Pushkar Singh Dhami ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ; ಮೋದಿ ಅಭಿನಂದನೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 04, 2021 | 7:50 PM

Uttarakhand: ಪುಷ್ಕರ್ ಸಿಂಗ್ ಧಾಮಿ ಇಂದು ಧಾಮಿ ಉತ್ತರಾಖಂಡದ 11 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಧಾಮಿ ಅವರು ರಾಜ್ಯದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಒಂದು ದಿನದ ನಂತರ ಪ್ರಮಾಣ ವಚನ ಸ್ವೀಕರಿಸಿದರು.

Pushkar Singh Dhami ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ; ಮೋದಿ ಅಭಿನಂದನೆ
ಪುಷ್ಕರ್ ಸಿಂಗ್ ಧಾಮಿ
Follow us on

ಡೆಹ್ರಾಡೂನ್: ಪುಷ್ಕರ್ ಸಿಂಗ್ ಧಾಮಿ ಭಾನುವಾರ ಡೆಹ್ರಾಡೂನ್‌ನಲ್ಲಿ ಉತ್ತರಾಖಂಡದ ಹನ್ನೊಂದನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶುಕ್ರವಾರ ರಾಜೀನಾಮೆ ನೀಡಿದ್ದ ಗರ್ವಾಲ್ ಸಂಸದ ತೀರತ್ ಸಿಂಗ್ ರಾವತ್ ಅವರ ನಂತರ ಧಾಮಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಧಾಮಿ ಅವರು ರಾಜ್ಯದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಒಂದು ದಿನದ ನಂತರ ಪ್ರಮಾಣ ವಚನ ಸ್ವೀಕರಿಸಿದರು. ಧಾಮಿ ಖತಿಮಾದಲ್ಲಿ ಎರಡು ಬಾರಿ ಶಾಸಕರಾಗಿದ್ದಾರೆ.

ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿನಂದಿಸಿದ್ದಾರೆ. ಹೊಸ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆಗಳು. ಉತ್ತರಾಖಂಡದ ಪ್ರಗತಿ ಮತ್ತು ಸಮೃದ್ಧಿಯತ್ತ ಕೆಲಸ ಮಾಡುತ್ತಿರುವಾಗ ಈ ತಂಡಕ್ಕೆ ಶುಭಾಶಯಗಳು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


ಇಂದು ಧಾಮಿ ಉತ್ತರಾಖಂಡದ 11 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆಡಳಿತಾರೂಢ ಬಿಜೆಪಿಯ ಸಂಸದರು, ಶಾಸಕರು ಮತ್ತು ಕಾರ್ಯಕರ್ತರು ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಡೆಹ್ರಾಡೂನ್‌ನ ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರು ಪ್ರಮಾಣ ವಚನ ಬೋಧಿಸಿದರು.

ಧಾಮಿ ಜತೆಗೆ ಸತ್ಪಾಲ್ ಮಹಾರಾಜ್, ಹರಾಕ್ ಸಿಂಗ್ ರಾವತ್, ಬನ್ಸಿಧರ್ ಭಗತ್, ಯಶ್ಪಾಲ್ ಆರ್ಯ, ಬಿಶನ್ ಸಿಂಗ್ ಚುಫಲ್, ಸುಬೋಧ್ ಯುನಿಯಲ್, ಅರವಿಂದ್ ಪಾಂಡೆ, ಗಣೇಶ್ ಜೋಶಿ, ಧನ್ ಸಿಂಗ್ ರಾವತ್, ರೇಖಾ ಆರ್ಯ, ಮತ್ತು ಯತೀಶ್ವರಾನಂದ್ ಅವರು ಹೊಸ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 45 ನೇ ವಯಸ್ಸಿನ ಧಾಮಿ ಉತ್ತರಾಖಂಡದ ಕಿರಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಉಧಮ್ ಸಿಂಗ್ ನಗರ ಜಿಲ್ಲೆಯ ಖತಿಮಾದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.


ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿ ಧಾಮಿ ಅವರು, ನಾವು ಯುವಕರ ನಡುವೆ ಕೆಲಸ ಮಾಡುತ್ತಿದ್ದು ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದಾಗಿ ಎಂದು ಹೇಳಿದರು. ಕೊವಿಡ್ ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ನಾವು ಅವರಿಗೆ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತೇವೆ. ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಯುವಕರನ್ನು ನೇಮಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಧಾಮಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿರುವ ಬಗ್ಗೆ ಶಾಸಕರ ಅಸಮಾಧಾನದ ಬಗ್ಗೆ ಕೇಳಿದಾಗ ನಾನು ವಯಸ್ಸಿನಲ್ಲಿ ಕಿರಿಯವನು, ಎಲ್ಲರೂ ಅನುಭವಿಗಳು. ನನಗೆ ಈ ಅವಕಾಶವನ್ನು ನೀಡಿದ ನನ್ನ ಪಕ್ಷಕ್ಕೆ, ಕಿರಿಯ ಮತ್ತು ಹಿರಿಯ ಸದಸ್ಯರನ್ನು ಒಟ್ಟಿಗೆ ಕರೆದೊಯ್ಯುವುದರ ಜತೆಗೆ ಕರ್ತವ್ಯ ಪಕ್ಷದ ಮತ್ತು ರಾಜ್ಯದ ಕಾರ್ಯಗಳು ಮುನ್ನಡೆಸುವುದು ನನ್ನ ಕರ್ತವ್ಯ ಎಂದಿದ್ದಾರೆ.

ಸಮಸ್ಯೆಗಳಿವೆ ಆದರೆ ಪ್ರವಾಸೋದ್ಯಮವನ್ನು ಪುನರಾರಂಭಿಸುವುದು ಮತ್ತು ರಾಜ್ಯದಲ್ಲಿ ಚಾರ್ ಧಾಮ್ ಯಾತ್ರೆ ನಮಗೆ ಸಂಪೂರ್ಣವಾಗಿ ಅವಶ್ಯಕವಾಗಿದೆ ಎಂದು ಧಾಮಿ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ ಹೊಸ ಸಿಎಂ ಪುಷ್ಕರ್​ ಸಿಂಗ್​ ದಾಮಿ ಟ್ವೀಟ್ ಮಾಡಿದ್ದ ಅಖಂಡ ಭಾರತದ ಭೂಪಟದಲ್ಲಿ ಲಡಾಖ್, ಪಿಒಕೆ ಇರಲಿಲ್ಲ

(Pushkar Singh Dhami took oath as the eleventh CM of Uttarakhand PM Narendra Modi congratulates)