ಪಂಜಾಬ್​​ಗೆ ವರ್ಷಕ್ಕೆ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ; ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಬೇಡಿಕೆ ಮುಂದಿಟ್ಟ ಭಗವಂತ್ ಮಾನ್​

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಮಗೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ಬೇಕು. ಈ ದೇಶದ ಶತ್ರುಗಳು ಪಂಜಾಬ್​​ನ ಸುಸ್ಥಿತಿಯನ್ನು ಹಾಳುಗೆಡವಲು ಈಗಾಗಲೇ ಅನೇಕ ಬಾರಿ ಪ್ರಯತ್ನ ಮಾಡಿದ್ದಾರೆ ಎಂದೂ ಪ್ರಧಾನಿ ಮೋದಿಯವರ ಬಳಿ ಹೇಳಿದ್ದಾಗಿ ಭಗವಂತ್​ ಮಾನ್​ ತಿಳಿಸಿದ್ದಾರೆ.

ಪಂಜಾಬ್​​ಗೆ ವರ್ಷಕ್ಕೆ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ; ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಬೇಡಿಕೆ ಮುಂದಿಟ್ಟ ಭಗವಂತ್ ಮಾನ್​
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಪಂಜಾಬ್​ ಸಿಎಂ
Follow us
| Updated By: Lakshmi Hegde

Updated on:Mar 24, 2022 | 5:16 PM

ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann)​ ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿಯಾಗಿದರು. ಅದಾದ ಬಳಿಕ ಅವರು ದೆಹಲಿ ಸಿಎಂ, ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​​ರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಭಗವಂತ್ ಮಾನ್ ಮಾರ್ಚ್​ 16ರಂದು ಪಂಜಾಬ್​ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ರಾಜ್ಯಕ್ಕಿದ್ದ ಉಡ್ತಾ ಪಂಜಾಬ್​ ಹಣೆಪಟ್ಟಿಯನ್ನು ತೊಡೆದು, ಭಡ್ತಾ ಪಂಜಾಬ್ (ಅಭಿವೃದ್ಧಿ) ಮಾಡುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಭ್ರಷ್ಟಾಚಾರ ನಿಯಂತ್ರಣಕ್ಕೆ ಈಗಾಗಲೇ ಹೊಸದಾದ ಕ್ರಮವನ್ನೂ ಕೈಗೊಂಡಿದ್ದಾರೆ. ಪಂಜಾಬ್​ನ 17ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್​ರಿಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದರು, ಕೇಂದ್ರ ಮತ್ತು ಪಂಜಾಬ್ (Punjab) ರಾಜ್ಯ ಸರ್ಕಾರಗಳು ಒಟ್ಟಾಗಿ ರಾಜ್ಯದ ಅಭಿವೃದ್ಧಿ ಮಾಡೋಣ ಎಂದಿದ್ದರು.

ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಮಾತನಾಡಿದ ಭಗವಂತ್ ಮಾನ್​, ರಾಷ್ಟ್ರೀಯ ಭದ್ರತೆ ನಿಭಾಯಿಸುವುದಕ್ಕೆ ನಮಗೆ ಕೇಂದ್ರದ ಬೆಂಬಲದ ಅಗತ್ಯವಿದೆ. ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ಹೇಳಿದ್ದೇನೆ. ಪಂಜಾಬ್​​ನ ಆರ್ಥಿಕ ಸ್ಥಿತಿ ತಳಮಟ್ಟದಲ್ಲಿದ್ದು ಚಿಂತಾಜನಕವೆನಿಸಿದೆ. ಹೀಗಾಗಿ ಇನ್ನೆರಡು ವರ್ಷಗಳ ಕಾಲ ತಲಾ 50 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್​ ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದೇನೆ. ಹಣ ಬಿಡುಗಡೆ ಮಾಡಿದರೆ ನಮ್ಮ ಆರ್ಥಿಕತೆ ಸ್ವಲ್ಪ ಚೇತರಿಕೆ ಕಾಣಬಹುದು ಎಂದ ಮಾನ್​ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಮಗೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ಬೇಕು. ಈ ದೇಶದ ಶತ್ರುಗಳು ಪಂಜಾಬ್​​ನ ಸುಸ್ಥಿತಿಯನ್ನು ಹಾಳುಗೆಡವಲು ಈಗಾಗಲೇ ಅನೇಕ ಬಾರಿ ಪ್ರಯತ್ನ ಮಾಡಿದ್ದಾರೆ. ಆದರೆ ಪಂಜಾಬ್​ನಲ್ಲಿ ಸಾಮಾಜಿಕ ಸಔಹಾರ್ದತೆ, ಬಾಂಧವ್ಯ ಬಲಿಷ್ಠವಾಗಿದೆ. ಅಲ್ಲಿಯ ಜನರು ಶಾಂತಿಯನ್ನು ಬಯಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಳಿ ಹೇಳಿದ್ದಾಗಿ ಭಗವಂತ್ ಮಾನ್​ ತಿಳಿಸಿದ್ದಾರೆ.  ನಾನು ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆಯೂ ಮನವರಿಕೆ ಮಾಡಿಸಿದ್ದೇನೆ. ಅವರು ಈ ವಿಚಾರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಳಿ ಮಾತನಾಡುತ್ತಾರೆ ಎಂಬ ಆಶಯವಿದೆ. ಹಾಗೇ, ಎಲ್ಲ ವಿಚಾರಗಳಲ್ಲೂ ಸಹಕಾರ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ಕೊಟ್ಟಿದ್ದಾರೆ ಎಂದೂ ತಿಳಿಸಿದ್ದಾರೆ.

ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್​​ಗೆ ಪ್ರಧಾನಿ ಮೋದಿ ಅಭಿನಂದನೆ; ಬಿರೆನ್​​ ಸಿಂಗ್​​, ಪ್ರಮೋದ್​ ಸಾವಂತ್​ಗೂ ಶುಭ ಹಾರೈಕೆ

Published On - 5:15 pm, Thu, 24 March 22