ಪಂಬಾಜ್ನ ಹಳ್ಳಿಯೊಂದರಲ್ಲಿ ಹೊರಗಿನಿಂದ ಬಂದವರು ಹಾಗೂ ಹಳ್ಳಿಯವರ ಮಧ್ಯೆ ನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ನಡೆಯುತ್ತಲೇ ಇತ್ತು. ಈ ಕಲಹಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಖರಾರ್ ಬಳಿಯ ಜಂಡ್‌ಪುರ್ ಗ್ರಾಮದಲ್ಲಿ, ನೀರು, ವಾಹನ ನಿಲುಗಡೆ ಸೇರಿದಂತೆ ಒಂದಲ್ಲಾ ಒಂದು ವಿಚಾರಕ್ಕೆ ನಿತ್ಯ ಜಗಳಗಳು ನಡೆಯುತ್ತಿದ್ದವು ಹೀಗಾಗಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ.
ಈ ಹಳ್ಳಿಯಲ್ಲಿ ವಾಸಿಸಬೇಕೆಂದರೆ ಧೂಮಪಾನ ಮಾಡುವಂತಿಲ್ಲ, ಮೈ ಕಾಣುವ ಬಟ್ಟೆ ಧರಿಸುವಂತಿಲ್ಲ, ಸರಿಯಾದ ಪರಿಶೀಲನೆ ಇಲ್ಲದೆ ಬಾಡಿಗೆ ಮನೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಕೆಲವು ಪೇಯಿಂಗ್ ಗೆಸ್ಟ್ಗಳು ತಡರಾತ್ರಿ ಗಲಾಟೆ ಮಾಡುವುದು ಅನಗತ್ಯ ವಿವಾದಗಳಿಗೆ ಎಡೆಮಾಡಿ ಕೊಡುತ್ತಿದೆ.
ಅನಗತ್ಯ ವಾದ ವಿವಾದಗಳಿಗೆ ಎಡೆಮಾಡಿಕೊಡುತ್ತಿರುವುದನ್ನು ಗಮನಿಸಿದ ನಿವಾಸಿಗಳು ಗ್ರಾಮದ ಸುರಕ್ಷತೆ ಮತ್ತು ಶಾಂತಿಗೆ ಧಕ್ಕೆ ತರುತ್ತಿದೆ ಎಂದು ಭಾವಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಈ ಹೊಸ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ.
ಮತ್ತಷ್ಟು ಓದಿ:
Nag Panchami 2024 : ಈ ಗ್ರಾಮದ ಮಕ್ಕಳಿಗೆ ಜೀವಂತ ಹಾವುಗಳೇ ಆಟಿಕೆಗಳು
ಹೊರಗಿನವರಿಗೆ ಅವರು ಉಳಿಯಲು ಬಯಸಿದರೆ, ಅವರು ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಲು ನಾವು ಸಾಮೂಹಿಕ ನಿರ್ಧಾರವನ್ನು ಮಾಡಿದ್ದೇವೆ.
ಇಲ್ಲಿ ಸುಮಾರು 500 ವಲಸೆ ಕಾರ್ಮಿಕರಿದ್ದಾರೆ,ಆದರೆ ಯಾರಾದರೂ – ಪಂಜಾಬಿ ಅಥವಾ ಪಂಜಾಬಿ ಅಲ್ಲದವರು – ಅವ್ಯವಸ್ಥೆಯನ್ನು ಸೃಷ್ಟಿಸಲು ಬಯಸಿದರೆ, ಅವರೆಲ್ಲರೂ ನಿಯಮಗಳಿಗೆ ಬದ್ಧರಾಗಿರಬೇಕು, ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ