ಪಕ್ಷದ ವೈಫಲ್ಯಗಳಿಗೆ ಕಾಂಗ್ರೆಸ್ ನರಸಿಂಹರಾವ್ ಅವರನ್ನು ಬಲಿಪಶುವಾಗಿಸಿದೆ: ಪಿವಿ ನರಸಿಂಹ ರಾವ್ ಮೊಮ್ಮಗ ವಾಗ್ದಾಳಿ

|

Updated on: Feb 09, 2024 | 5:55 PM

ನರೇಂದ್ರ ಮೋದಿಯವರು ರಾಷ್ಟ್ರೀಯ ನಾಯಕರಾಗಿ ಮತ್ತು ಇಡೀ ಪ್ರಪಂಚದ ನಾಯಕರಾಗಿ, ಇತರ ನಾಯಕರನ್ನು ನಿರಂತರವಾಗಿ ಗುರುತಿಸುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ ಇದು ಹೆಮ್ಮೆ, ಇದು ನಮಗೆ ಗೌರವ ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ಭಾವುಕನಾಗಿದ್ದೇನೆ. ಏಕೆಂದರೆ ಭಾರತ ರತ್ನ ಪ್ರಶಸ್ತಿ ವಿಳಂಬವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ಎಂದು ಪಿವಿ ನರಸಿಂಹ ರಾವ್ ಮೊಮ್ಮಗ, ಬಿಜೆಪಿ ನಾಯಕ ಸುಭಾಷ್ ಹೇಳಿದ್ದಾರೆ.

ಪಕ್ಷದ ವೈಫಲ್ಯಗಳಿಗೆ ಕಾಂಗ್ರೆಸ್ ನರಸಿಂಹರಾವ್ ಅವರನ್ನು ಬಲಿಪಶುವಾಗಿಸಿದೆ: ಪಿವಿ ನರಸಿಂಹ ರಾವ್ ಮೊಮ್ಮಗ ವಾಗ್ದಾಳಿ
ಎನ್ ವಿ ಸುಭಾಷ್
Follow us on

ದೆಹಲಿ ಫೆಬ್ರುವರಿ 09 : ದಿವಂಗತ ಪ್ರಧಾನಿ ಪಿ.ವಿ.ನರಸಿಂಹರಾವ್‌ಗೆ (PV Narasimha Rao) ಕೇಂದ್ರ ಸರ್ಕಾರ ಭಾರತ ರತ್ನ (Bharat Ratna) ಘೋಷಿಸಿದ ಬೆನ್ನಲ್ಲೇ ಅವರ ಮೊಮ್ಮಗ ಎನ್‌ವಿ ಸುಭಾಷ್‌ (NV Subhash) ಅವರು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ತಮ್ಮ ಪಕ್ಷದ ವೈಫಲ್ಯಗಳಿಗೆ ರಾವ್ ಅವರನ್ನು ಬಲಿಪಶುವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ ಸುಭಾಷ್.  ಪಿ.ವಿ.ನರಸಿಂಹರಾವ್ ಅವರು ಕಾಂಗ್ರೆಸ್ ಪಕ್ಷದವರಾಗಿದ್ದರೂ ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದ್ದಾರೆ. ಈಗ ನಾನು ಯುಪಿಎ ಸರಕಾರವನ್ನು ಅದರಲ್ಲೂ ಗಾಂಧಿ ಕುಟುಂಬವನ್ನು ದೂಷಿಸುತ್ತೇನೆ. 2004 ರಿಂದ 2014 ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತ ರತ್ನ ಬಿಟ್ಟುಬಿಡಿ, ಯಾವುದೇ ಪ್ರಶಸ್ತಿಗಳನ್ನು ಬಿಟ್ಟುಬಿಡಿ, ಕಾಂಗ್ರೆಸ್ ಪಕ್ಷದ ವೈಫಲ್ಯಗಳಿಗೆ ನರಸಿಂಹರಾವ್ ಅವರನ್ನು ಬಲಿಪಶುವಾಗಿಸಲು ಗಾಂಧಿ ಕುಟುಂಬವು ಬಹಳ ಪ್ರಮುಖ ಪಾತ್ರ ವಹಿಸಿದೆ ಎಂದು ಬಿಜೆಪಿ ನಾಯಕರೂ ಆಗಿರುವ ಸುಭಾಷ್ ಹೇಳಿದ್ದಾರೆ.

ನರೇಂದ್ರ ಮೋದಿಯವರು ರಾಷ್ಟ್ರೀಯ ನಾಯಕರಾಗಿ ಮತ್ತು ಇಡೀ ಪ್ರಪಂಚದ ನಾಯಕರಾಗಿ, ಇತರ ನಾಯಕರನ್ನು ನಿರಂತರವಾಗಿ ಗುರುತಿಸುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ ಇದು ಹೆಮ್ಮೆ, ಇದು ನಮಗೆ ಗೌರವ ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ಭಾವುಕನಾಗಿದ್ದೇನೆ. ಏಕೆಂದರೆ ಭಾರತ ರತ್ನ ಪ್ರಶಸ್ತಿ ವಿಳಂಬವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ಎಂದು ಅವರು ಹೇಳಿದರು.

ಪಿವಿ ನರಸಿಂಹರಾವ್ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಇಂದು (ಶುಕ್ರವಾರ) ಮಾಜಿ ಪ್ರಧಾನಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಘೋಷಿಸಿದರು.
ಒಬ್ಬ ಪ್ರಖ್ಯಾತ ವಿದ್ವಾಂಸ ಮತ್ತು ರಾಜನೀತಿಜ್ಞರಾಗಿ, ನರಸಿಂಹ ರಾವ್ ಗರು ಭಾರತಕ್ಕೆ ವಿವಿಧ ಹುದ್ದೆಗಳಲ್ಲಿ  ಸೇವೆ ಸಲ್ಲಿಸಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಹಲವು ವರ್ಷಗಳ ಕಾಲ ಸಂಸತ್ ಮತ್ತು ವಿಧಾನಸಭೆ ಸದಸ್ಯರಾಗಿ ಅವರು ಮಾಡಿದ ಕೆಲಸಗಳನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ದೇಶದ ಸಮೃದ್ಧಿ ಮತ್ತು ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು. ಪ್ರಧಾನ ಮಂತ್ರಿಯಾಗಿ ನರಸಿಂಹ ರಾವ್ ಅವರ ಅಧಿಕಾರಾವಧಿಯು ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆದು ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಉತ್ತೇಜಿಸುವ ಮಹತ್ವದ ಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಇದಲ್ಲದೆ, ಭಾರತದ ವಿದೇಶಾಂಗ ನೀತಿ, ಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಳು ಅವರ ಬಹುಮುಖಿ ಪರಂಪರೆಯನ್ನು ಒತ್ತಿಹೇಳುತ್ತವೆ, ಅವರು ವಿಮರ್ಶಾತ್ಮಕ ರೂಪಾಂತರಗಳ ಮೂಲಕ ಭಾರತವನ್ನು ಮುನ್ನಡೆಸಿದರು ಮಾತ್ರವಲ್ಲದೆ ಅದರ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿದರು” ಎಂದು ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಇದೇ ವೇಳೆ ತಮ್ಮ ನಾಯಕರಿಗೆ ಗೌರವ ನೀಡದ ಕಾಂಗ್ರೆಸ್ ವಿರುದ್ಧ ಬಿಜೆಪಿ ಪಕ್ಷ ವಾಗ್ದಾಳಿ ನಡೆಸಿದೆ. “ಆರ್ಥಿಕ ಉದಾರೀಕರಣದ ಅಡಿಪಾಯ ಹಾಕಿದ ಮತ್ತು ಬಹುಭಾಷಾ ವ್ಯಕ್ತಿಯಾಗಿದ್ದ ತಮ್ಮ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಪಾರ್ಥೀವ ಶರೀರವನ್ನು ತಮ್ಮ ಕಚೇರಿಯೊಳಗೆ ತರಲು ಸಹ ಕಾಂಗ್ರೆಸ್ ಬಿಡಲಿಲ್ಲ. ಅವರಿಗೆ ಈಗ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದ ಎಂದು ಬಿಜೆಪಿ ಮುಖಂಡ ಕೆ.ಪಿ.ಮೌರ್ಯ ಹೇಳಿದ್ದಾರೆ.

ಕಾಂಗ್ರೆಸ್ ಗಾಂಧಿ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತದೆ ಎಂದು ಕೇಂದ್ರ ಸಚಿವ ಕೈಲಾಶ್ ಚೌಧರಿ ಹೇಳಿದ್ದಾರೆ.ಇಂದು ಖಂಡಿತವಾಗಿಯೂ ರೈತರಿಗೆ ಸಮರ್ಪಿತವಾಗಿದೆ. ಭಾರತದ ರೈತರಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ರೈತರ ಮೆಸ್ಸಿಹ, ಚೌಧರಿ ಚರಣ್ ಸಿಂಗ್ ಮತ್ತು ಸ್ವಾಮಿನಾಥನ್ ವರದಿಯನ್ನು ತಯಾರಿಸಿದ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರನ್ನು ಗೌರವಿಸಲಾಗಿದೆ. ನಾನು ಪ್ರಧಾನಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ ಅವರು.

ಇದನ್ನೂ ಓದಿ: ನರಸಿಂಹ ರಾವ್ ಸೇರಿ ಮೂವರಿಗೆ ಭಾರತ ರತ್ನ; ನಾನಿದನ್ನು ಸ್ವಾಗತಿಸುತ್ತೇನೆ: ಸೋನಿಯಾ ಗಾಂಧಿ

ಇದೇ ವೇಳೆ, ಮನಮೋಹನ್ ಸಿಂಗ್ ಅವರನ್ನು ಬಿಜೆಪಿ ಕೈ ಬಿಟ್ಟಿದೆ ಎಂದು ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಹೇಳಿದ್ದಾರೆ. “ದೇಶದ ಅತಿದೊಡ್ಡ ಆರ್ಥಿಕ ಸುಧಾರಣೆಯನ್ನು ತಂದ ಪಿವಿ ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡುವುದು ಒಳ್ಳೆಯದು, ಆದರೆ, ಆ ತಂಡದಲ್ಲಿ ಮನಮೋಹನ್ ಸಿಂಗ್ ಕೂಡ ಇದ್ದರು.  ಪಿವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನವನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Fri, 9 February 24