AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಕೊಂದು ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ ಗಂಡನಿಗೆ 14 ದಿನ ನ್ಯಾಯಾಂಗ ಬಂಧನ

ಟೆಕ್ಕಿ ರಾಕೇಶ್ ಕಡೇಕರ್ ತನ್ನ ಪತ್ನಿಯನ್ನು ಕೊಂದು, ಶವವನ್ನು ಸೂಟ್‌ಕೇಸ್‌ನಲ್ಲಿಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹುಳಿಮಾವು ಪೊಲೀಸರು ಬೆಂಗಳೂರಿಗೆ ಕರೆತಂದ ಆರೋಪಿಯನ್ನು ಕೋರಮಂಗಲ NGV ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಪತ್ನಿ ಕೊಂದು ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ ಗಂಡನಿಗೆ 14 ದಿನ ನ್ಯಾಯಾಂಗ ಬಂಧನ
ಪತ್ನಿ ಕೊಂದು ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ ಗಂಡನಿಗೆ 14 ದಿನ ನ್ಯಾಯಾಂಗ ಬಂಧ
Shivaprasad B
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 30, 2025 | 12:51 PM

Share

ಬೆಂಗಳೂರು, ಮಾರ್ಚ್ 30: ಪತ್ನಿ (wife) ಕೊಂದು ಶವವನ್ನು ಸೂಟ್​ಕೇಸ್​ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಕೇಶ್ ಕಡೇಕರ್​ಗೆ 14 ದಿನ ನ್ಯಾಯಾಂಗ ಬಂಧನ (Judicial Custody) ನೀಡಿ ಆದೇಶಿಸಲಾಗಿದೆ. ನಿನ್ನೆ ರಾತ್ರಿ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದ ಪೊಲೀಸರು ಇಂದು ಕೋರಮಂಗಲ ಎನ್​​ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರುಪಡಿಸಿದ್ದರು. ಬಳಿಕ ರಾಕೇಶ್​ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದರು. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಕೊಲೆ ಮಾಡಿ ತಂದೆಗೆ ಕರೆಮಾಡಿದ್ದ ರಾಕೇಶ್‌

ಪತ್ನಿಯ ಕೊಲೆ ಮಾಡಿದ ರಾಕೇಶ್‌, ಶವದ ಕಾಲುಗಳನ್ನ ಮುರಿದು ಶವವನ್ನ ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ. ಅದೇ ಬ್ಯಾಗ್‌ನನ್ನ ಎಳೆಯುವಾಗ ಹ್ಯಾಂಡಲ್‌ ಕಟ್ ಆಗಿದೆ. ಹೀಗಾಗಿ ಶವವನ್ನ ಅಲ್ಲೇ ಬಿಟ್ಟು ಕಾರ್‌ನಲ್ಲಿ ಎಸ್ಕೇಪ್ ಆಗಿದ್ದ. ಮಾರ್ಚ್‌ 27ರಂದು ಮಧ್ಯಾಹ್ನ ಗೌರಿ ಅಣ್ಣ ಗಣೇಶ್‌ಗೆ ಕರೆ ಮಾಡಿ, ನಿನ್ನ ತಂಗಿಯನ್ನು ಕೊಂದಿದ್ದೇನೆ, ನಾನು ಸಾಯುತ್ತಿದ್ದೇನೆಂದು ಹೇಳಿದ್ದ. ಅಷ್ಟೇ ಅಲ್ಲದೆ ತನ್ನ ತಂದೆಗೂ ಕರೆಮಾಡಿದ್ದ. ಅವಳು ನನ್ನ ಜೊತೆ ಜಗಳ ಮಾಡುತ್ತಿದ್ದಳು ಅದಕ್ಕೆ ಕೊಲೆ ಮಾಡಿದೆ. ಯುವತಿಯ ತಾಯಿಗೂ ಹೆಂಡತಿ ಕಾಟ ಕೊಡುತ್ತಿದ್ದಾಳೆ ಎಂದು ಹೇಳಿದ್ದ. ಕೊಲೆ ಮಾಡಿ ಮೊದಲನೇ ದಿನ ಏನು ಹೇಳಿದ್ದಿಲ್ಲ. ಕೊಲೆ ಮಾಡಿ ಎರಡನೇ ದಿನ ತಂದೆಗೆ ಕಾಲ್​ಮಾಡಿ ಹತ್ಯೆಯ ವಿಷಯ ತಿಳಿಸಿದ್ದ. ನಂತರ ನಾನು ಸೂಸೈಡ್​ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದ.

ಇದನ್ನೂ ಓದಿ: ಗೌರಿ ಹತ್ಯೆ ಕೇಸ್​: ಹೆಂಡ್ತಿ ಕೊಂದು ಸೂಟ್​ಕೇಸ್​ಗೆ ತುಂಬಿದ್ದೇಕೆ ಪತಿ? ಆ ರಾತ್ರಿ ನಡೆದಿದ್ದೇನು? ಕೊಲೆಗೆ ಕಾರಣ ಬಹಿರಂಗ

ಇದನ್ನೂ ಓದಿ
Image
ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿಟ್ಟ ಆರೋಪಿ ಸಿಕ್ಕಿಬಿದ್ದಿದ್ಹೇಗೆ?
Image
ಮಹಿಳೆ ಮೃತದೇಹದ ಸೂಟ್​​ಕೇಸ್ ಬಾತ್​ ರೂಮ್​​ನಲ್ಲಿ ಪತ್ತೆ!
Image
ಪತ್ನಿಯನ್ನ ತುಂಡರಿಸಿ ಸೂಟ್ ಕೇಸ್​ನಲ್ಲಿ ತುಂಬಿಟ್ಟ ಪತಿ!
Image
ಉದ್ಯಮಿ ಕೊಲೆಗೆ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯೇ ಕತ್ತು ಸೀಳಿ ಹತ್ಯೆ!

ಇನ್ನು ಪ್ರಕರಣ ಸಂಬಂಧ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೆಡೇಕರ್ ಪ್ರತಿಕ್ರಿಯಿಸಿದ್ದು, ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ -ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರಲಿಲ್ಲ. ಮದುವೆ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡ್ಕೊಂಡಿದ್ದರು. ಎರಡು ವರ್ಷದ ಹಿಂದೆ ಪರಿವಾರದ ವಿರೋಧದ ನಡುವೆಯೂ ಮದುವೆ ಆಗಿದ್ದರು. ಗೌರಿ ಯಾವಾಗಲೂ ನನ್ನ ಮಗ ಮತ್ತು ಕುಟುಂಬಸ್ಥರ ಜೊತೆ ಹಲವು ಬಾರಿ ಜಗಳ ಆಡಿದ್ದಳು. ಗಂಡ-ಹಂಡತಿ ಮತ್ತು ಕುಟುಂಬದ ಜಗಳ ಪೊಲೀಸ್ ಠಾಣೆ ಮೇಟ್ಟಿಲೇರಿತ್ತು ಎಂದಿದ್ದಾರೆ.

ರಾಕೇಶ್ ಕೊಲೆ‌ ಮಾಡಿದೀನಿ ಅಂತಾ ಗುರುವಾರ ಮಧ್ಯಾಹ್ನ ನನಗೆ ಕಾಲ್ ಮಾಡಿ ಹೇಳಿದ್ದ. ಅಲ್ಲದೇ ತಾನೂ ಕೂಡ ಆತ್ಮಹತ್ಯೆ ಮಾಡ್ಕೊಳ್ತಿದೀನಿ ಅಂತಾ ಹೇಳಿದ್ದ. ನಿನ್ನ ನಿರ್ಧಾರ ತುಂಬಾ ತೀವ್ರವಾಗಿದೆ ಅಂತಾ ನಾನು ಹೇಳಿದ್ದೆ. ಗೌರಿ ತಾಯಿ ಮತ್ತು ಮುಂಬೈನ ಮೆಗವಾಡಿ ಪೊಲೀಸರಿಗೆ ಘಟನೆ ಬಗ್ಗೆ ಕೂಡಲೇ ತಿಳಿಸಿದ್ದೆ. ನಂತರ ಶಿರವಾಲಾ ಪೊಲೀಸರು ಆತನನ್ನ ಪತ್ತೆ ಹಚ್ಚಿದರು ಎಂದರು.

ಇದನ್ನೂ ಓದಿ: ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿಟ್ಟ ಪ್ರಕರಣ: ಆರೋಪಿ ಸಿಕ್ಕಿಬಿದ್ದಿದ್ಹೇಗೆ? ಬೆಂಗಳೂರು ಪೊಲೀಸರು ಹೇಳಿದ್ದಿಷ್ಟು

ಕರ್ನಾಟಕ ಮಹಾರಾಷ್ಟ್ರ ಬಾರ್ಡರ್​ನಲ್ಲಿ ಜಿರಳೆ ಔಷಧಿ ಕೊಂಡು ಮುಂಬೈ ಕೇಗಲ್ ಸಮೀಪ ಸೇವನೆ ಮಾಡಿದ್ದು, ಬೈಕ್ ಸವಾರನೋರ್ವ ಅಸ್ವಸ್ಥನಾಗಿದ್ದವನ ಕಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.