ಇಬ್ಬರು ವಾಂಟೆಡ್ ಗ್ಯಾಂಗ್​ಸ್ಟರ್​ಗಳನ್ನು ಹತ್ಯೆಗೈದು, ಅಪಹರಣಕ್ಕೊಳಗಾಗಿದ್ದ ಉದ್ಯಮಿಯ ರಕ್ಷಿಸಿದ ಪೊಲೀಸರು

|

Updated on: Nov 30, 2023 | 9:27 AM

ಲುಧಿಯಾನದ ಉದ್ಯಮಿ ಅಪಹರಣದಲ್ಲಿ ಭಾಗಿಯಾಗಿದ್ದ ಇಬ್ಬರು ವಾಂಟೆಡ್​ ಗ್ಯಾಂಗ್​ಸ್ಟರ್​(Gangster)ಗಳನ್ನು ಪಂಜಾಬ್ ಪೊಲೀಸರು ಹತ್ಯೆಗೈದಿದ್ದು, ಅಪಹರಣಕ್ಕೊಳಗಾಗಿದ್ದ ಉದ್ಯಮಿಯನ್ನು ರಕ್ಷಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. 7 ಆರೋಪಿಗಳು ಸಂಭವ್ ಜೈನ್ ಎಂಬ ವ್ಯಕ್ತಿಯನ್ನು ಅಪಹರಿಸಿದ್ದರು. ಗುಂಡಿನ ಚಕಮಕಿ ಬಳಿಕ ಪೊಲೀಸರು ಅವರನ್ನು ರಕ್ಷಿಸಿದ್ದಾರೆ.

ಇಬ್ಬರು ವಾಂಟೆಡ್ ಗ್ಯಾಂಗ್​ಸ್ಟರ್​ಗಳನ್ನು ಹತ್ಯೆಗೈದು, ಅಪಹರಣಕ್ಕೊಳಗಾಗಿದ್ದ ಉದ್ಯಮಿಯ ರಕ್ಷಿಸಿದ ಪೊಲೀಸರು
ಗ್ಯಾಂಗ್​ಸ್ಟರ್
Image Credit source: India TV
Follow us on

ಲುಧಿಯಾನದ ಉದ್ಯಮಿ ಅಪಹರಣದಲ್ಲಿ ಭಾಗಿಯಾಗಿದ್ದ ಇಬ್ಬರು ವಾಂಟೆಡ್​ ಗ್ಯಾಂಗ್​ಸ್ಟರ್​(Gangster)ಗಳನ್ನು ಪಂಜಾಬ್ ಪೊಲೀಸರು ಹತ್ಯೆಗೈದಿದ್ದು, ಅಪಹರಣಕ್ಕೊಳಗಾಗಿದ್ದ ಉದ್ಯಮಿಯನ್ನು ರಕ್ಷಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. 7 ಆರೋಪಿಗಳು ಸಂಭವ್ ಜೈನ್ ಎಂಬ ವ್ಯಕ್ತಿಯನ್ನು ಅಪಹರಿಸಿದ್ದರು. ಗುಂಡಿನ ಚಕಮಕಿ ಬಳಿಕ ಪೊಲೀಸರು ಅವರನ್ನು ರಕ್ಷಿಸಿದ್ದಾರೆ.

ಇಬ್ಬರು ಆರೋಪಿಗಳಾದ ಸಂಜು ಬಹಮಾನ್ ಮತ್ತು ಶುಭಂ ಗೋಪಿ ಪೊಲೀಸರೊಂದಿಗೆ ಕ್ರಾಸ್ ಫೈರಿಂಗ್‌ನಲ್ಲಿ ಸಾವನ್ನಪ್ಪಿದ್ದಾರೆ. ಜತಿನ್, ಪ್ರೇಮ್‌ಜಿತ್, ಆದಿತ್ಯ ಶರ್ಮಾ, ಮಂತೋಷ್ ಮತ್ತು ಮಂದೀಪ್ ಎಂಬ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದಕ್ಕೂ ಮುನ್ನ ಪೊಲೀಸರು ನವೆಂಬರ್ 18 ರಂದು ಐಪಿಸಿಯ ಸೆಕ್ಷನ್ 307, 364 ಎ, 379 ಬಿ2, 148, 148 ಐಪಿಸಿ ಮತ್ತು 25,54,59 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಲೂಧಿಯಾನದ ಟಿಬ್ಬಾ ರಸ್ತೆಯಲ್ಲಿ ಸಂಜೆ 5.50ರ ಸುಮಾರಿಗೆ ಎನ್‌ಕೌಂಟರ್ ನಡೆದಿದ್ದು, ಮೊದಲಿಗೆ ಗ್ಯಾಂಗ್​ಸ್ಟರ್​ಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ನಂತರ ಅವರನ್ನು ಬೆನ್ನಟ್ಟಿದ್ದ ಪೊಲೀಸರು ಟಿಬ್ಬಾ ಸೇತುವೆ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಅವರಿಬ್ಬರೂ ಹತ್ಯೆಗೈದರು ಎಂದು ಅವರು ಚಹಾಲ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: Gangster Tillu Tajpuriya Murder: ತಿಹಾರ್ ಜೈಲಿನಲ್ಲಿ ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ಹತ್ಯೆ

ಗುಂಡಿನ ಚಕಮಕಿಯಲ್ಲಿ ಏರ್ವ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಖಜಿತ್ ಸಿಂಗ್ ಕೂಡ ಗಾಯಗೊಂಡಿದ್ದು, ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ