ದೆಹಲಿ: ಪಂಜಾಬ್ ಕಾಂಗ್ರೆಸ್ (Punjab Congress)ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಶುಕ್ರವಾರ ಮಾಧ್ಯಮಗಳೊಂದಿಗೆ ಸಂವಾದದ ವೇಳೆ ಕೆಟ್ಟ ಪದ ಬಳಸಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ. ಚಂಡೀಗಢದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದಿಂದ ಲೇಬರ್ ಕಾರ್ಡ್‌ಗಳ ವಿತರಣೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಧು ಕೆಟ್ಟ ಪದ ಬಳಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಿಧು ಮುಜುಗರಕ್ಕೊಳಗಾಗಿದ್ದಾರೆ. ಇದು ಯಾರೊಂದಿಗಾದರೂ ಆಗಬಹುದು ಎಂದು ಕೆಲವರು ಪ್ರತಿಕ್ರಿಯಿಸಿದ್ದು, ಸಾರ್ವಜನಿಕವಾಗಿ ಈ ರೀತಿ ವರ್ತಿಸಿದ್ದಕ್ಕೆ ಟೀಕಿಸಿದ್ದಾರೆ.
#WATCH | During a press conference in Chandigarh, Punjab Congress president Navjot Singh Sidhu answers a question on the distribution of Labour Cards by the State Government; uses a cuss word while speaking.
(Note: Abusive language) pic.twitter.com/3ErwNP4pGU
— ANI (@ANI) December 17, 2021
ನೆಟ್ಟಿಗರ ಪ್ರತಿಕ್ರಿಯೆ
ನಾನು ಅವರನ್ನು ವಿಶೇಷವಾಗಿ ದೂಷಿಸುವುದಿಲ್ಲ. ಇದು ಪಂಜಾಬಿ ವಿಷಯ ಮತ್ತು ಉತ್ತರ ಭಾರತದಲ್ಲಿ ಪ್ರಚಲಿತವಾಗಿದೆ. ಆದರೆ, ಅವರು ಈ ರೀತಿ ಹೇಳುವ ಮೊದಲು ಸ್ವಲ್ಪ ಯೋಚಿಸಬಹುದಿತ್ತು. ನಮ್ಮಲ್ಲಿ ಹೆಚ್ಚಿನವರಿಗೆ ಸಂಭವಿಸುತ್ತದೆ ಎಂದು ಆಯುಷ್ ಎಂಬ ಟ್ವೀಟಿ ಗ ಪ್ರತಿಕ್ರಿಯಿಸಿದ್ದಾರೆ.
Hahahaha I don’t particularly blame him. Its a punjabi thing and also prevalent in North India. But, he could’ve thought for a while before getting into the flow. Happens with most of us. Certainly reminds me of @sushantsareen
— Aayush (@aayushhh95) December 17, 2021
ನಾವು ಚಲನಚಿತ್ರಗಳಲ್ಲಿ MC BC ಅನ್ನು ಬಳಸುವಾಗ ಸೆನ್ಸಾರ್ ಮಂಡಳಿಯು ಅವುಗಳನ್ನು ಮ್ಯೂಟ್ ಮಾಡಲು ಅಥವಾ A ಪ್ರಮಾಣೀಕರಣವನ್ನು ತೆಗೆದುಕೊಳ್ಳಲು ಬಯಸುತ್ತದೆ. ಮತ್ತೊಂದೆಡೆ ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಿಂದ ಎಡ ಬಲ ಮತ್ತು ಮಧ್ಯದಿಂದ ಎಂಸಿ ಬಿಸಿ ಎಂದು ಹೇಳುತ್ತಿದ್ದಾರೆ ಎಂದು ದೂಪ್ ಅಶ್ವಿನಿ ಎಂಬವರು ಪ್ರತಿಕ್ರಿಯಿಸಿದ್ದಾರೆ.
When we use MC BC in films censor board want us to mute them or take an A certification. On the other hand politicians are throwing MC BC Chu*** from public platforms left right and centre. https://t.co/hr1Ne5JLVZ
— DHOOPASHWINI (@DhoopAshwini) December 17, 2021
ಸ್ವಲ್ಪ ಹಿಂದೆ ಕರ್ನಾಟಕ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅತ್ಯಾಚಾರವನ್ನು ವೈಭವೀಕರಿಸುತ್ತಿದ್ದರು ಮತ್ತು ಇಲ್ಲಿ ಈ ವ್ಯಕ್ತಿ ಅವಾಚ್ಯ ಪದ ಬಳಸಿದ್ದಾರೆ. ಕಾಂಗ್ರೆಸ್ಗೆ ನಾಚಿಕೆಗೇಡು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
Earlier it was Congress MLA #RameshKumar in the #KarnatakaAssembly glorifying rape and here this guy uses a cuss word. Shameful for #Congress https://t.co/Mh9O4bq6HX
— The_Nationalist (@Nationalist_04) December 17, 2021
ಇದನ್ನೂ ಓದಿ: ಶಾಸಕ ರಮೇಶ್ ಕುಮಾರ್ ಹೇಳಿಕೆಯಿಂದ ಮುಜುಗರಕ್ಕೀಡಾದ ಕಾಂಗ್ರೆಸ್; ಪಕ್ಷದ ನಾಯಕರಿಂದಲೂ ಖಂಡನೆ