AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್ ವಿಧಾನಸಭಾ ಚುನಾವಣೆ: ಬಿಜೆಪಿ ಜತೆ ಮೃತ್ರಿಗೆ ಕ್ಯಾ. ಅಮರಿಂದರ್ ಸಿಂಗ್ ನಿರ್ಧಾರ

ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಿರ್ಧಾರ ಮಾಡಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಅಮರೀಂದರ್ ಸಿಂಗ್ ನೇತೃತ್ವದ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ.

ಪಂಜಾಬ್ ವಿಧಾನಸಭಾ ಚುನಾವಣೆ: ಬಿಜೆಪಿ ಜತೆ ಮೃತ್ರಿಗೆ ಕ್ಯಾ. ಅಮರಿಂದರ್ ಸಿಂಗ್ ನಿರ್ಧಾರ
ಅಮರಿಂದರ್ ಸಿಂಗ್​
TV9 Web
| Updated By: ganapathi bhat|

Updated on:Dec 17, 2021 | 6:28 PM

Share

ದೆಹಲಿ: ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh) ನಿರ್ಧಾರ ಮಾಡಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ (Punjab election) ಬಿಜೆಪಿ ಜತೆ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್‌ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ. ಪಂಜಾಬ್ ಲೋಕ ಕಾಂಗ್ರೆಸ್‌ (Punjab Lok Congress) ಪಕ್ಷದ ಸ್ಥಾಪಕ ಅಮರಿಂದರ್ ಸಿಂಗ್ ಈ ಬಗ್ಗೆ ತಿಳಿಸಿದ್ದಾರೆ.

ಅಮರಿಂದರ್ ಸಿಂಗ್ ನೇತೃತ್ವದ ಪಕ್ಷ ಬಿಜೆಪಿ ಜತೆ ಮೃತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪಂಜಾಬ್ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್ ಖಚಿತಪಡಿಸಿದ್ದಾರೆ. ಭೇಟಿ ಬಳಿಕ ಅಮರಿಂದರ್ ಸಿಂಗ್ ಕೂಡ ಟ್ವೀಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಸೀಟು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಗೆಲುವು ಸಾಧಿಸುವ ಸಾಧ್ಯತೆ ಗಮನದಲ್ಲಿ ಇಟ್ಟುಕೊಂಡು ಸೀಟು ಹಂಚಿಕೆ ಮಾಡಲಾಗುವುದು. ನಾವು ಈ ಚುನಾವಣೆಗೆ ತಯಾರಾಗಿದ್ದೇವೆ ಹಾಗೂ ಈ ಚುನಾವಣೆಯನ್ನು ನಾವು ಗೆಲ್ಲುತ್ತೇವೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.  ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಮೊದಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ನೂತನ ಪಕ್ಷ ಸ್ಥಾಪಿಸಿದ್ದರು.

ಮುಖ್ಯಮಂತ್ರಿ ಆಯ್ಕೆಯನ್ನು ಎಲ್ಲ ಮೈತ್ರಿ ಪಕ್ಷಗಳು ನಿರ್ಧರಿಸುತ್ತವೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮ ಐದು ದಶಕಗಳ ಪಕ್ಷವಾದ ಕಾಂಗ್ರೆಸ್‌ನಿಂದ ಹೊರಬಂದು ಒಂದು ತಿಂಗಳ ನಂತರ ಚಂಡೀಗಡದಲ್ಲಿ ತಮ್ಮ ಹೊಸ ಪಕ್ಷದ ಕಚೇರಿಯನ್ನು ತೆರೆದಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮರಿಂದರ್ ಸಿಂಗ್, ತಮ್ಮ ಪಂಜಾಬ್ ಲೋಕ್ ಕಾಂಗ್ರೆಸ್ ಬಿಜೆಪಿಯ ಸಹಭಾಗಿತ್ವದಲ್ಲಿ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಮತ್ತು ಶೀಘ್ರದಲ್ಲೇ ಮೈತ್ರಿ ಘೋಷಿಸಲಾಗುವುದು ಎಂದು ಹೇಳಿದ್ದರು.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಗೆ ಸೀಟು ಹಂಚಿಕೆ ಕುರಿತು ಮಾತುಕತೆಗಳನ್ನು ವಿವರಿಸಲು ಅವರು ನಿರಾಕರಿಸಿದ್ದರು. “ನಮ್ಮ ಪಕ್ಷ, ಸುಖದೇವ್ ದಿಂಡ್ಸಾ ಅವರ ಪಕ್ಷ ಮತ್ತು ಬಿಜೆಪಿ ಸೀಟು ಹಂಚಿಕೆಯ ವ್ಯವಸ್ಥೆಯನ್ನು ಹೊಂದಿರುತ್ತದೆ. ನಾನು ನಿಮಗೆ ನಿಖರವಾದ ಸಂಖ್ಯೆಯನ್ನು ಹೇಳಲಾರೆ” ಎಂದು ಕ್ಯಾಪ್ಟನ್ ಹೇಳಿದ್ದರು. “ನಾವು ತಾತ್ವಿಕ ಮೈತ್ರಿಯನ್ನು ಹೊಂದಿದ್ದೇವೆ”. ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಆಯ್ಕೆಯನ್ನು ಎಲ್ಲ ಮೈತ್ರಿ ಪಕ್ಷಗಳು ನಿರ್ಧರಿಸುತ್ತವೆ ಎಂದಿದ್ದರು.

ಇದನ್ನೂ ಓದಿ: ಬಿಜೆಪಿಯೊಂದಿಗೆ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧೆ, ಶೀಘ್ರದಲ್ಲೇ ಮೈತ್ರಿ ಘೋಷಣೆ: ಅಮರಿಂದರ್ ಸಿಂಗ್

ಇದನ್ನೂ ಓದಿ: ಪಟಿಯಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘೋಷಣೆ

Published On - 5:15 pm, Fri, 17 December 21