45 AM

Share

ಬೆಂಗಳೂರು, ಮಾರ್ಚ್​ 30: ಇತ್ತೀಚಗೆ ನಗರದ ಸಂಪಿಗೆಹಳ್ಳಿ (Sampigehalli) ಠಾಣೆ ವ್ಯಾಪ್ತಿಯ ಹೋಟೆಲ್​ವೊಂದ ಸಪ್ಲೈಯರ್​ ಬ್ಯಾಗ್​​ನಲ್ಲಿ ಸ್ಫೋಟಕ ಹ್ಯಾಂಡ್ ಗ್ರೆನೇಡ್ (Hand Grenade) ಪತ್ತೆಯಾಗಿತ್ತು.  ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಲಾಗಿತ್ತು. ಕಳೆದ ಒಂದು ವಾರದಿಂದಲೂ ಕೇಂದ್ರ ತನಿಖಾ ತಂಡಗಳಿಂದ ಅಬ್ದುಲ್ ರೆಹಮಾನ್ ವಿಚಾರಣೆ ನಡೆದಿದ್ದು, ಅದೊಂದು ಜಾಗದಲ್ಲಿ ಸ್ಪೋಟಕ ಇಡಲು ಪ್ಲಾನ್​ ನಡೆದಿತ್ತು ಎಂಬ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾನೆ. ಹಾಗಾದರೆ ತನಿಖಾಧಿಕಾರಿಗಳ ಮುಂದೆ ಆರೋಪಿ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ಒಂದು ವಾರದಿಂದಲೂ ಎನ್​ಐಎ, ಐಬಿ ಮತ್ತು ಐಎಸ್​​ಡಿ ಅಧಿಕಾರಿಗಳಿಂದ ಆರೋಪಿ ಅಬ್ದುಲ್ ತೀವ್ರ ವಿಚಾರಣೆ ನಡೆಯುತ್ತಿದೆ. ಅರಮನೆ ಮೈದಾನದ ಬಳಿಯೇ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದ ಆರೋಪಿ ಅಬ್ದುಲ್​​ಗೆ ಪ್ಯಾಲೇಸ್ ಗ್ರೌಂಡ್​ನಲ್ಲಿ ಅನಾಮಿಕ ವ್ಯಕ್ತಿ ಸ್ಫೋಟಕ ಕೊಟ್ಟಿದ್ದು, ಸಿಗರೇಟ್​ ಶಾಪ್​ ಬಳಿ ಸ್ಫೋಟಕ ಇಡಲು ಹೇಳಿದ್ದಾಗಿ ಬಾಯ್ಬಿಟ್ಟಿದ್ದಾನೆ. ಒಂದೊಂದು ಬಾರಿ ಒಂದೊಂದು ಹೆಸರು ಹೇಳುತ್ತಿರುವ ಆರೋಪಿ, ಒಟ್ಟು ಮೂರು ಹೆಸರುಗಳನ್ನು ಹೇಳಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನ ಹೋಟೆಲ್​ ಸಪ್ಲೈಯರ್​​ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆ: ಸ್ಫೋಟಕ್ಕೆ ನಡೆದಿತ್ತಾ ಸಂಚು..?

ಇದನ್ನೂ ಓದಿ
Image
ಕರ್ನಾಟಕದಲ್ಲಿ ಇ-ಪ್ರಸಾದ ಸೇವೆ ಆರಂಭ, ಬೇರೆ ರಾಜ್ಯಗಳ ಭಕ್ತರಿಂದಲೂ ಬೇಡಿಕೆ
Image
ಏಪ್ರಿಲ್ 2ರಿಂದ ಕರ್ನಾಟಕದಾದ್ಯಂತ ಭಾರಿ ಮಳೆ, ಯೆಲ್ಲೋ ಅಲರ್ಟ್​
Image
ಕಿತ್ತೂರು ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಸಿಎಂ ಪತ್ರ
Image
ಬರಿದಾಗುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು: ರೈತರಲ್ಲಿ ಆತಂಕ

ರಾಜಣ್ಣ ಎಂಬಾತನೇ ಅರಮನೆ ಮೈದಾನದಿಂದ ಆಟೋದಲ್ಲಿ ಥಣಿಸಂದ್ರದ ಹೋಟೆಲ್​ಗೆ ಹೋಗಿದ್ದಾಗಿ ಅಬ್ದುಲ್ ಮಾಹಿತಿ ನೀಡಿದ್ದು, ಆಟೋ ಚಾಲಕನನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಆರೋಪಿ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಇಬ್ಬರು ಹೇಳಿದ್ದಾರೆ. ಸದ್ಯ ಅಬ್ದುಲ್ ರೆಹಮಾನ್ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಚುರುಕು ನಡೆಸಿದ್ದಾರೆ.

ಥಣಿಸಂದ್ರ ಸರ್ಕಲ್​ನಲ್ಲಿರುವ ಶ್ರೀದೇವಿ ವೈಭವ್ ಎನ್ನುವ ಹೋಟೆಲ್​ನಲ್ಲಿ ಅಬ್ದುಲ್ ರೆಹಮಾನ್ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿದ್ದ. ಈ ವೇಳೆ ಮಾಲೀಕರು ನಿನ್ನ ಆಧಾರ್ ಕಾರ್ಡ್ ಕೊಡು ಎಂದು ಕೇಳಿದ್ದಾರೆ.‌ ಎರಡು ದಿನವಾದರೂ ಅಬ್ದುಲ್ ರೆಹಮಾನ್ ತನ್ನ ಆಧಾರ್ ಕಾರ್ಡ್ ನೀಡಿರಲಿಲ್ಲ. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಆತನ ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಚೆಂಡಿನಾಕಾರದ ವಸ್ತುಗಳಿದ್ದು, ಅದಕ್ಕೆ ಎರಡು ಬತ್ತಿಗಳು ಹೊಂದಿಕೆಯಾದಂತೆ ಇರುವುದು ಗೊತ್ತಾಗಿದೆ. ಕೂಡಲೇ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಆರೋಪಿ ಹಾಗೂ ಸ್ಪೋಟಕ ವಸ್ತುವನ್ನ ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಸದ್ಯದಲ್ಲೇ ಬ್ರಿಟಿಷ್ ಕಾಲದ ಟೋಪಿಗೆ ನಿವೃತ್ತಿ: ಕರ್ನಾಟಕ ಪೊಲೀಸರ ತಲೆ ಅಲಂಕರಿಸಲಿದೆ ಸ್ಮಾರ್ಟ್​ ಹ್ಯಾಟ್​

ಬಳಿಕ ಬಾಂಬ್ ನಿಷ್ಕ್ರಿಯದಳ ಸುರಕ್ಷಿತ ಸ್ಥಳದಲ್ಲಿ ಸ್ಪೋಟಕ ವಸ್ತುವನ್ನು ಡಿಸ್ಪೋಸ್ ಮಾಡಿ ಅದರ‌ಲ್ಲಿದ್ದ ಕೆಮಿಕಲ್​ ಅನ್ನು ಎಫ್​ಎಸ್​ಎಲ್​ಗೆ ರವಾನಿಸಲಾಗಿದೆ. ಇತ್ತ ಆರೋಪಿಯನ್ನ ಕೋರ್ಟ್​ಗೆ ಹಾಜರುಪಡಿಸಿ ಐದು ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.