AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Omicron  ದೆಹಲಿಯಲ್ಲಿ ಒಮಿಕ್ರಾನ್ ರೂಪಾಂತರಿಯ 10 ಹೊಸ ಪ್ರಕರಣ ಪತ್ತೆ

ಈ ತಿಂಗಳ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರ ನಗರದಲ್ಲಿ ಕೊರೊನಾವೈರಸ್​​ನ ಒಮಿಕ್ರಾನ್ ರೂಪಾಂತರಕ್ಕೆ ತುತ್ತಾದ ಜಿಂಬಾಬ್ವೆ ಮೂಲದ ಎನ್‌ಆರ್‌ಐ ವ್ಯಕ್ತಿ, ಅವರ ಪತ್ನಿ ಮತ್ತು ಸೋದರ ಮಾವ ಈಗ ಚೇತರಿಸಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Omicron  ದೆಹಲಿಯಲ್ಲಿ ಒಮಿಕ್ರಾನ್ ರೂಪಾಂತರಿಯ 10 ಹೊಸ ಪ್ರಕರಣ ಪತ್ತೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 17, 2021 | 3:50 PM

Share

ದೆಹಲಿ: 10 ಹೊಸ ಒಮಿಕ್ರಾನ್ (Omicron) ಪ್ರಕರಣಗಳು ದಾಖಲಾಗಿದ್ದು, ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 20 ಕ್ಕೆ ತಲುಪಿದೆ. ಈ ಪೈಕಿ 10 ಮಂದಿ ಚೇತರಿಸಿಕೊಂಡಿದ್ದಾರೆ  ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendar Jain) ಹೇಳಿದ್ದಾರೆ. ಭಾರತವು 7,447 ಹೊಸ ಕೊರೊನಾವೈರಸ್ (Coronavirus) ಸೋಂಕು ಪ್ರಕರಣ ದಾಖಲಿಸಿದ್ದು, ಒಟ್ಟು ಕೊವಿಡ್ -19  (Covid-19) ಪ್ರಕರಣಗಳ ಸಂಖ್ಯೆಯನ್ನು 3,47,26,049 ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು 86,415 ಕ್ಕೆ ಇಳಿದಿದೆ ಎಂದು ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ 391 ಸಾವುಗಳೊಂದಿಗೆ ಸಾವಿನ ಸಂಖ್ಯೆ 4,76,869 ಕ್ಕೆ ಏರಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್-19 ಪ್ರಕರಣಗಳಲ್ಲಿ 830 ಪ್ರಕರಣಗಳ ಇಳಿಕೆ ದಾಖಲಾಗಿದೆ.  ಇಂದು ಮುಂಜಾನೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ ನಾಲ್ಕು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 10 ಕ್ಕೆ ತಲುಪಿದೆ ಎಂದು ಹೇಳಿದ್ದಾರೆ. ಪ್ರಸ್ತುತ 40 ಶಂಕಿತ ಪ್ರಕರಣಗಳಿದ್ದು, ಅವರನ್ನು ಲೋಕನಾಯಕ್‌ ಆಸ್ಪತ್ರೆಗೆ ದಾಖಲಿಸಲಾಗಿದ, ಅವರಲ್ಲಿ 38 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. “ಯಾವುದೇ ಪ್ರಕರಣಗಳು ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ಪ್ರದರ್ಶಿಸಿಲ್ಲ” ಎಂದು ಅವರು ಹೇಳಿದರು.

ಜಾಮ್‌ನಗರದ ಮೂವರು ಒಮಿಕ್ರಾನ್ ರೋಗಿಗಳು ಚೇತರಿಕೆ ಈ ತಿಂಗಳ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರ ನಗರದಲ್ಲಿ ಕೊರೊನಾವೈರಸ್​​ನ ಒಮಿಕ್ರಾನ್ ರೂಪಾಂತರಕ್ಕೆ ತುತ್ತಾದ ಜಿಂಬಾಬ್ವೆ ಮೂಲದ ಎನ್‌ಆರ್‌ಐ ವ್ಯಕ್ತಿ, ಅವರ ಪತ್ನಿ ಮತ್ತು ಸೋದರ ಮಾವ ಈಗ ಚೇತರಿಸಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.  ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮೂವರು ಒಮಿಕ್ರಾನ್ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಕೊವಿಡ್ ಪರೀಕ್ಷೆಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ, ನಂತರ ಮೂವರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಒಮಿಕ್ರಾನ್ ವಾರ್ಡ್ ಈಗ ಖಾಲಿಯಾಗಿದೆ” ಎಂದು ಜಾಮ್‌ನಗರ ನಗರದ ಸರ್ಕಾರಿ ಜಿಜಿ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ ಸೌಗತ ಚಟರ್ಜಿ ಹೇಳಿದ್ದಾರೆ.

ಯುಕೆಯಿಂದ ಗೋವಾಕ್ಕೆ ಬಂದ ಮೂವರು ಪ್ರಯಾಣಿಕರಿಗೆ ಕೊವಿಡ್ ಶುಕ್ರವಾರ ಬೆಳಗ್ಗೆ ಯುನೈಟೆಡ್ ಕಿಂಗ್‌ಡಮ್‌ನಿಂದ ಗೋವಾಕ್ಕೆ ಆಗಮಿಸಿದ ಮೂವರು ಪ್ರಯಾಣಿಕರು ಕೊರೊನಾವೈರಸ್ ಗೆ ಧನಾತ್ಮಕ ಪರೀಕ್ಷೆ ನಡೆಸಿದರು. ಅವರು ಒಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ತಿಳಿಯಲು ಅವರ ಮಾದರಿಗಳನ್ನು ಜಿನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ರಾಜ್ಯ ಸಚಿವರು ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಇಂದು ಬೆಳಗ್ಗೆ ಯುಕೆಯಿಂದ ಆಗಮಿಸಿದ ವಿಮಾನದಿಂದ ಮೂವರು ರೋಗಿಗಳು ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ, ವರದಿಗಳಿಗಾಗಿ ಕಾಯಲಾಗುತ್ತಿದೆ” ಎಂದು ಹೇಳಿದ್ದಾರೆ. ಈ ಮೂವರು ಪ್ರಯಾಣಿಕರು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ 101 ನೇ ವಿಮಾನದಲ್ಲಿ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಗೋವಾ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  Joe Biden: ಲಸಿಕೆ ಪಡೆಯದವರಿಗೆ ‘ಸಾವಿನ ಚಳಿಗಾಲ’ ಮುಂದಿದೆ; ಒಮಿಕ್ರಾನ್ ಕುರಿತು ಅಮೇರಿಕಾ ಅಧ್ಯಕ್ಷ ಬಿಡೆನ್ ಹೇಳಿಕೆ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ