AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಯು ಮಾಲಿನ್ಯ: ಹಂತ ಹಂತವಾಗಿ ದೆಹಲಿ-ಎನ್‌ಸಿಆರ್ ಶಾಲೆಗಳ ಪುನಾರಂಭಕ್ಕೆ ಅನುಮತಿ

ದೆಹಲಿಯ ಶಾಲೆಗಳಲ್ಲಿ 6 ನೇ ತರಗತಿ ಶನಿವಾರದಿಂದ (ಡಿಸೆಂಬರ್ 18) ಪುನರಾರಂಭಗೊಳ್ಳಲಿವೆ. 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳು ಡಿಸೆಂಬರ್ 27 ರಿಂದ ಪ್ರಾರಂಭವಾಗಲಿದೆ. 

ವಾಯು ಮಾಲಿನ್ಯ: ಹಂತ ಹಂತವಾಗಿ ದೆಹಲಿ-ಎನ್‌ಸಿಆರ್ ಶಾಲೆಗಳ ಪುನಾರಂಭಕ್ಕೆ ಅನುಮತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 17, 2021 | 6:48 PM

ದೆಹಲಿ: ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು(Air Quality Management) ದೆಹಲಿ-ಎನ್‌ಸಿಆರ್‌ನಲ್ಲಿ ಹಂತಹಂತವಾಗಿ ಶಾಲೆಗಳನ್ನು ಪುನರಾರಂಭಿಸಲು ಅನುಮತಿ ನೀಡಿದೆ. ಮಾಲಿನ್ಯದ ವಿರುದ್ಧದ ತನ್ನ ಕ್ರಮದ ಕುರಿತು ಆಯೋಗವು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಒಂದು ದಿನದ ನಂತರ ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಸುಪ್ರೀಂಕೋರ್ಟ್ (Supreme Court) ಪರಿಸ್ಥಿತಿಯನ್ನು ತುರ್ತು ಪರಿಸ್ಥಿತಿ ಎಂದು ಹೇಳಿದ್ದು, ಮಾಲಿನ್ಯದ ಮಟ್ಟವು ಕ್ರಮೇಣ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ ವಾರದಿಂದ ಆಯೋಗವು ಹಲವಾರು ನಿರ್ಬಂಧಗಳನ್ನು ಹಾಕಿದೆ. “ವಿವಿಧ ಯೋಜನಾ ಪ್ರತಿಪಾದಕರು ಮತ್ತು ಕಟ್ಟಡ ಮತ್ತು ನಿರ್ಮಾಣ / ಕೆಡವುವ ವಲಯದ ಸಂಘಗಳು, ಶಾಲೆಗಳು / ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಡಿಸಲಾದ ಪ್ರಾತಿನಿಧ್ಯಗಳು ಆಯೋಗದ ಸಕ್ರಿಯ ಪರೀಕ್ಷೆ ಮತ್ತು ಪರಿಗಣನೆಯಲ್ಲಿವೆ. ಇವುಗಳ ಡಿಸೆಂಬರ್ 17 ರ ಮೊದಲು, ಮೇಲೆ ನೀಡಲಾದ ಸಡಿಲಿಕೆಗಳ ಪ್ರಭಾವದ ಆಧಾರದ ಮೇಲೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಕ್ಯುಎಂ (CAQM) ಹೇಳಿದೆ.

ಮಾಲಿನ್ಯದ ಕಾರಣದಿಂದ ದೆಹಲಿಯ ಶಾಲೆಗಳಲ್ಲಿ ದೈಹಿಕ ತರಗತಿಗಳನ್ನು ನವೆಂಬರ್‌ನಲ್ಲಿ ಬಹುತೇಕ ಅವಧಿಗೆ ಸ್ಥಗಿತಗೊಳಿಸಲಾಗಿತ್ತು. ದೆಹಲಿ ಸರ್ಕಾರವು ನವೆಂಬರ್ 29 ರಿಂದ ತರಗತಿಗಳನ್ನು ಪುನರಾರಂಭಿಸಲು ನಿರ್ಧರಿಸಿದ ನಂತರ, ಸರ್ಕಾರವು ಕಚೇರಿಗೆ ಹೋಗುವವರಿಗೆ ಮನೆಯಿಂದ ಕೆಲಸ ಮಾಡಲು ಅನುಮತಿಸಿದರೆ, ಮಾಲಿನ್ಯದ ಅಪಾಯಗಳಿಗೆ ಮಕ್ಕಳನ್ನು ಒಡ್ಡುವ ಶಾಲೆಗಳನ್ನು ಪುನಃ ತೆರೆಯಿತು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡ ನಂತರ, ದೆಹಲಿ ಸರ್ಕಾರವು ಡಿಸೆಂಬರ್ 2 ರಂದು ಮತ್ತೆ ತರಗತಿಗಳನ್ನು ನಿಲ್ಲಿಸಿತ್ತು. ಆಯೋಗವು ಆದೇಶವನ್ನು ವಿಸ್ತರಿಸಿತು ಮತ್ತು ಎನ್‌ಸಿಆರ್‌ನ ಎಲ್ಲಾ ಶಾಲೆಗಳನ್ನು ತರಗತಿಗಳನ್ನು ಅಮಾನತುಗೊಳಿಸುವಂತೆ ಕೇಳಿತು. ಆದಾಗ್ಯೂ, ಶಾಲೆಗಳನ್ನು ಮುಚ್ಚುವಂತೆ ಹೇಳಲಿಲ್ಲ, ಶಾಲೆಗಳನ್ನು ಪುನಃ ತೆರೆಯಲು ಸಮರ್ಥನೆಯನ್ನು ಕೇಳಿರುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು .

ನಾಳೆಯಿಂದ 6ನೇ ತರಗತಿ  ಆರಂಭ ದೆಹಲಿಯ ಶಾಲೆಗಳು 6 ನೇ ತರಗತಿ ಶನಿವಾರದಿಂದ (ಡಿಸೆಂಬರ್ 18) ಪುನರಾರಂಭಗೊಳ್ಳಲಿವೆ. 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳು ಡಿಸೆಂಬರ್ 27 ರಿಂದ ಪ್ರಾರಂಭವಾಗಲಿದೆ. ದೇಶದ ರಾಜಧಾನಿ ಪ್ರದೇಶದಲ್ಲಿ ಹಂತ ಹಂತವಾಗಿ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮರು-ತೆರೆಯಲು ಎನ್‌ಸಿಆರ್ ಮತ್ತು ಜಿಎನ್‌ಸಿಟಿಡಿಯ ರಾಜ್ಯ ಸರ್ಕಾರಗಳಿಗೆ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗ (ಸಿಎಕ್ಯೂಎಂ) ಅನುಮತಿ ನೀಡಿದೆ. “ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ ಮಾನ್ಯತೆ ಪಡೆದ, ಎನ್‌ಡಿಎಂಸಿ, ಎಂಸಿಡಿಗಳು ಮತ್ತು ದೆಹಲಿ ಕಂಟೋನ್ಮೆಂಟ್ ಬೋರ್ಡ್ ಶಾಲೆಗಳು 6 ನೇ ತರಗತಿಗಳಿಗೆ ಡಿಸೆಂಬರ್ 18 ರಿಂದ ಪುನರಾರಂಭಗೊಳ್ಳಲಿವೆ” ಎಂದು ಸುತ್ತೋಲೆ ಹೇಳಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಹಿಂದೆ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಿತ್ತು.

ರಾಜ್ಯದಲ್ಲಿ ಮಾಲಿನ್ಯದ ಮಟ್ಟ ಹದಗೆಡುತ್ತಿರುವ ನಡುವೆ ದೈಹಿಕ ತರಗತಿಗಳಿಗೆ ಅನುಮತಿ ನೀಡಿದ್ದಕ್ಕಾಗಿ ಎಎಪಿ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಶಾಲೆಗಳನ್ನು ಪುನಃ ತೆರೆಯುವಂತೆ ಒತ್ತಾಯಿಸಿ ದೆಹಲಿಯ ಪೋಷಕರು ಕಳೆದ ವಾರ ಟ್ವಿಟರ್ ಅಭಿಯಾನ ನಡೆಸಿದ್ದರು. ಪೋಷಕರು #backtoschool ಹ್ಯಾಶ್ ಟ್ಯಾಗ್ ಬಳಸಿ ಟ್ವಿಟರ್ ಅಭಿಯಾನ ಮಾಡಿದ್ದು ಶಾಲೆಗಳನ್ನು ಮುಚ್ಚುವ ನಿರ್ಧಾರವು ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Omicron  ದೆಹಲಿಯಲ್ಲಿ ಒಮಿಕ್ರಾನ್ ರೂಪಾಂತರಿಯ 10 ಹೊಸ ಪ್ರಕರಣ ಪತ್ತೆ

Published On - 6:46 pm, Fri, 17 December 21

ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ