ದೆಹಲಿಯಿಂದ ದೋಹಾಕ್ಕೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ; ಹೊಗೆಯಿಂದಾಗಿ ಆತಂಕ

| Updated By: Lakshmi Hegde

Updated on: Mar 21, 2022 | 4:12 PM

ಫ್ಲೈಟ್​ಅವೇರ್​ ಎಂಬ ವಿಮಾನ ಟ್ರ್ಯಾಕಿಂಗ್​ ವೆಬ್​ಸೈಟ್​ ಪ್ರಕಾರ ಈ ಕ್ಯೂಆರ್​ 579 ವಿಮಾನ ಮುಂಜಾನೆ 3.50ಕ್ಕೆ ದೆಹಲಿಯಿಂದ ಹೊರಟಿತ್ತು. ನಂತರ ಮುಂಜಾನೆ 5.45ರ ಹೊತ್ತಿಗೆ ಕರಾಚಿಯಲ್ಲಿ ತುರ್ತು ಭೂಸ್ಪರ್ಶವಾಗಿದೆ.

ದೆಹಲಿಯಿಂದ ದೋಹಾಕ್ಕೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ; ಹೊಗೆಯಿಂದಾಗಿ ಆತಂಕ
ಪ್ರಾತಿನಿಧಿಕ ಚಿತ್ರ
Follow us on

ಕತಾರ್​ ಏರ್​ವೇ  ವಿಮಾನಯಾನ ಸಂಸ್ಥೆಯ ದೆಹಲಿ-ದೋಹಾ ವಿಮಾನವೊಂದು ಇಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡ್ ಆಗಿದೆ. ದೆಹಲಿಯಿಂದ ಕತಾರ್​ನ ದೋಹಾಕ್ಕೆ ತೆರಳುತ್ತಿದ್ದ QR579 ಎಂಬ ಫ್ಲೈಟ್​​ನ ಕಾರ್ಗೋ ಸ್ಥಳ (ಸರಕು ಇಡುವ ಸ್ಥಳ)ದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ಲ್ಯಾಂಡ್​ ಮಾಡಲಾಗಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಇನ್ನೊಂದು ವಿಮಾನದ ಮೂಲಕ ಕಳಿಸಲಾಗಿದೆ ಎಂದು ವರದಿಯಾಗಿದೆ. 

ಫ್ಲೈಟ್​ಅವೇರ್​ ಎಂಬ ವಿಮಾನ ಟ್ರ್ಯಾಕಿಂಗ್​ ವೆಬ್​ಸೈಟ್​ ಪ್ರಕಾರ ಈ ಕ್ಯೂಆರ್​ 579 ವಿಮಾನ ಮುಂಜಾನೆ 3.50ಕ್ಕೆ ದೆಹಲಿಯಿಂದ ಹೊರಟಿತ್ತು. ನಂತರ ಮುಂಜಾನೆ 5.45ರ ಹೊತ್ತಿಗೆ ಕರಾಚಿಯಲ್ಲಿ ತುರ್ತು ಭೂಸ್ಪರ್ಶವಾಗಿದೆ. ಅಂದರೆ ಟೇಕ್​ಆಫ್​ ಆಗಿ ಹೊರಟು 1.15 ತಾಸಿನಲ್ಲೇ ಎಮರ್ಜನ್ಸಿ ಲ್ಯಾಂಡ್​ ಆಗಿದೆ. ಹಾಗೊಮ್ಮೆ ಇಲ್ಲಿ ಸಮಸ್ಯೆ ಕಾಣಿಸದೆ ಇದ್ದಿದ್ದರೆ ಬೆಳಗ್ಗೆ 7.15ರ ಹೊತ್ತಿಗೆ ದೋಹಾ ತಲುಪಿರುತ್ತಿತ್ತು.   ಈ ವಿಮಾನದಲ್ಲಿ ಹೊಗೆ ಕಾಣಿಸಿಕೊಳ್ಳಲು ಕಾರಣವೇನು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಚಿಕ್ಕಪ್ರಮಾಣದಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನ ಲ್ಯಾಂಡ್ ಮಾಡಲಾಗಿದ್ದು, ಯಾವುದೇ ದೊಡ್ಡ ಅನಾಹುತ ಆಗಿಲ್ಲ. ಆದರೆ ಪ್ರಯಾಣಿಕರಿಗೆ ಆದ ಅನನುಕೂಲಕ್ಕೆ ಕ್ಷಮೆ ಕೇಳುತ್ತೇವೆ ಎಂದು  ಕತಾರ್ ಏರ್​ ವೇ ಹೇಳಿದೆ.

ಇಂದು ಚೀನಾದಲ್ಲಿ ದೊಡ್ಡಮಟ್ಟದಲ್ಲಿ ವಿಮಾನ ದುರಂತ ಸಂಭವಿಸಿದೆ. ಸುಮಾರು 133 ಪ್ರಯಾಣಿಕರಿದ್ದ ಬೋಯಿಂಗ್​ ವಿಮಾನ ಪರ್ವತ ಪ್ರದೇಶದಲ್ಲಿ ಪತನಗೊಂಡಿದ್ದು, ಸದ್ಯ ಮೃತಪಟ್ಟವರ ಸಂಖ್ಯೆ ವರದಿಯಾಗಿಲ್ಲ. ಆದರೆ ವಿಮಾನ ಪತನಗೊಂಡ ಸ್ಥಳದಲ್ಲಿ ಬೆಂಕಿ ಉರಿದು, ಹೊಗೆ ಎದ್ದಿದ್ದು, ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ತೀರ ಕಡಿಮೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: Video: ಚೀನಾದಲ್ಲಿ 133 ಪ್ರಯಾಣಿಕರಿದ್ದ ವಿಮಾನ ಪತನ; ಪರ್ವತಗಳ ಮಧ್ಯೆ ಅಪಘಾತಕ್ಕೀಡಾದ ಫ್ಲೈಟ್​

Published On - 4:11 pm, Mon, 21 March 22