ಶಾಸಕ ರಮೇಶ್ ಕುಮಾರ್ ಹೇಳಿಕೆಯಿಂದ ಮುಜುಗರಕ್ಕೀಡಾದ ಕಾಂಗ್ರೆಸ್; ಪಕ್ಷದ ನಾಯಕರಿಂದಲೂ ಖಂಡನೆ
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ಸದನದಲ್ಲಿ ಹಿರಿಯ ಕಾಂಗ್ರೆಸ್ ಶಾಸಕರ ನಡುವೆ ಹೆಚ್ಚು ಆಕ್ಷೇಪಾರ್ಹ ಮತ್ತು ಸಂವೇದನಾರಹಿತ ಮಾತುಗಳನ್ನುಕಾಂಗ್ರೆಸ್ ಪಕ್ಷವು ಒಪ್ಪುವುದಿಲ್ಲ. ಸ್ಪೀಕರ್ ಮತ್ತು ಹಿರಿಯ ಶಾಸಕರು ರೋಲ್ ಮಾಡೆಲ್ ಆಗಿರಬೇಕು.
ದೆಹಲಿ: ಕರ್ನಾಟಕ ಕಾಂಗ್ರೆಸ್ ನಾಯಕ ಕೆ.ಆರ್.ರಮೇಶ್ ಕುಮಾರ್ (KR Ramesh Kumar) ಅತ್ಯಾಚಾರವನ್ನು ಆನಂದಿಸಿ ( Rape Remark)ಎಂದು ಹೇಳಿರುವುದಕ್ಕೆ ದೆಹಲಿಯಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ವಿಧಾನಸಭೆ ಹಾಗೂ ಟ್ವಿಟರ್ನಲ್ಲಿ ಕ್ಷಮೆ ಯಾಚಿಸಿರುವ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಪಕ್ಷದ ನಾಯಕರೂ ವಾಗ್ದಾಳಿ ಮಾಡಿದ್ದಾರೆ. ಕರ್ನಾಟಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri)ಅವರನ್ನೂ ಕಾಂಗ್ರೆಸ್ ಖಂಡಿಸಿದ್ದು ತ್ಯಂತ ಆಕ್ಷೇಪಾರ್ಹ ಮತ್ತು ಸಂವೇದನಾಶೀಲವಲ್ಲದ ತಮಾಷೆ ಎಂದು ಹೇಳಿದೆ. “ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ಸದನದಲ್ಲಿ ಹಿರಿಯ ಕಾಂಗ್ರೆಸ್ ಶಾಸಕರ ನಡುವೆ ಹೆಚ್ಚು ಆಕ್ಷೇಪಾರ್ಹ ಮತ್ತು ಸಂವೇದನಾರಹಿತ ಮಾತುಗಳನ್ನುಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಸ್ಪೀಕರ್ ಮತ್ತು ಹಿರಿಯ ಶಾಸಕರು ರೋಲ್ ಮಾಡೆಲ್ ಆಗಿರಬೇಕು, ಅಂತಹ ಸ್ವೀಕಾರಾರ್ಹವಲ್ಲದ ನಡವಳಿಕೆಯಿಂದ ದೂರವಿರಬೇಕು” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ನಾನು ಈ ಹೇಳಿಕೆಯನ್ನು ಅನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರು ಸ್ಪೀಕರ್ ಮತ್ತು ಸಚಿವರಾಗಿದ್ದವರು. ನನಗೆ ಇದು ಇಷ್ಟವಾಗಲಿಲ್ಲ. ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.ಆದರೆ ಅಂತಹ ಭಾಷೆ ಖಂಡನೀಯವಾಗಿದೆ. ನಾವು ಮಹಿಳೆಯರನ್ನು ಗೌರವಿಸುತ್ತೇವೆ. ಸ್ಪೀಕರ್ ಈ ಹೇಳಿಕೆಗೆ ನಗುತ್ತಿದ್ದರು, ನಾವು ಅದನ್ನೂ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ನಿನ್ನೆ ಕರ್ನಾಟಕ ವಿಧಾನಸಭೆಯಲ್ಲಿ ರೈತರ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ಶಾಸಕರು ಈ ಹೇಳಿಕೆ ನೀಡಿದ್ದಾರೆ. ಎಲ್ಲರಿಗೂ ಮಾತನಾಡಲು ಸಮಯ ನೀಡಿದರೆ ಅಧಿವೇಶನ ನಡೆಸುವುದು ಹೇಗೆ ಎಂದು ಸಭಾಧ್ಯಕ್ಷರು ಕೇಳಿದ್ದರು. “ನೀವು ಏನು ನಿರ್ಧರಿಸಿದರೂ – ನಾನು ಹೌದು ಎಂದು ಹೇಳುತ್ತೇನೆ. ಪರಿಸ್ಥಿತಿಯನ್ನು ಆನಂದಿಸೋಣ ಎಂದು ನಾನು ಅಂದುಕೊಂಡಿದ್ದೇನೆ ನಾನು ವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನನ್ನ ಕಾಳಜಿಯು ಕಲಾಪದ ಬಗ್ಗೆ, ಅದನ್ನೂ ನಡೆಸಬೇಕು ಎಂದು ಕಾಗೇರಿ ಹೇಳಿದ್ದರು.
#WATCH| “…There’s a saying: When rape is inevitable, lie down&enjoy,” ex Karnataka Assembly Speaker & Congress MLA Ramesh Kumar said when Speaker Kageri, in response to MLAs request for extending question hour, said he couldn’t& legislators should ‘enjoy the situation’ (16.12) pic.twitter.com/hD1kRlUk0T
— ANI (@ANI) December 17, 2021
‘ದೆರ್ ಈಸ್ ಎ ಸೇಯಿಂಗ್, ವೆನ್ ರೇಪ್ ಈಸ್ ಇನೆವಿಟೆಬಲ್ ಲೆಟ್ ಲೇಡೌನ್ ಅಂಡ್ ಎಂಜಾಯ್ ( ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಪ್ರತಿಕ್ರಿಯಿಸಿದರು. ಹೀಗೆ ಹೇಳುವಾಗ ಕಾಗೇರಿ ನಗುತ್ತಾ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ರಮೇಶ್ ಕುಮಾರ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅವರು, ವಿವಾದಾತ್ಮಕವಾಗಿ ತಮ್ಮ ಹೇಳಿಕೆಯನ್ನು “ಆಫ್-ದಿ-ಕಫ್” ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ. ಇಂದು ಬೆಳಿಗ್ಗೆ ಕರ್ನಾಟಕ ವಿಧಾನಸಭೆಯಲ್ಲಿ ಶಾಸಕಿಯರ ಪ್ರತಿಭಟನೆಯ ನಡುವೆ ಕ್ಷಮೆಯಾಚಿಸಿದ ಶಾಸಕರು ಮಹಿಳೆಯರ ಭಾವನೆಗಳಿಗೆ ನೋವುಂಟುಮಾಡಿದರೆ, ಕ್ಷಮೆಯಾಚಿಸಲು ನನಗೆಯಾವುದೇ ಸಮಸ್ಯೆ ಇಲ್ಲ, ನಾನು ನನ್ನ ಹೃದಯದಿಂದ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಆಗ ಸ್ಪೀಕರ್”ಅವರು ಕ್ಷಮೆಯಾಚಿಸಿದ್ದಾರೆ, ಅದನ್ನು ಮತ್ತಷ್ಟು ಎಳೆಯಬೇಡಿ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸಂಸತ್ನ ಚಳಿಗಾಲದ ಅಧಿವೇಶನದ ಹೊತ್ತಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಈ ರೀತಿ ಹೇಳಿಕೆಗಳು ನಾಚಿಕೆಗೇಡು ಎಂದಿದ್ದಾರೆ. ನಾನೇನು ಹೇಳಲಿ? ಅಂತಹ ಮನಸ್ಥಿತಿಯ ಜನರು ವಿಧಾನಸಭೆ ಅಥವಾ ಸಂಸತ್ ನಲ್ಲಿ ಇರಬಹುದೆಂದು ಯೋಚಿಸಲು ನಾಚಿಕೆಪಡುತ್ತೇನೆ. ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಗೊತ್ತಿಲ್ಲ. ಅವರ ಪಕ್ಷ ಕಠಿಣ ಕ್ರಮ ಕೈಗೊಳ್ಳಬೇಕು. ನಾನು ಮೂಕಳಾಗಿದ್ದೇನೆ. ಅವರ ಮನೆಯಲ್ಲಿ ಹೆಂಗಸರಿಲ್ಲವೇ? ಇದು ಚಿಂತನೆಯ ಮೂಲ ದೋಷದ ಪರಿಣಾಮ ಎಂದಿದ್ದಾರೆ.
ಲೋಕಸಭೆಯಲ್ಲೂ ರಮೇಶ್ ಕುಮಾರ್ ಹೇಳಿಕೆ ಪ್ರಸ್ತಾಪ
It is extremely shameful that inside Vidhan Sabha, a Congress leader has given a shameful statement about women that ‘one should enjoy while a woman gets raped’: Smriti Irani, Minister of Women and Child Development on Karnataka Congress MLA KR Ramesh Kumar’s ‘rape’ remark pic.twitter.com/NlWCx7FHfv
— ANI (@ANI) December 17, 2021
ವಿಧಾನಸೌಧದೊಳಗೆ ಕಾಂಗ್ರೆಸ್ ನಾಯಕರೊಬ್ಬರು ಮಹಿಳೆಯರ ಬಗ್ಗೆ ನಾಚಿಕೆಗೇಡಿನ ಹೇಳಿಕೆ ನೀಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಮೊದಲು ಮತ್ತು ಉತ್ತರ ಪ್ರದೇಶದಲ್ಲಿ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಎಂಬ ಘೋಷಣೆಗಳನ್ನು ಎತ್ತುವ ಮೊದಲು ಕಾಂಗ್ರೆಸ್ ಮೊದಲು ತಮ್ಮ ನಾಯಕನನ್ನು ಅಮಾನತುಗೊಳಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನನಗೆ 8 ಜನ ಹೆಣ್ಣುಮಕ್ಕಳು ಇದ್ದಾರೆ ಎಂದು ರಮೇಶ್ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಇಬ್ರಾಹಿಂ
Published On - 2:36 pm, Fri, 17 December 21