ಹೆಂಡ್ತಿ ಕೊಂದು ಪ್ಯಾಕ್ ಮಾಡಿಟ್ಟಿದ್ದ ಸೂಟ್ ಕೇಸ್ ಬಾತ್ ರೂಮ್ನಲ್ಲಿ ಪತ್ತೆ, ಪುಣೆಯಲ್ಲಿ ಪತಿ ಅರೆಸ್ಟ್!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹುಳಿಮಾವು ಮನೆಯೊಂದಲ್ಲಿ ದಂಪತಿಗಳ ನಡುವೆ ಆರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡನೇ ಹೆಂಡತಿಯನ್ನು ಕೊಂದು ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ. ಕೃತ್ಯ ಎಸಗಿ ಪರಾರಿಯಾಗಿದ್ದ ಪಾಪಿ ಪತಿ ರಾಕೇಶ್ ಇದೀಗ ಪುಣೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರು, (ಮಾರ್ಚ್ 27): ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಫ್ರಿಡ್ಜ್ ಒಂದರಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಅದನ್ನು ನೋಡಿ ಬರೀ ಬೆಂಗಳೂರಷ್ಟೇ ಅಲ್ಲ, ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಮತ್ತೊಂದು ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಂಡನೊಬ್ಬ ತನ್ನ ಹೆಂಡತಿಯನ್ನು ಕೊಂದು, ಆಕೆ ದೇಹ ತುಂಡರಿಸಿ, ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ. ಹೌದು.. ನಗರದ ಹುಳಿಮಾವು ಮನೆಯೊಂದಲ್ಲಿ ಬಾಡಿಗೆ ಇದ್ದ ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ದಂಪತಿ ನಡುವೆ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ. ಬಳಿಕ ಆಕೆ ದೇಹವನ್ನು ತುಂಡರಿಸಿ ಟ್ರಾಲಿ ಬ್ಯಾಗ್ ತುಂಬಿಟ್ಟು ಪರಾರಿಯಾಗಿದ್ದ ರಾಕೇಶ್ ಪುಣೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ರಾಕೇಶ್ ಹಾಗೂ ಗೌರಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದೆ, ಅದೇನು ಆಗಿದೆಯೋ ಏನೋ ನಿನ್ನೆ(ಮಾರ್ಚ್ 26) ರಾತ್ರಿ ಗೌರಿಯನ್ನು ಕೊಂದು ಬಳಿಕ ಆಕೆ ದೇಹವನ್ನು ತುಂಡರಿಸಿ ಟ್ರಾಲಿ ಬ್ಯಾಗ್ ತುಂಬಿಟ್ಟಿದ್ದಾನೆ. ನಂತರ ಅದೇ ಕಟ್ಟಡದಲ್ಲಿ ನೆಲೆಸಿದ್ದ ಮತ್ತೊಬ್ಬರಿಗೆ ಕರೆ ಪತ್ನಿ ಮೃತಪಟ್ಟಿರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದ. ಆದ್ರೆ, ಇದೀಗ ಆರೋಪಿ ರಾಕೇಶ್ ಪುಣೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನುವ ಮಾತಿ ಲಭ್ಯವಾಗಿದೆ. ಸದ್ಯ ಕೊಲೆಯಾದ ಗೌರಿ ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪತ್ನಿಯನ್ನ ತುಂಡರಿಸಿ ಸೂಟ್ ಕೇಸ್ನಲ್ಲಿ ತುಂಬಿಟ್ಟ ಪತಿ
ಪುಣೆಯಲ್ಲಿ ಸಿಕ್ಕಿಬಿದ್ದ ಆರೋಪಿ ರಾಕೇಶ್
ಹುಳಿಮಾವು ಪೊಲೀಸರು ಸಿಡಿಆರ್ ಆಧರಿಸಿ ಮಹಾರಾಷ್ಟ್ರದ ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಶೋಧಕಾರ್ಯ ನಡೆಸಿದಾಗ ರಾಕೇಶ್ ಪುಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಪುಣೆ ಪೊಲಿಸರ ವಶದಲ್ಲಿರುವ ರಾಕೇಶ್ ನನ್ನು ಬೆಂಗಳೂರಿಗೆ ಕರೆತರಲು ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳುತ್ತಿದ್ದು, ಟ್ರಾನ್ಸಿಟ್ ವಾರಂಟ್ ಮೇಲೆ ಆರೋಪಿಯನ್ನು ಬೆಂಗಳೂರಿಗೆ ಕರೆತರಲಿದ್ದಾರೆ.
ಮಹತ್ವದ ಮಾಹಿತಿ ಬಿಚ್ಚಿಟ್ಟ ಡಿಸಿಪಿ ಸಾರಾ ಫಾತಿಮಾ
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹುಳಿಮಾವು ಪೊಲೀಸರು ಸೇರಿದಂತೆ ಎಸ್ಎಫ್ಎಲ್ ತಂಡ ಸಹ ದೌಡಾಯಿಸಿ ಪರಿಶೀಲನೆ ನಡೆಸಿದೆ. ಇನ್ನು ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಬಳಿಕ ಮಾಧ್ಯಮಗಳಿಗೆ ಪ್ರಕ್ರಿಯಿಸಿದ ಅವರು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಂದು (ಮಾರ್ಚ್ 27) ಸಂಜೆ 5.30ಕ್ಕೆ ನಮ್ಮ ಕಂಟ್ರೋಲ್ ರೂಮ್ಗೆ ಮಾಹಿತಿ ಬಂದಿದೆ. ಮನೆಗೆ ಬಂದು ಪರಿಶೀಲಿಸಿದಾಗ ಬಾತ್ರೂಂನಲ್ಲಿ ಸೂಟ್ ಕೇಸ್ ಪತ್ತೆಯಾಗಿದೆ. ಸೋಕೋ ತಂಡ ಪರಿಶೀಲನೆ ವೇಳೆ ಮಹಿಳೆ ಇಡೀ ದೇಹ ಪತ್ತೆಯಾಗಿದೆ. ಪತಿ ರಾಕೇಶ್ ಖಾಸಗಿ ಕಂಪೆನಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ. ಈಗಾಗಲೇ ಆರೋಪಿಯನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ